ಮೈಸೂರು,ಮಾ.9-ಭಾನುವಾರ ನಿಧನ ರಾದ ಕರ್ನಾಟಕದ ಮಾಜಿ ರಾಜ್ಯಪಾಲ ಡಾ.ಹನ್ಸ್‍ರಾಜ್ ಭಾರದ್ವಾಜ್ ಹಾಗೂ ಫೆ.29ರಂದು ನಿಧನರಾದ ಇತಿಹಾಸತಜ್ಞ ಪ್ರೊ.ಶೆಟ್ಟರ್ ನಿಧನಕ್ಕೆ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.
ಡಾ.ಹನ್ಸ್‍ರಾಜ್ ಭಾರದ್ವಾಜ್: ಮೂಲತಃ ಹರಿಯಾಣ ರಾಜ್ಯದವರಾದ ಡಾ.ಹನ್ಸ್ ರಾಜ್ ಭಾರದ್ವಾಜ್ ಆಗ್ರಾ, ಪಂಜಾಬ್ ವಿವಿ ಗಳಲ್ಲಿ ಉನ್ನತ ಶಿಕ್ಷಣ ಪಡೆದು ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಕಾಂಗ್ರೆಸ್ ಪಕ್ಷದಿಂದ ಮಧ್ಯಪ್ರದೇಶದಿಂದ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೇಂದ್ರ ಸರ್ಕಾರದ ಕಾನೂನು, ಯೋಜನೆ, ಕಾರ್ಯಕ್ರಮ ಅನುಷ್ಠಾನ ಹಾಗೂ ಕಂಪೆನಿ ವ್ಯವಹಾರಗಳ ಸಚಿವ ರಾಗಿ ಕಾರ್ಯ ನಿರ್ವಹಿಸಿದರು. ಅಲ್ಲದೇ 2009ರಲ್ಲಿ ಕರ್ನಾಟಕದ ರಾಜ್ಯಪಾಲ ರಾಗಿ 5 ವರ್ಷಗಳ ಸೇವೆ ಸಲ್ಲಿಸಿದರು.
ವಿದ್ವಾಂಸರು, ಜನಪರ ಕಾಳಜಿ ಮೂಲಕ ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮಾಜಿ ರಾಜ್ಯಪಾಲ ಡಾ.ಹನ್ಸ್‍ರಾಜ್ ಭಾರದ್ವಾಜ್ ಅವರ ನಿಧನ ತುಂಬಲಾರದ ನಷ್ಟ ಎಂದು ಸುತ್ತೂರು ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ಪ್ರೊ.ಶೆಟ್ಟರ್: ಇತಿಹಾಸ, ಪ್ರಾಕ್ತನಶಾಸ್ತ್ರ ಮುಂತಾದ ವಿವಿಧ ಅಧ್ಯಯನ ಶಾಖೆಯಲ್ಲಿ ಆಳವಾದ ಪರಿಣಿತಿ ಪಡೆದಿದ್ದ ಪ್ರೊ.ಶೆಟ್ಟರ್ ವಿಶಿಷ್ಟ ಶೈಲಿಯ ವಿದ್ವಾಂಸರು. ಸದಾ ಅಧ್ಯ ಯನಶೀಲರಾಗಿ ಕಿರಿಯರಿಗೆ ಪ್ರೋತ್ಸಾಹ ನೀಡುತ್ತಿದ್ದ ಶೆಟ್ಟರ್, ಕರ್ನಾಟಕದ ಸಂಸ್ಕøತಿ ಸಂಶೋಧನೆ, ಐತಿಹಾಸಿಕ ಅಧ್ಯಯನ, ಹಳೆ ಗನ್ನಡ ಸಾಹಿತ್ಯ, ಲಿಪಿಶಾಸ್ತ್ರ ಮುಂತಾದ ಕ್ಷೇತ್ರ ಗಳಲ್ಲಿ ಅಧ್ಯಯನ ಮಾಡಿದ್ದರು. ಪ್ರೊ. ಶೆಟ್ಟರ್ ಅವರ ಅಗಲಿಕೆಯಿಂದ ನಾಡಿನ ಸಾಂಸ್ಕøತಿಕ ಕ್ಷೇತ್ರ ಬಡವಾಗಿದೆ ಎಂದು ಸುತ್ತೂರು ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ಡಾ.ಹನ್ಸ್‍ರಾಜ್ ಭಾರದ್ವಾಜ್ ಹಾಗೂ ಪ್ರೊ.ಶೆಟ್ಟರ್ ಅವರುಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದೇವರು ಕುಟುಂಬ ವರ್ಗ ದವರಿಗೆ ಮೃತರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ತಿಳಿಸಿದ್ದಾರೆ.