ಸಂಸ್ಕøತ ಭಾಷೆ ಮತ್ತಷ್ಟು ಪ್ರಚಲಿತವಾಗಬೇಕು
ಮೈಸೂರು

ಸಂಸ್ಕøತ ಭಾಷೆ ಮತ್ತಷ್ಟು ಪ್ರಚಲಿತವಾಗಬೇಕು

March 2, 2020

ಮೈಸೂರು, ಮಾ.1(ಆರ್‍ಕೆ)- ನೂರಾರು ವರ್ಷಗಳ ಇತಿಹಾಸವಿರುವ ಸಂಸ್ಕøತ ಭಾಷೆ ಯನ್ನು ಮತ್ತಷ್ಟು ಪ್ರಚಲಿತಗೊಳಿಸಬೇಕೆಂದು ಭಾರತೀಯ ವಿದ್ಯಾಭವನ ಮೈಸೂರು ಶಾಖೆಯ ನಿರ್ದೇಶಕ ಪ್ರೊ.ಎ.ಟಿ.ಭಾಷ್ಯಂ ಅವರು ಇಂದಿಲ್ಲಿ ತಿಳಿಸಿದರು.

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಧ್ಯಾನ ಮಂದಿರದಲ್ಲಿ ಏರ್ಪ ಡಿಸಿದ್ದ `ಸುಧರ್ಮಾ’ ಸಂಸ್ಕøತ ಪತ್ರಿಕೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಸುವರ್ಣ ಸುಧರ್ಮಾ’ ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು. ಭಾರತ ಎಂದರೆ ಸಂಸ್ಕøತಿ ಮತ್ತು ಸಂಸ್ಕøತ ಎಂದು ಖ್ಯಾತಿಯಾ ಗಿತ್ತು. ಆದರೆ ಆಧುನಿಕತೆ ಬೆಳೆದಂತೆ ನಮ್ಮಲ್ಲಿ ಸಂಸ್ಕøತಿ ಹಾಗೂ ಸಂಸ್ಕøತ ಭಾಷೆ ಮರೆಯಾಗುತ್ತಿರುವುದು ಶೋಚನೀಯ. ಪ್ರಾಚೀನ ಪರಂಪರೆಯನ್ನು ಬಿಂಭಿಸುವ ಸಂಸ್ಕøತ ಭಾಷೆಯು ಭಾರತೀಯ ಸಂಸ್ಕøತಿಯ ಪ್ರತೀಕವಾಗಿರುವುದರಿಂದ ಈ ಮೂಲ ಭಾಷೆಯನ್ನು ಬಳಸಿ ಬೆಳೆಸುವುದು ನಮ್ಮ ಆದ್ಯ ಜವಾಬ್ದಾರಿ ಎಂದರು.

ಸುಧರ್ಮಾ ಪತ್ರಿಕೆ ಕಳೆದ 50 ವರ್ಷಗಳಿಂದ ಸಂಸ್ಕøತವನ್ನು ಉಳಿಸುತ್ತಾ ಬಂದಿ ರುವುದು ಶ್ಲಾಘನೀಯ ಎಂದ ಪ್ರೊ.ಭಾಷ್ಯಂ ಅವರು, ಪುಟಗಳನ್ನು ಹೆಚ್ಚಿಸಿ ಜಾಹೀರಾತು ಮತ್ತಷ್ಟು ಬರುವಂತೆ ಮಾಡಿ ಎಂದು ಸಲಹೆ ನೀಡಿದರು.

ಸುಧರ್ಮಾ ಪತ್ರಿಕೆ ಗೌರವ ಸಂಪಾದಕ ವಿದ್ವಾನ್ ಡಾ.ಹೆಚ್.ವಿ.ನಾಗರಾಜರಾವ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ, ಗಣಪತಿ ಸಚಿದಾ ನಂದ ಆಶ್ರಮದ ವ್ಯವಸ್ಥಾಪಕ ಜಿಎಸ್‍ಎನ್ ಮೂರ್ತಿ, ಪತ್ರಿಕೆ ಸಂಪಾದಕ ಸಂಪತ್ ಕುಮಾರ್, ನಂ.ಶ್ರೀಕಂಠಕುಮಾರ್ ಅವರು ಭಾಗವಹಿಸಿದ್ದರು.

Translate »