ಸಿಎಂ ಭೇಟಿಗೆ ನಾಲ್ವಡಿ ಏಕಪ್ರತಿಮೆ ಹೋರಾಟ ಸಮಿತಿ ನಿರ್ಣಯ
ಮೈಸೂರು

ಸಿಎಂ ಭೇಟಿಗೆ ನಾಲ್ವಡಿ ಏಕಪ್ರತಿಮೆ ಹೋರಾಟ ಸಮಿತಿ ನಿರ್ಣಯ

June 24, 2020

ಮೈಸೂರು, ಜೂ.23(ಎಂಕೆ)- ಕೆಆರ್‍ಎಸ್ ಆವರಣ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕ ಪತ್ರಿಮೆ ನಿರ್ಮಾಣ ಕುರಿತು ವಾರದೊಳಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಕ್ಕೆ ಹಾಗೂ ಜೂ.30 ರಂದು ಕೆಆರ್‍ಎಸ್ ಡ್ಯಾಂ ಎದುರು ಧರಣಿ ನಡೆಸುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪತ್ರಿಮೆ ಹೋರಾಟ ಸಮಿತಿ ಸಭೆ ತೀರ್ಮಾನ ಕೈಗೊಂಡಿತು.

ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪ್ರೊ.ನಂಜರಾಜ ಅರಸ್ ಮಾತನಾಡಿ, ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡ ಲಾಗಿದೆ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಹಗಲಿ ರುಳು ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪತ್ರಿಮೆಗೆ ಸರಿಸಮನಾಗಿ ಸರ್‍ಎಂವಿ ಪತ್ರಿಮೆ ನಿರ್ಮಾಣ ಸರಿಯಲ್ಲ. ಬರೀ ಸುಳ್ಳುಗಳನ್ನು ವೈಭವೀ ಕರಣ ಮಾಡಲಾಗಿದೆ. ಈ ನಿಟ್ಟಿನಲ್ಲಿ ಧರಣಿ ಕೈಗೊಳ್ಳು ವುದು ಸೂಕ್ತ ಎಂದರು.

ಸರ್ ಎಂ.ವಿಶ್ವೇಶ್ವರಯ್ಯ ಅವÀರನ್ನು ಯಾರು ವಿರೋ ಧಿಸುತ್ತಿಲ್ಲ. ಮೈಸೂರು ಸಂಸ್ಥಾನಕ್ಕೆ ಅವರು ನೀಡಿದ ಕೊಡುಗೆ ಬಗ್ಗೆ ಗೌರವವೂ ಇದೆ. ಆದರೆ ನಿಜವಾಗಿ ಕಷ್ಟಪÀಟ್ಟವರಿಗೆ, ಅಭಿವೃದ್ಧಿಗೆ ಹಣ ಸುರಿದವರಿಗೆ ಗೌರವ ಸಲ್ಲಬೇಕೇ ವಿನಾ, 3 ವರ್ಷ ಕೆಲಸ ಮಾಡಿದವರಿಗಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

ರೈತ ಮುಖಂಡ ಅಶ್ವಥ್ ನಾರಾಯಣ ಮಾತ ನಾಡಿ, ನಾಲ್ವಡಿ ಏಕ ಪ್ರತಿಮೆ ನಿರ್ಮಾಣ ಕುರಿತು ಬೆರಳೆಣಿಕೆ ಮಂದಿ ಮಾತ್ರ ಹೋರಾಡುತ್ತಿದ್ದಾರೆ ಎಂದು ಕೆಲವರು ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವುದರಿಂದ ಸರ್ಕಾರದ ನಿಯಮಗಳನ್ನು ಮೀರಬಾರದು ಎಂಬ ದೃಷ್ಟಿಯಿಂದ ಕಡಿಮೆ ಜನ ಹೋರಾಟದಲ್ಲಿದ್ದೇವೆ. ಏಕಪ್ರತಿಮೆ ನಿರ್ಮಾಣ ಹೋರಾಟಕ್ಕೆ ಹಲವು ಸಂಘ -ಸಂಸ್ಥೆಗಳು, ಪ್ರಗತಿಪರ ಚಿಂತಕರು, ರೈತ ಸಂಘ ಟನೆಗಳ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಹೋರಾಡುತ್ತೇವೆ ಎಂದರು. ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸ ಕೋಟೆ ಬಸವರಾಜು ಮಾತನಾಡಿದರು. ಸಭೆಯಲ್ಲಿ ಹೋರಾಟ ಸಮಿತಿ ಸಂಚಾಲಕ ಅರವಿಂದ ಶರ್ಮಾ, ರೈತ ಮುಖಂಡ ಟಿ.ಎಂ.ವಿಜಯ ದೇವರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.

Translate »