ರಾಜ್ಯದಲ್ಲಿ ಸಾವಿನ ಸಂಖ್ಯೆ 200ರ ಗಡಿಗೆ
ಮೈಸೂರು

ರಾಜ್ಯದಲ್ಲಿ ಸಾವಿನ ಸಂಖ್ಯೆ 200ರ ಗಡಿಗೆ

April 24, 2021

ಶುಕ್ರವಾರ 190 ಜನ ಸಾವು 26,962 ಮಂದಿಗೆ ಸೋಂಕು
ಮೈಸೂರಲ್ಲಿ 645 ಜನರಿಗೆ ಕೊರೊನಾ, 9 ಮಂದಿ ಸಾವು.

ಮೈಸೂರು ಜಿಲ್ಲೆ ಲಸಿಕೆ ವಿವರ

ಮೈಸೂರು ನಗರ 5,341, ಮೈಸೂರು ಗ್ರಾಮಾಂತರ 2100, ತಿ.ನರಸೀಪುರ 1,358, ನಂಜನಗೂಡು 1,528, ಹುಣಸೂರು 819, ಹೆಚ್.ಡಿ.ಕೋಟೆ 1,616, ಪಿರಿಯಾಪಟ್ಟಣ 1,434, ಕೆ.ಆರ್.ನಗರ ತಾಲೂಕಿನಲ್ಲಿ 1,978 ಹಾಗೂ ಖಾಸಗಿ ಕೇಂದ್ರ ಗಳಲ್ಲಿ 3,195 ಸೇರಿ ಶುಕ್ರವಾರ ಒಟ್ಟು 19,369 ಜನ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಒಟ್ಟು 3,88,889 ಜನರಿಗೆ ಲಸಿಕೆ ನೀಡಲಾಗಿದ್ದು, ಇವರಲ್ಲಿ 39,896 ಜನ ಎರಡೂ ಡೋಸೇಜ್ ಲಸಿಕೆ ಪಡೆದುಕೊಂಡಿದ್ದಾರೆ.
ಮೈಸೂರು, ಏ.23(ಎಸ್‍ಬಿಡಿ)- ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ 200ರ ಗಡಿ ತಲು ಪಿರುವುದು ಆತಂಕ ಹೆಚ್ಚಿಸಿದೆ.

ಮೈಸೂರಿನಲ್ಲಿ 39 ವರ್ಷದ ಮಹಿಳೆ, 45, 72 ಹಾಗೂ 65 ವರ್ಷದ ವ್ಯಕ್ತಿಗಳು ಸೇರಿ ರಾಜ್ಯದಲ್ಲಿ ಶುಕ್ರವಾರ 190 ಸೋಂಕಿತರು ಮೃತ ಪಟ್ಟಿದ್ದಾರೆ. ಇವರಲ್ಲಿ ಹಾಸನದ 27 ವರ್ಷದ ಯುವಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 31 ವರ್ಷದ ಮಹಿಳೆ, ಚಾಮರಾಜನಗರದ 34 ವರ್ಷದ ವ್ಯಕ್ತಿ ಸೇರಿದಂತೆ 40 ವರ್ಷದೊಳಗಿನ 9 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 14,075ಕ್ಕೆ ಹೆಚ್ಚಿದೆ.

ಮೈಸೂರಲ್ಲಿ 645 ಪ್ರಕರಣ: ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ 645 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕು ಬಾಧಿತರ ಸಂಖ್ಯೆ 65,456ಕ್ಕೆ ಏರಿಕೆಯಾಗಿದೆ. ಇಂದು 602 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯ ವರೆಗೆ 59,289 ಮಂದಿ ಸೋಂಕುಮುಕ್ತರಾಗಿದ್ದಾರೆ. ಜಿಲ್ಲೆಯ ಲ್ಲಿನ್ನು 5,027 ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ 1,148 ಸೋಂಕಿ ತರು ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಶುಶ್ರೂಷೆ ಪಡೆಯುತ್ತಿದ್ದು, ಇವರ ಆರೋಗ್ಯದ ಸ್ಥಿತಿಗತಿ ಬಗ್ಗೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ 372 ಮಂದಿ, ಸರ್ಕಾರಿ ಆಸ್ಪತ್ರೆಗಳಲ್ಲಿ 334 ಹಾಗೂ ಹೆಲ್ತ್‍ಕೇರ್ಸ್‍ಗಳಲ್ಲಿ 124 ಸೋಂಕಿತರು ದಾಖಲಾಗಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ 1,761 ಹಾಗೂ ಹೆಲ್ತ್‍ಕೇರ್ ಕೇಂದ್ರಗಳಲ್ಲಿ 1,288 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 27 ಸಾವಿರ ಗಡಿ: ಮೈಸೂರು 645, ಬಾಗಲಕೋಟೆ 88, ಬಳ್ಳಾರಿ 695, ಬೆಳಗಾವಿ 220, ಬೆಂಗಳೂರು ಗ್ರಾಮಾಂತರ 588, ಬೆಂಗಳೂರು ನಗರ 16,662, ಬೀದರ್ 416, ಚಾಮ ರಾಜನಗರ 249, ಚಿಕ್ಕಬಳ್ಳಾಪುರ 471, ಚಿಕ್ಕಮಗಳೂರು 229, ಚಿತ್ರದುರ್ಗ 133, ದಕ್ಷಿಣಕನ್ನಡ 485, ದಾವಣಗೆರೆ 200, ಧಾರವಾಡ 472, ಗದಗ 74, ಹಾಸನ 248, ಹಾವೇರಿ 74, ಕಲಬುರಗಿ 742, ಕೊಡಗು 295, ಕೋಲಾರ 504, ಕೊಪ್ಪಳ 84, ಮಂಡ್ಯ 519, ರಾಯಚೂರು 428, ರಾಮನಗರ 206, ಶಿವಮೊಗ್ಗ 225, ತುಮಕೂರು 1,004, ಉಡುಪಿ 282, ಉತ್ತರಕನ್ನಡ 181, ವಿಜಯಪುರ 429 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 114 ಸೇರಿದಂತೆ ರಾಜ್ಯದಲ್ಲಿ ಶುಕ್ರವಾರ 26,962 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಇದರೊಂದಿಗೆ ಇಲ್ಲಿಯವರೆಗೆ ಒಟ್ಟು 12,74,959 ಜನರಿಗೆ ಸೋಂಕು ಬಾಧಿಸಿದಂತಾಗಿದೆ. ಇಂದಿನ ಸಂಖ್ಯೆ ಸೇರಿ ಇಲ್ಲಿವರೆಗೆ 10,46,554 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯ ದಲ್ಲಿನ್ನು 2,14,311 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಇವರಲ್ಲಿ 1,128 ಮಂದಿ ತೀವ್ರ ನಿಗಾ ಘಟಕ(ಐಸಿಯು)ದಲ್ಲಿದ್ದಾರೆ.

 

Translate »