`ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಆರೋಪ ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಪ್ರತಿಭಟನೆ
ಮೈಸೂರು

`ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಆರೋಪ ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಪ್ರತಿಭಟನೆ

February 24, 2021

ಮೈಸೂರು, ಫೆ.23(ಪಿಎಂ)- ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ `ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವ ಹೇಳನ ಮಾಡಿರುವ ದೃಶ್ಯಗಳಿವೆ ಎಂದು ಆರೋಪಿಸಿ ಹಾಗೂ ಆ ದೃಶ್ಯಗಳನ್ನು ತೆಗೆಯುವವರೆಗೆ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬ್ರಾಹ್ಮಣ ಸಮುದಾಯದ ಭಾವನೆಗೆ ಧಕ್ಕೆ ತರುವಂತೆ ಪುರೋಹಿತರ ಮೇಲಿನ ಅವ ಹೇಳನ ದೃಶ್ಯ ಹಾಗೂ ಸಂಭಾಷಣೆಗಳು `ಪೊಗರು’ ಸಿನಿಮಾದಲ್ಲಿ ಇದೆ. ಆ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದು, ಪೆÇಗರು ಚಿತ್ರ ತಂಡ ಮತ್ತು ಈ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಎಲ್ಲರ ಹಿತಕ್ಕಾಗಿ ದೇವರ ಪೂಜಾ ಕೈಂಕರ್ಯದಲ್ಲಿ ತೊಡಗುವ ಪುರೋಹಿ ತರ ಬಗ್ಗೆ ನಂದಕಿಶೋರ ನಿರ್ದೇಶನದ `ಪೊಗರು’ ಚಿತ್ರದಲ್ಲಿ ಅವಹೇಳನ ದೃಶ್ಯಗಳಿವೆ. ಜನಿವಾರ ಬ್ರಾಹ್ಮಣರ ಆಚರಣೆ ಮತ್ತು ನಂಬಿಕೆಯ ಪ್ರತೀಕ. ಇದನ್ನು ಧರಿಸಿದ್ದ ಪುರೋಹಿತನ ಭುಜದ ಮೇಲೆ ಕಾಲಿಡುವ ದೃಶ್ಯದ ಮೂಲಕ ಬ್ರಾಹ್ಮಣ ಸಮುದಾಯ ವನ್ನು ಅವಹೇಳನ ಮಾಡಲಾಗಿದೆ. ಇತ್ತೀ ಚಿನ ದಿನಗಳಲ್ಲಿ ಸೆನ್ಸಾರ್ ಮಂಡಳಿಯ ಕರ್ತವ್ಯ ಲೋಪದಿಂದ ಇಂತಹ ದೃಶ್ಯಗಳಿಗೆ ಕತ್ತರಿ ಬೀಳುತ್ತಿಲ್ಲ. ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವ ದೃಶ್ಯ ಒಳಗೊಂ ಡಂತೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಅಧಿಕಾರಿಗಳನ್ನು ಈ ಕೂಡಲೇ ಅಮಾನತು ಮಾಡಬೇಕು. ಅವಹೇಳನಕಾರಿ ಅಂಶಗಳನ್ನು ತೆಗೆದು ಆ ಬಳಿಕವಷ್ಟೇ ಸಿನಿಮಾ ಪ್ರದರ್ಶನಕ್ಕೆ ಅವ ಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮೈಸೂರಿನ ಎಲ್ಲಾ ವಿಪ್ರ ಸಂಘ ಟನೆಗಳಿಂದ ಒಕ್ಕೊರಲಿನಿಂದ ಇಂದು ಪ್ರತಿ ಭಟನೆ ಮಾಡುತ್ತಿದ್ದೇವೆ. `ಪೊಗರು’ ಸಿನಿಮಾ ದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ಬ್ರಾಹ್ಮಣ ಸಮು ದಾಯದಲ್ಲಿ ಒಗ್ಗಟ್ಟು ಇಲ್ಲ. ಏನೇ ಅಪಮಾನ ಮಾಡಿದರೂ ಯಾರೂ ಕೇಳುವುದಿಲ್ಲ ಎಂಬ ಭಾವನೆ ಕೆಲವರಲ್ಲಿದೆ. ಈ ಹಿನ್ನೆಲೆ ಯಲ್ಲಿಯೇ ಇಂತಹ ಬೆಳವಣಿಗೆಗಳು ಜರುತ್ತಿವೆ. ಆದರೆ ನಮ್ಮಲ್ಲಿ ಒಗ್ಗಟ್ಟಿದ್ದು, ಇಂದು ತ್ರಿಮತಸ್ಥ ಬ್ರಾಹ್ಮಣರು ಸೇರಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಸಿನಿಮಾದ ಈ ಅವಹೇಳನ ಕೇವಲ ಬ್ರಾಹ್ಮಣರಿಗೆ ಮಾಡಿದ ಅಪಮಾನವಲ್ಲ. ಇಡೀ ಹಿಂದೂ ಸಮುದಾಯಕ್ಕೆ ಮಾಡಿದ ಅಪಮಾನ ಇದು. ಮಾಡುವುದನ್ನೆಲ್ಲಾ ಮಾಡಿ ತಪ್ಪಾಯಿತು ಎಂದರೆ ಸುಮ್ಮ ನಾಗುತ್ತಾರೆ ಎಂಬ ಭಾವನೆ ಇದೆ. ಆದರೆ ಅದು ಸುಳ್ಳು. ತಾತ್ಕಾಲಿಕವಾಗಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿ, ಅವಹೇಳನ ದೃಶ್ಯಗಳನ್ನು ತೆಗೆದು ಬಳಿಕ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಸೆನ್ಸಾರ್ ಮಂಡಳಿ ಅಧಿಕಾರಿಗಳು ಈ ಅವಹೇಳನ ದೃಶ್ಯ ನೋಡಿಯೂ ಪ್ರದರ್ಶನಕ್ಕೆ ಅನುಮತಿ ನೀಡಿ ದ್ದಾರೆ. ಇದು ಖಂಡನಾರ್ಹ. ಚಿತ್ರತಂಡ ಕೇವಲ ಕ್ಷಮಾಪಣೆ ಕೇಳಿದರೆ ಸಾಲದು. ಜೊತೆಗೆ ಸದರಿ ದೃಶ್ಯಗಳನ್ನು ತೆಗೆಯಲೇ ಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡರಾದ ನಂ.ಶ್ರೀಕಂಠಕುಮಾರ್, ಸಿ.ವಿ.ಪಾರ್ಥ ಸಾರಥಿ, ಹೊಮ್ಮ ಮಂಜುನಾಥ್, ವಿಜಯಕುಮಾರ್, ಮುಳ್ಳೂರು ಸುರೇಶ್, ರಾಕೇಶ್ ಭಟ್, ಚಕ್ರಪಾಣಿ, ಅಪೂರ್ವ ಸುರೇಶ್, ಪ್ರಶಾಂತ್, ಗುರುಪ್ರಸಾದ್, ಸುಮಂತ್ ಶಾಸ್ತ್ರಿ, ಜಯಸಿಂಹ, ರಂಗ ನಾಥ್, ಕೆ.ಎಂ.ನಿಶಾಂತ್, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್. ಶ್ರೀಧರ್‍ಮೂರ್ತಿ, ಪ್ರಧಾನ ಕಾರ್ಯ ದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನೆ ಮುಖಂಡರಾದ ಅಜಯ್‍ಶಾಸ್ತ್ರಿ, ಮುಳ್ಳೂರು ಗುರುಪ್ರಸಾದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

Translate »