ರಾಜ್ಯದಲ್ಲಿ ಕೊರೊನಾಗೆ ಖರ್ಚಾಗಿದ್ದು 15,645 ಕೋಟಿ!
News

ರಾಜ್ಯದಲ್ಲಿ ಕೊರೊನಾಗೆ ಖರ್ಚಾಗಿದ್ದು 15,645 ಕೋಟಿ!

March 19, 2022

ಬೆಂಗಳೂರು,ಮಾ.18(ಕೆಎಂಶಿ)-ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆಗೆ ಇದೂವರೆಗೆ ಒಟ್ಟು 15,645 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿಂದು ಬಜೆಟ್ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ, ಕೋವಿಡ್ ವೇಳೆ ಮೊದಲ ಪ್ಯಾಕೇಜ್‍ಗೆ 4,640 ಕೋಟಿ ರೂ. ಖರ್ಚು ಮಾಡಲಾಗಿದೆ. 2ನೇ ಪ್ಯಾಕೇಜ್ ಅಡಿ 2,658 ಕೋಟಿ ರೂ. ಖರ್ಚು ಮಾಡಲಾಗಿದೆ. ಸೋಂಕು ನಿಯಂತ್ರಣಕ್ಕೆ 2,525 ಕೋಟಿ ರೂ., ನಗರಾಭಿವೃದ್ಧಿü ಇಲಾಖೆಗೆ 360 ಅನುದಾನ ಸೇರಿ 15,000 ಕೋಟಿ ರೂ.ಗಳನ್ನು ವಿವಿಧ ಆದ್ಯತೆಗಳ ಮೇಲೆ ಖರ್ಚು ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ದಿಂದ ಬರುವ ತೆರಿಗೆ ನೆರವು ಮತ್ತು ಇಲಾಖೆಯಿಂದ ಸುಮಾರು 13 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚುವರಿ ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ವಾಣಿಜ್ಯ ತೆರಿಗೆಯಲ್ಲಿ 8ರಿಂದ 10 ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹಿಸಲು ಸಾಧ್ಯವಿದೆ, ಅಬಕಾರಿಯಲ್ಲಿ 2 ಸಾವಿರ ಕೋಟಿ ರೂ., ಮುದ್ರಾಂಕ ದಲ್ಲಿ 1 ಸಾವಿರ ಕೋಟಿ ರೂ. ಹೆಚ್ಚುವರಿ ಸಂಗ್ರಹದ ಗುರಿ ಇದೆ ಎಂದರು.

ನೆರೆಯ ರಾಜ್ಯಗಳು ಬಹಳಷ್ಟು ರಾಜಸ್ವ ಕೊರತೆ ಎದುರಿ ಸುತ್ತಿವೆ, ಸವಾಲಿನ ನಡುವೆಯೂ ನಾವು ಸುಸ್ಥಿತಿಯಲ್ಲಿ ದ್ದೇವೆ, ಬೇರೆ ಆದಾಯಗಳು ಹೆಚ್ಚಾದರೆ ಸಾಲ ಕಡಿಮೆ ಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಆರ್ಥಿಕ ಮಿತಿಯಲ್ಲೇ ನಾವು ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸಿ ದ್ದೇವೆ, ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಆರ್ಥಿಕ ಪರಿಸ್ಥಿತಿ ಭಿನ್ನವಾಗಿದೆ. ಪ್ರಸ್ತುತ ನಾವು ಸವಾಲುಗಳ ನಡುವೆ ಆರ್ಥಿಕ ಶಿಸ್ತು ಕಾಪಾಡುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಣಕಾಸು ಆಯೋಗಗಳ ಶಿಫಾರಸ್ಸಿನ ಅನ್ವಯ ನಿಗದಿಗಿಂತ ಹೆಚ್ಚುವರಿ ಅನುದಾನ ರಾಜ್ಯಕ್ಕೆ ಹರಿದು ಬಂದಿದೆ. ವಿವಿಧ ಯೋಜನೆಗಳಡಿಯಲ್ಲೂ ಸಾವಿರಾರು ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನೆರವು ನೀಡಿದೆ. ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಅನುದಾನ ಹಾಗೂ ನೆರವು ನೀಡುತ್ತಲೇ ಇದೆ ಎಂದರು.

