ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡ ಮಾಲೀಕರ ನಿರ್ಧಾರ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡ ಮಾಲೀಕರ ನಿರ್ಧಾರ

July 15, 2020

ಮೈಸೂರು, ಜು. 14(ಆರ್‍ಕೆ)- ಹೋಟೆಲ್, ಕಲ್ಯಾಣ ಮಂಟಪ ಹಾಗೂ ಸಿನಿಮಾ ಮಂದಿರಗಳಿಗೆ ಪಾಲಿಕೆ ವಿಧಿಸಿರುವ ದುಪ್ಪಟ್ಟು ಆಸ್ತಿ ತೆರಿಗೆಯನ್ನು ಕಡಿಮೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡಗಳ ಮಾಲೀಕರು ನಿರ್ಧರಿಸಿದ್ದಾರೆ.

ಮೈಸೂರಿನ ಜೆ.ಪಿ.ನಗರದ ಇಂಡಸ್ಟ್ರಿ ಯಲ್ ಸಬರ್ಬ್‍ನಲ್ಲಿರುವ ಸಿಂಧೂರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ ಹೋಟೆಲ್ ಮಾಲೀಕರ ಸಂಘ, ಕಲ್ಯಾಣ ಮಂಟಪಗಳ ಮಾಲೀ ಕರ ಸಂಘ ಹಾಗೂ ಚಲನಚಿತ್ರ ಪ್ರದರ್ಶ ಕರ ಸಂಘದ ಪದಾಧಿಕಾರಿಗಳು, ಮೈಸೂರು ನಗರ ಪಾಲಿಕೆ ವಿಧಿಸಿರುವ ಆಸ್ತಿ ತೆರಿಗೆ ಪಾವತಿಸಲು ಕೋವಿಡ್ ಸಂಕಷ್ಟ ಪರಿ ಸ್ಥಿತಿಯಲ್ಲಿ ಸಾಧ್ಯವಾಗದ ಕಾರಣ, ದುಪ್ಪಟ್ಟು ತೆರಿಗೆ ದರ ಕಡಿಮೆ ಮಾಡು ವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲು ನಿರ್ಧರಿಸಿದರು.

ಈಗಾಗಲೇ ಕೋವಿಡ್-19 ಲಾಕ್ ಡೌನ್ ನಿರ್ಬಂಧದಿಂದಾಗಿ ಮಾರ್ಚ್ ನಿಂದೀಚೆಗೆ ಉದ್ದಿಮೆಗಳು ಸ್ಥಗಿತ ಗೊಂಡಿದ್ದು, ಸ್ವಚ್ಛತೆ, ವಿದ್ಯುತ್ ಬಿಲ್, ಸಿಬ್ಬಂದಿಗಳ ಸಂಬಳ ಹಾಗೂ ಕಟ್ಟಡಗಳ ನಿರ್ವಹಣೆಯೇ ದುಸ್ತರವಾಗಿರುವಾಗ ಈ ದುಬಾರಿ ಕಟ್ಟಡ ತೆರಿಗೆ ಪಾವತಿಸಲು ಸಾಧ್ಯ ವಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರಲು ಸಂಘಗಳ ಪದಾಧಿಕಾರಿಗಳು ತೀರ್ಮಾನಿಸಿದರು. ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾ ಯಣಗೌಡ, ಕಾರ್ಯದರ್ಶಿ ರವೀಂದ್ರ, ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಉಪಾ ಧ್ಯಕ್ಷ ಎಸ್.ಮೂರ್ತಿ, ಕಾರ್ಯದರ್ಶಿ ವೆಂಕಟೇಶ್, ಚಲನಚಿತ್ರ ವಿತರಕರ ಸಂಘದ ಕಾರ್ಯದರ್ಶಿ ರಾಜಾರಾಮ್ ಸೇರಿದಂತೆ 50 ಮಂದಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »