ಮೈಸೂರು,ಜು.14 (ಆರ್‍ಕೆ)-ಮೈಸೂ ರಿನ ಯಾದವಗಿರಿ ಜಾಯ್ ಐಸ್ ಕ್ರೀಂ ಫ್ಯಾಕ್ಟರಿ ರಸ್ತೆ ಮತ್ತು ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್‍ಮೆಂಟ್ ಜಂಕ್ಷನ್‍ನಲ್ಲಿ ಉಂಟಾಗಿ ರುವ ಗುಂಡಿಯು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶ್ರೀರಾಮಕೃಷ್ಣ ವಿದ್ಯಾಶಾಲಾ ಕಡೆಯಿಂದ ಬರುವವರು ಹಾಗೂ ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್‍ಮೆಂಟ್ ರಸ್ತೆ ಯಿಂದ ಬಂದು ತಿರುಗುತ್ತಿದ್ದಂತೆಯೇ ದ್ವಿಚಕ್ರ ವಾಹನ ಸವಾರರಿಗೆ ಜಾಯ್ ಐಸ್ ಕ್ರೀಂ ಫ್ಯಾಕ್ಟರಿ ರಸ್ತೆಯ ಮಧ್ಯೆ ಇರುವ ಈ ಗುಂಡಿ ಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲವೇನೋ ಎಂಬ ಅಪಾಯವಿದೆ.
ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಅದರಲ್ಲಿ ಬಿದ್ದು ಗಾಯಗೊಂಡಿ ದ್ದಾರೆ. ಮಂಜುನಾಥಪುರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಗೋಕುಲಂ, ಯಾದವಗಿರಿಯಂತಹ ಹಲವು ಬಡಾ ವಣೆಗಳಿಗೆ ಸಂಪರ್ಕ ಕಲ್ಪಿಸುವ ಈ ವಾಹನ ದಟ್ಟಣೆ ರಸ್ತೆ ಮಧ್ಯೆ ಗುಂಡಿ ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಲು ಮುಂದಾಗಿಲ್ಲ ಎಂದು ಸ್ಥಳೀ ಯರು ಆರೋಪಿಸುತ್ತಿದ್ದಾರೆ. ಪ್ರತೀ ದಿನ ಈ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿ ಬಿದ್ದು ಗಾಯಗಳಾಗುತ್ತಿರುವ ಘಟನೆಗಳು ಸಂಭವಿಸುತ್ತಿರುವುದು ಕಂಡರೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ರಿಪೇರಿ ಮಾಡಿಸಿ ಅಪಾಯ ತಪ್ಪಿಸಲು ಮನಸ್ಸು ಮಾಡಿಲ್ಲ ಎಂದೂ ಸಾರ್ವಜನಿ ಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.