ಅಲ್ಪಸಂಖ್ಯಾತರಿಗೆ ಬಜೆಟ್‍ನಲ್ಲಿ ಅನುದಾನ ಕಡಿಮೆ ಯಾಗಿರುವ ಮಾಹಿತಿ ಇದೆ, ಮುಂದೆ ಹೆಚ್ಚು ನೀಡಲಾಗು ವುದು, ಪರಿಶಿಷ್ಟ ಸಮುದಾಯ ಸೇರಿ ಸಾಮಾಜಿಕ ಯೋಜ ನೆಗಳಿಗೆ ನಿಗದಿತ ಹಣಕಾಸು ಸೌಲಭ್ಯಗಳನ್ನು ಒದಗಿಸು ವುದಾಗಿ ಹೇಳಿದರು. ಎಲ್ಲಾ ವರ್ಗಗಳಿಗೂ ಆದ್ಯತೆ ನೀಡಲಾಗಿದೆ, ಆರ್ಥಿಕ ಸುಸ್ಥಿತಿಯನ್ನು ಕಾಪಾಡಿಕೊಂಡಿ ದ್ದೇವೆ, ಪ್ರಾದೇಶಿಕ ಅಸಮಾನತೆಗೆ ಆದ್ಯತೆ ನೀಡಲಾಗಿದ್ದು, ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡಲಾಗಿದೆ, ಶ್ರಮಿಕರು, ಬಡವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದರು. ಕೈಗಾರಿಕೆಗಳ ಹೂಡಿಕೆ ಆಧಾರದ ಮೇಲೆ ತೆರಿಗೆ ರಿಯಾ ಯಿತಿ ನೀಡುವ ಬದಲು, ಉದ್ಯೋಗ ಲಭ್ಯತೆ ಆಧಾರದ ಮೇಲೆ ಹೆಚ್ಚಿನ ಭತ್ಯೆ ನೀಡುವ ವಿಶೇಷ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯ ಏಪ್ರಿಲ್‍ನಿಂದ ಜಾರಿಗೆ ತರಲಿದೆ. ರಾಜ್ಯದಲ್ಲಿ 180ಕ್ಕೂ ಹೆಚ್ಚು ಸಂಶೋಧನೆ ಹಾಗೂ ಅನ್ವೇಷಣಾ ಕೇಂದ್ರಗಳಿವೆ, ಮತ್ತಷ್ಟು ಪೆÇ್ರೀತ್ಸಾಹಿಸಲು ಶಾಲೆಯಿಂದಲೂ ಬೆಂಬಲ ನೀಡಲು ಹೊಸ ನೀತಿ ರೂಪಿಸಲಾಗುತ್ತಿದೆ. ಪರಿಸರ ಸಮತೋಲನಕ್ಕೆ 100 ಕೋಟಿ ರೂ. ನೀಡಲಾಗಿದೆ. 2022-23ನೇ ಸಾಲಿನ ಬಜೆಟ್‍ನ ಒಟ್ಟು ಗಾತ್ರ 2,65,720 ಕಳೆದ ಸಾಲಿಗೆ ಹೋಲಿಸಿದರೆ ಶೇಕಡ 7.9 ರಷ್ಟು ಹೆಚ್ಚಾಗಿದೆ. ಸಾರ್ವಜನಿಕ ಋಣ ಶೇ. 2.5 ಕಡಿಮೆ ಆಗಿದೆ. ಮುಂದಿನ ವರ್ಷಕ್ಕೆ ಆದಾಯ ಸಂಗ್ರಹ ಹೆಚ್ಚಾಗಲಿದೆ. ಒಟ್ಟಾರೆ ಬೆಳವಣಿಗೆ ಆಶಾದಾಯಕವಾಗಿದೆ. ಸಾಲ ಹೆಚ್ಚಾಗಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್‍ನಿಂದ ಆದಾಯ ಕುಂಠಿತವಾಗಿ, ಖರ್ಚುಗಳು ಹೆಚ್ಚಾಗಿವೆ. ಹಾಗಾಗಿ ಸಾಲ ಹೆಚ್ಚಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿಯಲ್ಲೇ ಸಾಲವನ್ನು ನಿಯಂತ್ರಿಸಲಾಗಿದೆ ಎಂದರು. ವಾಣಿಜ್ಯ ತೆರಿಗೆಯಲ್ಲಿ 11,444 ಕೋಟಿ ರೂ. ಕೊರತೆಯಾಗಿದೆ. ಅಬಕಾರಿ ತೆರಿಗೆ ಹೆಚ್ಚಾಗಿದೆ, ಮೋಟಾರು ವಾಹನ, ನೋಂದಣಿ ಮತ್ತು ಮುದ್ರಾಂಕದಲ್ಲೂ ಕಡಿಮೆಯಾಗಿದೆ. ಇತರ ತೆರಿಗೆಗಳ ಸಂಗ್ರಹದಲ್ಲಿ ಕಡಿಮೆಯಾಗಿದೆ. ಅದಕ್ಕಾಗಿ 2021-22ನೇ ಸಾಲಿನಲ್ಲಿ 21835 ಕೋಟಿ ರೂ. ಆದಾಯ ಕುಂಠಿತವಾಗಿದೆ. 15,645 ಕೋಟಿ ರೂ. ವಿತ್ತಿಯ ಕೊರತೆ ನಿರೀಕ್ಷಿಸಲಾಗಿತ್ತು. ಈಗ ಫೆಬ್ರವರಿ ಅಂತ್ಯಕ್ಕೆ ವಿತ್ತೀಯ ಕೊರತೆಯನ್ನು 6,478 ರೂ.ಗಳಿಗೆ ನಿಯಂತ್ರಿಸಲಾಗಿದೆ. ಬದ್ಧತೆಯ ಖರ್ಚುಗಳು ಶೇ.97ರಷ್ಟಿತ್ತು, ಅದನ್ನು ಶೇ.89ರಷ್ಟಕ್ಕೆ ಕಡಿತ ಮಾಡಲಾಗಿದೆ. ಸಾಲ ಹೆಚ್ಚಳ, ಖರ್ಚು ಹೆಚ್ಛಳ, ಜಿಎಸ್‍ಟಿ ಕೊರತೆಯಿಂದ ರಾಜಸ್ವ ಕೊರತೆ ಶೇ.27.4ರಷ್ಟಿದೆ. ಅದನ್ನು ಶೇ.25ಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದರು.

Translate »