ಹೃದಯಾಘಾತದಿಂದ ಮಹಿಳೆ ಸಾವು
ಮೈಸೂರು

ಹೃದಯಾಘಾತದಿಂದ ಮಹಿಳೆ ಸಾವು

November 13, 2018

ಮೈಸೂರು: ಮನೆಯ ಮೆಟ್ಟಿಲು ಹತ್ತುವಾಗ ತೀವ್ರ ಹೃದಯಾಘಾತ ಕ್ಕೊಳ ಗಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ರಾಮಕೃಷ್ಣನಗರ ನಿವಾಸಿ ಪುರುಷೋ ತ್ತಮ ಅವರ ಪತ್ನಿ ಶ್ರೀಮತಿ ಶೈಮಾ (45) ಸಾವನ್ನಪ್ಪಿದವರು. ಕೇರಳದ ತಲಚೇರಿ ಯಲ್ಲಿ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿ ಕುಟುಂಬದವರೊಂದಿಗೆ ಆಗಮಿಸಿದ ಅವರು, ಕಾರಿನಿಂದಿಳಿದು ಬ್ಯಾಗು ಹಿಡಿದುಕೊಂಡು ಮನೆಯ ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ 7.30 ಗಂಟೆ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡು ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶೈಮಾ ಅವರ ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »