ಸಂದೇಶ್ ನಾಗರಾಜ್ ವಿರುದ್ಧದ ಆರೋಪ ಸಮಂಜಸವಲ್ಲ
ಮೈಸೂರು

ಸಂದೇಶ್ ನಾಗರಾಜ್ ವಿರುದ್ಧದ ಆರೋಪ ಸಮಂಜಸವಲ್ಲ

March 2, 2021

ಮೈಸೂರು,ಮಾ.1(ಎಂಟಿವೈ)- ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು ಅವರ ಬಗ್ಗೆ ಜೆಡಿಎಸ್ ಮುಖಂಡರು ಹಗುರವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ಸಂದೇಶ್ ನಾಗರಾಜ್ ಅಭಿಮಾನಿ ಬಳಗದವರು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ಕೊಟ್ಟು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದರು. ಆ ವೇಳೆ ಪಕ್ಷದ ಹಾಲಿ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ ತಮ್ಮ ಬೆಂಬಲಿಗ ರೊಂದಿಗೆ ಸೇರಿ ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ಕೊಡ ಬಾರದೆಂದು ಹಠ ಹಿಡಿದಿದ್ದರು. ಅಲ್ಲದೆ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದ್ದರು ಎಂದು ದೂರಿದರು.

ಪಕ್ಷ ವಿರೋಧಿ ಕೆಲಸ ಮಾಡುವ ಕೆ.ಟಿ.ಚೆಲುವೇಗೌಡ ಮತ್ತು ಅವರ ಬೆಂಬಲಿಗರಿಗೆ ಪಕ್ಷ ನಿಷ್ಠೆಯಾಗಲೀ, ಸಿದ್ಧಾಂತವಾಗಲೀ ಇಲ್ಲ. ಇಂತಹವರು ಪಕ್ಷದಲ್ಲಿ ಇರಲು ಲಾಯಕ್ಕಿಲ್ಲ. ಕೂಡಲೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಇಲ್ಲ ದಿದ್ದರೆ ಅವರನ್ನು ವರಿಷ್ಠರು ಉಚ್ಚಾಟನೆ ಮಾಡ ಬೇಕು ಎಂದು ಒತ್ತಾಯಿಸಿದರು.

ಮೈಸೂರು ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡು ವಂತೆ ಅಭ್ಯರ್ಥಿಯಾಗಲೀ ಅಥವಾ ಪಕ್ಷದ ಮುಖಂಡರಾಗಲೀ ಸಂದೇಶ್ ನಾಗರಾಜ್ ಅವರಿಗೆ ಮನವಿ ಮಾಡಿಲ್ಲ. ಪಕ್ಷದ ನಡಾವಳಿ ವಿರುದ್ಧ ಎಂದಿಗೂ ನಡೆದು ಕೊಂಡಿಲ್ಲದ ಸಂದೇಶ್ ನಾಗರಾಜ್ ಅವರ ಏಳಿಗೆಯನ್ನು ಸಹಿಸ ದವರು ವಿನಾಕಾರಣ ಟೀಕಿಸುತ್ತಿದ್ದಾರೆ. ಇನ್ನು ಮುಂದಾದರೂ ಸಂದೇಶ್ ನಾಗರಾಜ್ ಅವರ ವಿರುದ್ಧ ಯಾವುದೇ ರೀತಿ ಆರೋಪ ಮಾಡಬಾರದು. ಇಲ್ಲದಿದ್ದರೆ ಅಭಿಮಾನಿಗಳು ಪ್ರತಿಭಟನೆ ಮಾಡಲಿ ದ್ದಾರೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂದೇಶ್ ನಾಗರಾಜ್ ಅಭಿಮಾನಿ ಬಳಗದ ಅಧ್ಯಕ್ಷ ಪರಮೇಶ್, ಮುಖಂಡರಾದ ಚಂದ್ರು, ಮಹದೇವ್, ಭರತ್, ಮಂಜುನಾಥ್, ಅವಿನಾಶ್ ಇದ್ದರು.

 

 

Translate »