ಮೈಸೂರು, ಮಾ.1-ವನ ತೋಟಗಾರಿಕೆಗೆ ಅರಣ್ಯ ಇಲಾಖೆಯು ಸುಮಾರು ವರ್ಷಗಳಿಂದ ರೈತರಿಗೆ ಸಸಿಗಳನ್ನ ಉಚಿತವಾಗಿ ವಿತರಿ ಸುವುದರೊಂದಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳನ್ನು ಹಮ್ಮಿಕೊಂಡಿದೆ. ನಮ್ಮ ನೆಲ, ಜಲ, ಗಾಳಿ, ವನ್ಯಜೀವಿ, ಪ್ರಕೃತಿ ಯನ್ನು ಸಂರಕ್ಷಿsಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ತಿಳಿಸಿದರು. ಅರಣ್ಯ ಪರಿಸರ ಮತ್ತು ಯೋಗ ಪ್ರತಿಷ್ಠಾನ ಮೈಸೂರು ಮತ್ತು ಸಾಮಾಜಿಕ ಅರಣ್ಯ ವಿಭಾಗ ಸಹಯೋಗದಲ್ಲಿ ಮೈಸೂರು ಮೃಗಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ವನ ತೋಟಗಾರಿಕೆಗೆ ಸಂಬಂಧಿಸಿ ದಂತೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯದ ಜೊತೆಗೆ ತೋಟಗಾರಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರೈತರು ತಮ್ಮ ಜಮೀನಿನಲ್ಲಿ ಮರ ಗಿಡಗಳನ್ನು ಬೆಳೆಸುವು ದರಿಂದ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವು ದರ ಜೊತೆಗೆ ಆರೋಗ್ಯವಂತರಾಗಿರಬಹುದು. ಇತ್ತೀಚಿನ ದಿನಗಳಲ್ಲಿ ನಾವು ವನ ತೋಟಗಾರಿಕೆಯಲ್ಲಿ ಅಭಿವೃದ್ಧಿ ಯನ್ನು ಕಾಣುತ್ತಿದ್ದೇವೆ. ಮತ್ತಷ್ಟು ಹೆಚ್ಚು ರೈತರನ್ನು ಪ್ರೋತ್ಸಾ ಹಿಸಿ ಅವರನ್ನು ಉತ್ತಮ ಸ್ಥಾನಕ್ಕೆ ತರಬೇಕು ಎಂಬುದೇ ನಮ್ಮ ಗುರಿ ಎಂದು ಹೀರಲಾಲ್ ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ತೋಟಗಾರಿಕೆ ಉಪನಿರ್ದೇಶಕ ರುದ್ರೇಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‍ಕುಮಾರ್, ಕಾರ್ಯಯೋಜನೆ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾನುಪ್ರಕಾಶ್, ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್, ಮೈಸೂರು ಸಾಮಾಜಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್, ಮೈಸೂರು ಸಾಮಾಜಿಕ ಅರಣ್ಯ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹಾದೇವ್, ಸನ್ಮಾನಿತರಾದ ಪ್ರಗತಿಪರ ರೈತ ಗೌತಮ್ ಕದಮ್, ಉದ್ಯಮಿ ಪಿರೋಜ್ ಅಸ್ಗರ್ ಆಲಿ, ಸಾಮಿಲ್ ಉದ್ಯಮಿ ಸಿರಾಜ್ ಅಸ್ಗರ್ ಆಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.