ಮೈಸೂರು, ಜು. 14 (ಆರ್‍ಕೆ)- ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಿ ರುವ ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು 8.35 ಲಕ್ಷ ರೂ. ಮೌಲ್ಯದ 185 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಹನುಮಂತನಗರ ನಿವಾಸಿ ದೇವರಾಜು ಅವರ ಮಗ ಹೆಚ್.ಡಿ. ಶಶಿಧರ (24) ಹಾಗೂ ಕಿರಂಗೂರಿನ ಲೇಟ್ ಕುಮಾರ್ ಅವರ ಮಗ ಕೆ. ಗುರು ಅಲಿಯಾಸ್ ಫ್ಲವರ್ (24) ಬಂಧಿತ ಸರಗಳ್ಳರು. ಕೃಷ್ಣರಾಜ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಎನ್. ಆರ್. ಪೊಲೀಸ್ ಠಾಣಾ ಸರಹದ್ದಿನ ಪುಷ್ಪಾಶ್ರಮ ಸರ್ಕಲ್ ಬಳಿ ಗಸ್ತಿನಲ್ಲಿದ್ದಾಗ ಜುಲೈ 10ರಂದು ಬೆಳಿಗ್ಗೆ 6.15 ಗಂಟೆ ವೇಳೆ ಅನುಮಾನಾಸ್ಪದವಾಗಿ ಓಡಾಡು ತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿ ದ್ದರು. ಠಾಣೆಗೆ ಕರೆತಂದು ವಿಚಾರಣೆ ಗೊಳಪಡಿಸಿದಾಗ ಜುಲೈ 7ರಂದು ಸಂಜೆ 4.30 ರಲ್ಲಿ ಕುವೆಂಪುನಗರ ಠಾಣಾ ವ್ಯಾಪ್ತಿಯ ಮಧುವನ ಬಡಾವಣೆಯ ವಿವೇಕ ವಿದ್ಯಾಲಯದ ಕ್ರಾಸ್ ಬಳಿ ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ಮನೆಗೆ ಹೋಗುತ್ತಿದ್ದ ಮಹಿಳೆಯ 40 ಗ್ರಾಂ ಮತ್ತು 20 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿ ಯಾಗಿದ್ದರು ಎಂಬುದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಬ್ಬರೂ ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿ ಮೂರು ಮತ್ತು ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಸರಗಳ್ಳತನ ಮಾಡಿ ರುವುದು ಪತ್ತೆಯಾಯಿತು.
ಆರೋಪಿಗಳಿಂದ 185 ಗ್ರಾಂ ತೂಕದ 8.35 ಲಕ್ಷ ರೂ. ಮೌಲ್ಯದ 5 ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ದ್ವಿಚಕ್ರ ವಾಹನಗಳನ್ನು ಕುವೆಂಪು ನಗರ ಠಾಣೆ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನ ದಂತೆ ಕೆ.ಆರ್. ಉಪವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಅವರ ಉಸ್ತುವಾರಿಯಲ್ಲಿ ನಡೆದ ಪತ್ತೆ ಕಾರ್ಯ ದಲ್ಲಿ ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ಜಿ.ಸಿ.ರಾಜು, ಸಬ್ ಇನ್ಸ್‍ಪೆಕ್ಟರ್ ಇರ್ಷಾದ್, ಎಎಸ್‍ಐಗಳಾದ ಕಾಂತರಾಜು, ಧನಂ ಜಯ್, ಮುರಳೀಗೌಡ, ಸಿಬ್ಬಂದಿಗಳಾದ ಎಂ.ಪಿ.ಮಂಜುನಾಥ್, ಪಿ.ಕೆ.ಭಗತ್, ಎಸ್. ಮಹದೇವ, ಯೋಗೀಶ್, ಸಾಗರ, ಗಿರೀಶ್, ಪುಟ್ಟಪ್ಪ, ಮೇಘ್ಯನಾಯ್ಕ್, ಹರೀಶ್, ಸಿದ್ದ ರಾಮ ಪೂಜಾರಿ, ನಾಗೇಶ್, ಶ್ರೀನಿವಾಸ, ಮಾದೇಶ ಅವರು ಪಾಲ್ಗೊಂಡಿದ್ದರು.