ವಿದ್ಯುತ್ ಉಳಿತಾಯ, ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ
ಮೈಸೂರು

ವಿದ್ಯುತ್ ಉಳಿತಾಯ, ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ

February 24, 2021

ಮೈಸೂರು,ಫೆ.23-ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯ ಮಿತವು, ಕೃಷಿ ವಿಜ್ಞಾನ ಕೇಂದ್ರ ಹರದನಹಳ್ಳಿ, ಚಾಮರಾಜನಗರ ಜಿಲ್ಲೆ ಸಹಯೋಗ ದೊಂದಿಗೆ ರೈತರಿಗೆ ಪಂಪ್‍ಸೆಟ್‍ಗಳಲ್ಲಿ ವಿದ್ಯುತ್ ಉಳಿತಾಯ ಹಾಗೂ ಜಲಸಂರಕ್ಷಣೆ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಏರ್ಪಡಿಸಿದ್ದರು.

ಕಾರ್ಯಾಗಾರವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಯೋಜನಾ ಅಭಿಯಂತರ ಡಿ.ಕೆ.ದಿನೇಶ್‍ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಪಂಪಸೆಟ್‍ಗಳಲ್ಲಿ ವಿದ್ಯುತ್ ಉಳಿತಾಯ ಹಾಗೂ ಜಲಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ರೈತರು ಮನೆಗಳಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೀಡಲ್ಪಡುವ ಎಲ್.ಇ.ಡಿ ಬಲ್ಬ್‍ಗಳು 05 ಸ್ಟಾರ್ ಹೊಂದಿರುವ ಫ್ಯಾನ್‍ಗಳು ಹಾಗೂ ಹೊಲ-ಗದ್ದೆಗಳಲ್ಲಿ 05 ಸ್ಟಾರ್ ಹೊಂದಿರುವ ನೀರಾವರಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ ಎಂದರು.

ವಿಷಯ ತಜ್ಞರಾದ ಅನಿಲ್‍ಕುಮಾರ್, ಡಾ.ಸಿ. ದೊರೆಸ್ವಾಮಿ, ಡಾ.ಅನಿಲ್ ರೈತರಿಗೆ ಪಂಪಸೆಟ್‍ಗಳಲ್ಲಿ ವಿದ್ಯುತ್ ಉಳಿತಾಯ ಹಾಗೂ ಜಲ ಸಂರಕ್ಷಣೆಯ ಬಗ್ಗೆ ವಿಷಯ ಮಂಡಿಸಿದರು. ಡಾ.ಚಂದ್ರಕಲಾ ಹಣಗಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿಗಳಾದ ಚಂದ್ರಶೇಖರ್‍ಎಸ್. ಕಳ್ಳೀಮನಿ, ಡಾ.ಸೋಮು, ಡಾ.ಶಶಿಕುಮಾರ್, ಅಭಿಷೇಕ್ ಹಾಗೂ ವಿವಿಧ ತಾಲೂಕಿನಿಂದ ಆಗಮಿಸಿದ್ದ ರೈತರು ಉಪಸ್ಥಿತರಿದ್ದರು.

 

 

Translate »