ಸಿಎಸ್‍ಐಆರ್ ವಿಜ್ಞಾನಿಗಳಿಂದ ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಸತತ ಪ್ರಯತ್ನ
ಮೈಸೂರು

ಸಿಎಸ್‍ಐಆರ್ ವಿಜ್ಞಾನಿಗಳಿಂದ ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಸತತ ಪ್ರಯತ್ನ

March 10, 2020

ಮೈಸೂರು, ಮಾ.9(ಪಿಎಂ)- ಕಂಟಕ ಪ್ರಾಯವಾದ ಕೊರೊನಾ ವೈರಸ್‍ಗೆ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ (ಸಿಎಸ್‍ಐಆರ್) ವಿಜ್ಞಾನಿಗಳು ಪ್ರಯೋಗಾ ಲಯಗಳಲ್ಲಿ ಅವಿರತ ಸಂಶೋಧನೆ ನಡೆಸು ತ್ತಿದ್ದಾರೆ ಎಂದು ಸಿಎಸ್‍ಐಆರ್‍ನ ಮಹಾ ನಿರ್ದೇಶಕ ಡಾ.ಶೇಖರ್ ಸಿ.ಮಾಂಡೆ ತಿಳಿಸಿದರು.

ಮೈಸೂರಿನ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ವತಿಯಿಂದ ಸಂಸ್ಥೆ ಸಭಾಂ ಗಣದಲ್ಲಿ `ಫ್ಯೂಚರ್ ಇಂಡಿಯಾ ಟಾಕ್ಸ್’ ಸರಣಿ ಉಪನ್ಯಾಸ ಕಾರ್ಯಕ್ರಮದಡಿ ಸೋಮ ವಾರ ಹಮ್ಮಿಕೊಂಡಿದ್ದ `ಇನ್ ಸೈನ್ಸ್ ವೀ ಟ್ರಸ್ಟ್ (ವಿಜ್ಞಾನದಲ್ಲಿ ನಮ್ಮ ನಂಬಿಕೆ)’ ಕುರಿತಂತೆ ಉಪನ್ಯಾಸ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು.

ನಮ್ಮ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್‍ಗೆ ಔಷಧ ಕಂಡುಹಿಡಿಯುವ ಸಂಬಂಧ ರಾಸಾಯನಿಕಗಳ ಸಂಯೋ ಜನೆ ಕುರಿತು ಸಂಶೋಧನೆ ನಡೆಯುತ್ತಿದೆ. ಇದೇ ರೀತಿಯಲ್ಲಿ ಜಗತ್ತಿನಲ್ಲಿ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಶೀಘ್ರ ವಾಗಿ ನಮ್ಮ ಕಡೆಯಿಂದಲೇ ಔಷಧ ಹೊರ ಬರುವ ವಿಶ್ವಾಸವಿದೆ ಎಂದರು.

ನಮ್ಮಲ್ಲಿ ರೋಗ ರಹಿತವಾದ ಹತ್ತಿ ತಳಿ ಸಂಶೋಧನೆ ನಡೆಯುತ್ತಿದೆ. ಈ ತಳಿ ಯನ್ನು ಪ್ರಾಯೋಗಿಕವಾಗಿ ನಾಗ್ಪುರದಲ್ಲಿ ಬೆಳೆಸಲಾಗುತ್ತಿದೆ. ಇದು ಯಶಸ್ವಿಯಾದರೆ ಯಾವುದೇ ಕೀಟನಾಶಕ ಬಳಸದೇ ಬೆಳೆಯ ಬಹುದಾದ ಹತ್ತಿ ತಳಿ ಲಭ್ಯವಾಗಲಿದೆ. ಅಲ್ಲದೆ, ವಿವಿಧ ಬಗೆಯ ಹೂಗಳ ತಳಿಗಳನ್ನು ಕಂಡು ಹಿಡಿಯುವ ಮೂಲಕ ಜೇನುಕೃಷಿಗೆ ಉತ್ತೇ ಜನ ನೀಡಲು ಸಿದ್ಧತೆ ನಡೆದಿವೆ ಎಂದರು.

ಇದಕ್ಕೂ ಮುನ್ನ ಉಪನ್ಯಾಸದಲ್ಲಿ ಮಾತನಾಡಿದ ಅವರು, ಭಾರತೀಯ ಸಾಂಪ್ರ ದಾಯಿಕ ಜ್ಞಾನವನ್ನು, ವಿಶೇಷವಾಗಿ ಸಾಂಪ್ರ ದಾಯಿಕ ವೈದ್ಯಕೀಯ ಪದ್ಧತಿಗಳನ್ನು ಮೌಲ್ಯೀ ಕರಿಸಲು ಮತ್ತು ಮರಳಿ ಮುನ್ನಲೆಗೆ ತರಲು ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿ ಕೊಳ್ಳುವ ಅಗತ್ಯವಿದೆ. ಭಾರತೀಯ ಪ್ರಾಚೀನ ಬೌದ್ಧಿಕ ಜ್ಞಾನದ ಬಗ್ಗೆ ನಾವು ಪುರಾವೆ ಸಹಿತ ಸಾಬೀತು ಮಾಡಬೇಕಿದೆ. ಅದ ಕ್ಕಾಗಿ ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆದ್ಯತೆ ನೀಡಬೇಕಿದೆ ಎಂದರು.

ಭಾರತವು ಹಿಂದುಳಿದ ಸಮಾಜವಾಗಿತ್ತು. ಬ್ರಿಟಿಷರ ಆಗಮನದಿಂದ ಸುಧಾರಣೆ ತರಲಾಯಿತು ಎಂಬ ವಾದ ತಪ್ಪಾಗಿದ್ದು, ಈ ವಾದವನ್ನು ಅನೇಕರು ಪ್ರತಿಪಾದಿಸು ತ್ತಿರುವುದು ದುರ್ದೈವ. ಭಾರತೀಯ ಸಮಾಜ ದಲ್ಲಿ ಪ್ರಾಚೀನ ಕಾಲದಿಂದಲೂ ಎಲ್ಲಾ ವಲಯಗಳಲ್ಲಿ ಆವಿಷ್ಕಾರಗಳನ್ನು ಕಾಣ ಬಹುದು. ಆದರೆ ಅದಕ್ಕೆ ನಾವು ಸೂಕ್ತ ಪ್ರಚಾರ ಹಾಗೂ ಪುರಾವೆ ನೀಡಲಿಲ್ಲ. ಕೇರಳದ ಮಾಧವಾಚಾರ್ಯ ಮತ್ತು ಪಾಣಿನಿ ಅವರು ಗ್ರಹಗಳ ಚಲನೆಯ ಬಗ್ಗೆ ಸಂಶೋಧನೆ ಮಾಡಿರುವುದನ್ನು ಒಂದು ಉದಾಹರಣೆಯಾಗಿ ಇಲ್ಲಿ ಉಲ್ಲೇಖಿಸ ಬಹುದು ಎಂದು ಹೇಳಿದರು.

ಇದೇ ವೇಳೆ ರಾಷ್ಟ್ರೀಯ ವಿಜ್ಞಾನ ಬರ ವಣಿಗೆ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ವಿದ್ಯಾರ್ಥಿಗಳಾದ ಎಂ.ಎಲ್. ಭವ್ಯ, ಐ.ಸಪ್ನ, ಸಂಧ್ಯಾ ಶಾವಾಲೆ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ.ಕೆಎಸ್‍ಎಂಎಸ್ ರಾಘುವರಾವ್ ಸೇರಿದಂತೆ ಸಂಸ್ಥೆಯ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »