ಮೈಸೂರು, ಅ. 3(ಆರ್‍ಕೆ)- ಉತ್ತರಪ್ರದೇಶ ದಲ್ಲಿ ಮಹಿಳೆಯರ ಮೇಲಿನ ದೈಹಿಕ ದೌರ್ಜನ್ಯ ಖಂಡಿಸಿ ದಸಂಸ, ಬಿಎಸ್‍ಪಿ, ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಇಂದು ಮೈಸೂರಿನಲ್ಲಿ ಸರಣಿ ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಮಹಾಪೌರ ಪುರುಷೋತ್ತಮ್ ನೇತೃತ್ವ ದಲ್ಲಿ ಮೈಸೂರಿನ ಗಾಂಧಿಸ್ಕ್ವೇರ್ ಮತ್ತು ಪುರ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಂಘ ಟನೆಗಳ ಕಾರ್ಯಕರ್ತರು, ಅತ್ಯಾಚಾರಿಗಳನ್ನು ಗಲ್ಲಿ ಗೇರಿಸಿ ಅವರ ಆಸ್ತಿಗಳನ್ನು ಉತ್ತರ ಪ್ರದೇಶ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅತ್ಯಾಚಾರಿ ಗಳನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು, ಕಾನೂನು ವ್ಯವಸ್ಥೆ ಹದÀಗೆಟ್ಟಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸರ್ಕಾರವನ್ನು ತಕ್ಷಣ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶದಲ್ಲಿ ಕರ್ತವ್ಯದ ಮೇಲಿದ್ದ ಹಿಂದು ಳಿದ ವರ್ಗದ ಸರ್ಕಲ್ ಇನ್‍ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಎಂಬುವರನ್ನು ಗುಂಡು ಹಾರಿಸಿ, ಹತ್ಯೆಗೈದಿದ್ದು ಅಲ್ಲಿ ಹಿಂದುಳಿದ ವರ್ಗದವರ ಮೇಲೆ ಹಲ್ಲೆ, ದೌರ್ಜನ್ಯ, ಅತ್ಯಾಚಾರಗಳಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋ ಪಿಸಿದ ಪ್ರತಿಭಟನಾಕಾರರು, ಆರೋಪಿತರ ವಿರುದ್ಧ ಕಠಿಣ ರೀತಿಯ ಕಾನೂನು ಕ್ರಮ ಜರು ಗಿಸಬೇಕೆಂದು ಅವರು ಒತ್ತಾಯಿಸುತ್ತಿದ್ದರು.
ನಾಯಕರ ಯುವ ಸೇನೆ: ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು, ಅತ್ಯಾಚಾರಿ ಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಕರ್ನಾ ಟಕ ರಾಜ್ಯ ನಾಯಕರ ಯುವ ಸೇನೆ ಪದಾಧಿಕಾರಿ ಗಳು ಪುರಭವನ ಮುಂಭಾಗ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿರುವ ಯೋಗಿ ಆದಿತ್ಯ ನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರ ಬೇಕು, ಸಾಮೂಹಿಕ ಅತ್ಯಾಚಾರ ಮಾಡಿ ಯುವತಿ ಸಾವಿಗೆ ಕಾರಣರಾಗಿರುವ ನಾಲ್ವರು ಆರೋಪಿಗಳನ್ನು ನೇಣಿಗೇರಿಸಿ ಇಡೀ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಪದಾಧಿಕಾರಿಗಳು ಇದೇ ವೇಳೆ ಒತ್ತಾಯಿಸಿದರು.
ನಾಯಕರ ಯುವ ಸೇನೆಯ ಶಿವಕುಮಾರ ಸ್ವಾಮಿ, ಸುತ್ತೂರು ಸುರೇಶ್‍ನಾಯಕ್, ನೃಪ ತುಂಗ, ಕಣಿಯನ ಹುಂಡಿ ಸಿದ್ದರಾಜು, ಮಹ ದೇವು, ಅಂಕಯ್ಯ, ಪುಟ್ಟರಾಜು, ಮಂಜುನಾಥ್, ಮಿಥುನ್, ಹೆಡತಲೆ ಶಿವಕುಮಾರ್, ಶಿವರಾಜ್, ಸ್ವಾಮಿನಾಯಕ ಸೇರಿದಂತೆ ಹಲವರು ಪಾಲ್ಗೊಂಡು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದರು.
ದಲಿತ ಸಂಘರ್ಷ ಸಮಿತಿ: ಉತ್ತರ ಪ್ರದೇಶದ ಅತ್ರಾಸ್ ಮತ್ತು ಬಲರಾಂಪುರ ಜಿಲ್ಲೆಯ ಭೋನ್ಸ್‍ದಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು ಹಾಗೂ ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇ ಡ್ಕರ್ ವಾದ) ಪದಾಧಿಕಾರಿಗಳು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಅದೇ ರೀತಿ ಬಹುಜನ ಸಮಾಜ ಪಕ್ಷ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳನ್ನು ಗಲ್ಲಿಗೇ ರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ದಸಂಸದ ದೊಡ್ಡಸಿದ್ದು, ಪುಟ್ಟಲಕ್ಷ್ಮಮ್ಮ, ಸೋಮಣ್ಣ, ವಸಂತ, ಗಜೇಂದ್ರ, ಬಸವರಾಜು, ಎಬಿವಿಪಿಯ ಚಿರಂತ್ ಸಿಂಧ್ಯ, ಬಿಎಸ್‍ಪಿಯ ಶ್ರೀನಿವಾಸ್ ಪ್ರಸಾದ್, ಜೈಶಂಕರ್‍ಶ್ಯಾಮ್, ಬಿ.ಆರ್. ಪುಟ್ಟಸ್ವಾಮಿ, ಶಿವರಾಜ್, ಶ್ರೀಕಂಠ ಸೇರಿದಂತೆ ಹಲವರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.