ನೆಲಕ್ಕುರುಳಿದ ಟೊಳ್ಳು ಗುಲ್‍ಮೊಹರ್; ಬೈಕ್ ಸವಾರ ಸ್ವಲ್ಪದರಲ್ಲೇ ಪಾರು
ಮೈಸೂರು

ನೆಲಕ್ಕುರುಳಿದ ಟೊಳ್ಳು ಗುಲ್‍ಮೊಹರ್; ಬೈಕ್ ಸವಾರ ಸ್ವಲ್ಪದರಲ್ಲೇ ಪಾರು

June 24, 2020

ಮೈಸೂರು,ಜೂ.23(ಪಿಎಂ)- ಟೊಳ್ಳು ಬಿದ್ದಿದ್ದ ಗುಲ್ ಮೊಹರ್ ಮರವೊಂದು ರಸ್ತೆಗೆ ಏಕಾಏಕಿ ಉರುಳಿ ಬಿದ್ದಿದ್ದರಿಂದ ಅದೇ ಸಮಯದಲ್ಲಿ ಆ ಮಾರ್ಗದಲ್ಲಿ ಬಂದ ಬೈಕ್ ಸವಾರರೊಬ್ಬರು ಗಾಯಗೊಂಡರು. ಆದರೆ, ಕೂದಲೆಳೆ ಅಂತರದಲ್ಲಿ ಪ್ರಾಣಾ ಪಾಯದಿಂದ ಪಾರಾದರು. ಅಗ್ರಹಾರ ವೃತ್ತದ ಸಮೀಪ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಮರದ ಬುಡದಿಂದ ಮೂರಡಿ ಮೇಲೆ ಪೊಟರೆ ಬಿದ್ದಿತ್ತು. ಈ ಭಾಗ ಸೋಮ ವಾರ ಸಂಜೆ ಮಳೆಗೆ ನೆನೆದಿದ್ದರಿಂದ ಸಡಿಲ ಗೊಂಡಿತ್ತು. ಪರಿಣಾಮ ಮರುದಿನ ಬೆಳಿಗ್ಗೆ ನೆಲಕ್ಕುರಳಿದೆ. ಮರ ಬೀಳುವಾಗ ಕೊಂಬೆ ಯೊಂದು ಬೈಕ್‍ನಲ್ಲಿ ಸಾಗುತ್ತಿದ್ದ ಕುಮಾರ್ ಎಂಬುವರಿಗೆ ತಾಗಿ ಅವರು ರಸ್ತೆಗುರುಳಿ ದರು.

ಅವರ ಕೈ-ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ವೇಳೆ ಮರದ ಪಕ್ಕದಲ್ಲಿದ್ದ ಖಾಲಿ ವಿದ್ಯುತ್ ಕಂಬವೂ ನೆಲ ಕ್ಕುರಳಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪಾಲಿಕೆಯ `ಅಭಯ’ ತಂಡ ಹಾಗೂ ತೋಟಗಾರಿಕೆ ವಿಭಾಗದ ಸಿಬ್ಬಂದಿ ಕೊಂಬೆ ತೆರವುಗೊಳಿಸುತ್ತಿದ್ದಾಗಲೇ ಮರದ ಮತ್ತೊಂದು ಭಾಗವೂ ನೆಲಕ್ಕುರಳಿದೆ. ಕಾರ್ಯಾಚರಣೆ ಯಲ್ಲಿ ನಿರತರಾಗಿದ್ದವರು ತಕ್ಷಣ ಪಕ್ಕಕ್ಕೆ ಸರಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಬಳಿಕ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ, ವಾರ್ಡಿನ (51) ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಹಾಗೂ ಪಾಲಿಕೆ ತೋಟಗಾರಿಕೆ ವಿಭಾಗದ ಹಿರಿಯ ಸಹಾ ಯಕ ನಿರ್ದೇಶಕ ಹೆಚ್.ಕೆ.ಮಣಿಕಂಠ ಅವರ ನೇತೃತ್ವದಲ್ಲಿ ಮರ ತೆರವು ಕಾರ್ಯಾ ಚರಣೆ ನಡೆಸಲಾಯಿತು.

 

Translate »