ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೇ ಮಹಿಳೆ ಸಾಧನೆ: ಚಂದ್ರಶೇಖರ್ ದಿಡ್ಡಿ
ಚಾಮರಾಜನಗರ

ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೇ ಮಹಿಳೆ ಸಾಧನೆ: ಚಂದ್ರಶೇಖರ್ ದಿಡ್ಡಿ

March 11, 2020

ಗುಂಡ್ಲುಪೇಟೆ, ಮಾ.10(ಸೋಮ್.ಜಿ)- ಮಹಿಳೆಯರ ಸಾಧನೆ ಗೌರವಿಸುವ ಹಾಗೂ ಮಹಿಳಾ ಸಮಾನತೆ ಬಗ್ಗೆ ಜಾಗೃತಿ ಮೂಡಿ ಸುವ ಉದ್ದೇಶದಿಂದ ಮಹಿಳಾ ದಿನ ಆಚರಿ ಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಚಂದ್ರಶೇಖರ್ ದಿಡ್ಡಿ ತಿಳಿಸಿದರು.

ಪಟ್ಟಣದ ಜೆಎಸ್‍ಎಸ್ ಕಾಲೇಜಿನ ಸಭಾಂಗಣದಲ್ಲಿ ಜೆಎಸ್‍ಎಸ್ ಕಾಲೇಜು, ಯೂತ್ ಡೆವಲಪ್‍ಮೆಂಟ್ ಚಾರಿಟಬಲ್ ಟ್ರಸ್ಟ್(ರಿ) ಮತ್ತು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ವಲ್ರ್ಡ್ ವಿಷನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೇ ಸಾಧನೆ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗದೇ ಶಿಕ್ಷಣದ ಕಡೆ ಗಮನ ಹರಿಸಿ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎನ್.ಎಂ.ಸರಸ್ವತಿ ಮಾತನಾಡಿ, ಹೆಣ್ಣು 4 ಗೋಡೆಗೆ ಸೀಮಿತ ಎಂಬ ಕಾಲದಿಂದ ದೇಶದ ಅತ್ಯುನ್ಯತ ಸ್ಥಾನ ಪಡೆಯುವ ಮಟ್ಟಿಗೆ ಬೆಳೆದಿದ್ದಾಳೆ. ಹೀಗಾಗಿ ಹೆಣ್ಣು ಮಕ್ಕಳು ಪ್ರೀತಿ ಪ್ರೇಮದ ಆಕರ್ಷಣೆಗೆ ಒಳಗಾಗದೇ ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ, ಸಾಧನೆ ಗೈದ ಮಹಿಳೆಯರನ್ನು ಆದರ್ಶವಾಗಿ ಟ್ಟುಕೊಂಡು ಸಾಧನೆ ಮಾಡಿ ಎಂದರು.

ತೆರಕಣಾಂಬಿ ಠಾಣೆ ಎಸ್‍ಐ ಎಸ್. ರಾಧಾ ಮಾತನಾಡಿ, ಸಾಧನೆಗೆ ಯಾವುದೇ ಹಂಗಿಲ್ಲ. ನಾನು ಪಿಯುಸಿಯಲ್ಲಿ ಪಿಸಿಎಂ ತೆಗೆದುಕೊಂಡಿದ್ದೆ. ನನಗೆ ಉಪನ್ಯಾಸಕಿ ಯಾಗಬೇಕೆಂದು ಆಸೆಯಿತ್ತು. ಆದರೆ ಬಡತನದಿಂದ ಶಿಕ್ಷಣ ಮೊಟಕುಗೊಳಿಸಿ ಉದ್ಯೋಗಕ್ಕೆ ಸೇರಿದೆ. ಒಬ್ಬ ಕಾನ್ಸ್‍ಟೇ ಬಲ್ ಹುದ್ದೆಯಿಂದ ಇಂದು ನಾನು ಪೆÇಲೀಸ್ ಠಾಣೆ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸು ತ್ತಿದ್ದೇನೆ. ಮನಸ್ಸು ಮಾಡಿದರೆ ಏನನ್ನಾ ದರೂ ಸಾಧಿಸಬಹುದು. ಪೆÇೀಷಕರು ಆಸೆಯಿಂದ ಶ್ರಮಪಟ್ಟು ಮಕ್ಕಳನ್ನು ವಿದ್ಯಾ ವಂತರನ್ನಾಗಿ ಮಾಡುತ್ತಿದ್ದಾರೆ. ಅವರ ಆಸೆ ಈಡೇರಿಸಲು ವಿದ್ಯಾರ್ಥಿಗಳು ಶ್ರಮಿಸ ಬೇಕು. ಅವರ ಶ್ರಮಕ್ಕೆ ಸಾಧನೆ ಮೂಲಕ ಪ್ರತಿಫಲ ನೀಡಬೇಕು ಎಂದರು.

ವಲ್ರ್ಡ್‍ಷನ್ ಸಂಸ್ಥೆ ವ್ಯವಸ್ಥಾಪಕ ಟಿ.ಸಿ. ವರ್ಗೀಸ್ ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ, ಮುದ್ರಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಉದ್ಯೋಗಿನಿ ಯೋಜನೆ ಸೇರಿದಂತೆ ಹಲವು ಯೋಜನೆ ಗಳನ್ನು ಹಮ್ಮಿಕೊಂಡಿದೆ. ಈ ಯೋಜನೆ ಲಾಭ ಪಡೆದು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಹಲವು ವರ್ಷಗಳಿಂದ ಮಹಿಳಾ ಸಮಾನತೆ ಬಗ್ಗೆ ಹೋರಾಟ ನಡೆದಿದ್ದರೂ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯು ತ್ತಿರುವ ದೌರ್ಜನ್ಯಗಳು ಕಡಿಮೆಯಾಗಿಲ್ಲ ಎಂದರು. ಪದವಿ ಕಾಲೇಜಿನ ಪ್ರಾಂಶು ಪಾಲ ಡಾ.ಮಹದೇವಸ್ವಾಮಿ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿರ್ಮಲ ಕಾನ್ವೆಂಟ್‍ನ ಸಂಯೋಜಕಿ ಸಿಸ್ಟರ್ ಎಡ್ವಿನಾ, ಗ್ರಾಪಂ ಅಧ್ಯಕ್ಷೆ ಬಸ ಮ್ಮಣ್ಣಿ, ಕೆಎಸ್‍ಆರ್‍ಟಿಸಿ ಮಹಿಳಾ ನಿರ್ವಾ ಹಕಿ ಶಾರದ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರುದ್ರವ್ವ ಬಸಪ್ಪ ಕೆಳಗೇರಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಲಲಿತಾ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಕಾಲೇಜು ವಿದ್ಯಾರ್ಥಿನಿಯರು ಮದರ್ ಥೆರೆಸಾ, ಸುಧಾಮೂರ್ತಿ, ಕಲ್ಪನಾ ಚಾವ್ಲಾ, ಮಲಾಲಾ ಇವರುಗಳ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ದೌರ್ಜನ್ಯದ ಬಗ್ಗೆ ಕಿರು ನಾಟಕದ ಮೂಲಕ ಅರಿವು ಮೂಡಿಸಿ ದರು ಹಾಗೂ ನೃತ್ಯಾಭಿನಯ ಮಾಡಿದರು.

ಜಾಥಾ: ಜೆಎಸ್‍ಎಸ್ ಕಾಲೇಜಿನಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಿಳಾ ರಕ್ಷಣೆ ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಜಾಥಾ ನಡೆಸಲಾಯಿತು.

Translate »