ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ
ಮೈಸೂರು

ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ

October 4, 2020

ಮೈಸೂರು,ಅ.3-ಕೋವಿಡ್ ನಿಯಂತ್ರಣಕ್ಕೆ ಸರ್ಕಾ ರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಹಾಗೂ ಹೊಂದಾಣಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಅವರು ರಾಜೇಂದ್ರ ಶ್ರೀಗಳ 105ನೇ, ಮಹಾತ್ಮ ಗಾಂಧೀಜಿಯವರ 151ನೇ ಹಾಗೂ ಲಾಲ್ ಬಹ ದ್ದೂರ್ ಶಾಸ್ತ್ರೀಯವರ 116ನೆಯ ಜಯಂತಿ ಪ್ರಯುಕ್ತ ಜೆಎಸ್‍ಎಸ್ ಎಹೆಚ್‍ಇಆರ್‍ನಿಂದ ಏರ್ಪಡಿಸಲಾಗಿದ್ದ ಲೀಡಿಂಗ್ ಕೋವಿಡ್-19 ಮ್ಯಾನೇಜ್‍ಮೆಂಟ್- ಲೆಸನ್ಸ್ ಅಂಡ್ ಲನ್ರ್ಸ್ ವಿಷಯದ ವೆಬಿನಾರ್‍ನ್ನು ಮೈಸೂ ರಿನ ಸುತ್ತೂರು ಶಾಖಾಮಠದಿಂದ ಉದ್ಘಾಟಿಸಿದರು.

ಮೈಸೂರಿನಲ್ಲಿ ಕೋವಿಡ್ ನಿಯಂತ್ರಣ ಬಹಳ ಕಷ್ಟವಾಗುತ್ತಿದೆ, ಅಕ್ಕ-ಪಕ್ಕದ ಜಿಲ್ಲೆಯವರು ಸಹ ಚಿಕಿತ್ಸೆಗೆ ಮೈಸೂರಿಗೇ ಆಗಮಿಸುತ್ತಿದ್ದಾರೆ. ಇದರಿಂದ ಮರಣ ಪ್ರಮಾಣವು ಹೆಚ್ಚುತ್ತಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಉಪಕರಣಗಳ ಕೊರತೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಜೆಎಸ್‍ಎಸ್ ಆಸ್ಪತ್ರೆಯು ಈಗಾಗಲೇ ಕೋವಿಡ್ ವಿರು ದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಅದು ಸರ್ಕಾರದೊಂದಿಗೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಕೈಜೋಡಿಸಬೇಕು. ಅದು ಜಿಲ್ಲಾ ಡಳಿತಕ್ಕೆ ಬಹಳ ಸಹಕಾರಿಯಾಗಲಿದೆ. ಈಗಾಗಲೇ ಪರಮಪೂಜ್ಯರು ಜೆಎಸ್‍ಎಸ್ ಆಸ್ಪತ್ರೆಯ ವೈದ್ಯರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಅವರಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ತುಂಬುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಹಾತ್ಮ ಗಾಂಧೀಜಿ ಯವರನ್ನು ಹೆಚ್ಚಿನವರು ಅವರು ಪಾಲಿಸಿದ ಸತ್ಯ ಹಾಗೂ ಅಹಿಂಸೆಗಳ ಬಗೆಗೆ ಮಾತ್ರ ತಿಳಿದಿರುತ್ತಾರೆ. ಆದರೆ ಅವರೇ ಸ್ವತಃ ಕೀ ಟು ಹೆಲ್ತ್ ಎಂಬ ಗ್ರಂಥವನ್ನು ಬರೆದಿದ್ದಾರೆ. ಅದರಲ್ಲಿ ಏನು ಬರೆದಿದ್ದಾರೋ ಅದನ್ನೇ ಅವರ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದರು. ಉಪವಾಸ, ಪಥ್ಯಾಹಾರ ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಅವರು ಇಂದು ಮಾನವ ಕುಲಕ್ಕೆ ಸೇರಿದ ಅಪರೂಪದ ವ್ಯಕ್ತಿಗಳು. ಕೋವಿಡ್-19ರ ಸಂದರ್ಭದಲ್ಲಿ ವೈದ್ಯರು ಹಾಗೂ ಅವರಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿರುವವರ ಎಲ್ಲ ಅನುಭವಗಳು ಹಾಗೂ ಅವರು ಕಲಿತ ಪಾಠಗಳು ಸ್ಪಷ್ಟ ವಾಗಿ ದಾಖಲಾಗಬೇಕು. ಭವಿಷ್ಯದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಎದುರಾಗುವ ಸಮಸ್ಯೆ ಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ವೆಬಿನಾರ್‍ನಲ್ಲಿ ಕಾರ್ಯನಿರ್ವಾಹಕ ಕಾರ್ಯ ದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಜೆಎಸ್‍ಎಸ್ ಎಹೆಚ್‍ಇಆರ್‍ನ ಸಮಕುಲಾಧಿಪತಿಗಳಾದ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜು ನಾಥ್, ಪ್ರಾಂಶುಪಾಲ ಡಾ.ಹೆಚ್.ಬಸವನಗೌಡಪ್ಪ, ನಿರ್ದೇಶಕರಾದ ಕರ್ನಲ್ ಡಾ.ಎಂ. ದಯಾನಂದ, ಆರ್.ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

Translate »