ಮೈಸೂರು, ಅ.3(ವೈಡಿಎಸ್)- ಉತ್ತರ ಪ್ರದೇಶದಲ್ಲಿ ಮನೀಶಾ ಎಂಬ ಯುವತಿಯ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪಿಜಿ ಜನಸ್ಪಂದನ ಫೌಂಡೇಷನ್ ನಿಂದ ಸ್ವಾತಂತ್ರ್ಯ ಹೋರಾಟ ಗಾರ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ಜಯಂತಿ ಪ್ರಯುಕ್ತ ಪಿಜಿ ಜನಸ್ಪಂದನ ಫೌಂಡೇಷನ್ ಸದಸ್ಯರು ಉದ್ಯಾನದಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮನೀಶಾ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ವಕೀಲರು ಇಂತಹ ದುಷ್ಕರ್ಮಿಗಳ ಪರ ವಕಾಲತು ವಹಿಸಬಾರದು ಎಂದು ಒತ್ತಾಯಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಪಿಜಿ ಜನಸ್ಪಂದನ ಫೌಂಡೇಷನ್ ಅಧ್ಯಕ್ಷ ಪ್ರಶಾಂತ್‍ಗೌಡ, ಸದಸ್ಯರಾದ ಮಂಜುಳಾ, ಶಾಂತಮ್ಮ, ಮಂಗಳ, ಲೀಲಾ, ರಾಮ ಪ್ರಸಾದ್, ಮಂಜು, ಮಹದೇವ್, ಜ್ಞಾನೇಶ್, ಕುಮಾರ್, ಚೆಲುವರಾಜ್, ಗುರುರಾಜ್ ಶೆಟ್ಟಿ, ಗುರುಪ್ರಸಾದ್, ಪ್ರಶಾಂತ್, ಶಿವು, ಕಿರಣ್ ಮತ್ತಿತರರು ಹಾಜರಿದ್ದರು.