ಕಾಂಗ್ರೆಸ್ ಸೇರುವ ನಿರ್ಧಾರ  ಜಿ.ಟಿ.ದೇವೇಗೌಡರಿಗೆ ಸೇರಿದ್ದು
ಮೈಸೂರು

ಕಾಂಗ್ರೆಸ್ ಸೇರುವ ನಿರ್ಧಾರ ಜಿ.ಟಿ.ದೇವೇಗೌಡರಿಗೆ ಸೇರಿದ್ದು

November 10, 2021

ಮೈಸೂರು, ನ.9(ಎಸ್‍ಬಿಡಿ)- ಜಿ.ಟಿ. ದೇವೇಗೌಡರು ರಾಜಕೀಯ ಎದು ರಾಳಿಯೇ ಹೊರತು ನನ್ನ ವೈರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು.

ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇರ್ಗಳ್ಳಿ ಗ್ರಾಮ ದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹೊಂಬಾಳಮ್ಮ ಮತ್ತು ಶ್ರೀ ಸಿದ್ದರಾಮೇ ಶ್ವರ ಸಮುದಾಯ ಭವನವನ್ನು ಶಾಸಕ ಜಿಟಿಡಿ ಅವರೊಂದಿಗೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನ ನನಗೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೆ ಇಲ್ಲಿನ ಜನರ ಆಶೀರ್ವಾದವೇ ಕಾರಣ. ಇಲ್ಲಿ ನಾನು ಗೆದ್ದಿ ದ್ದೇನೆ, ಸೋತಿದ್ದೇನೆ. ಎಲ್ಲಾ ಸಂದರ್ಭ ದಲ್ಲೂ ಜನ ಆಶೀರ್ವಾದ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಗೆಲುವು-ಸೋಲು ಸಹಜ. ಬಹಳ ದಿನ ಗಳ ನಂತರ ನಾನಿಲ್ಲಿಗೆ ಬಂದಿದ್ದೇನೆ. ನೀವೆಲ್ಲಾ ಅತ್ಯಂತ ಪ್ರೀತಿ, ಅಭಿಮಾನದಿಂದ ಸ್ವಾಗ ತಿಸಿ, ಗೌರವಿಸಿದ್ದೀರಿ. ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಜಿ.ಟಿ.ದೇವೇ ಗೌಡ ಬಹಳ ವರ್ಷ ನಮ್ಮ ಜೊತೆ ಇದ್ದು ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದಾನೆ ಗಿರಾಕಿ. ಚುನಾವಣೆಯಲ್ಲಿ ಪರಸ್ಪರ ಎದು ರಾಳಿಯಾಗಿದ್ದವರು ವೇದಿಕೆ ಹಂಚಿಕೊಂಡಿ ರುವ ಬಗ್ಗೆ ಜನರಿಗೆ ಕುತೂಹಲವಿದೆ. ಆದರೆ ನಾನಿಲ್ಲಿ ರಾಜಕೀಯ ಮಾತನಾಡಲು ಹೋಗು ವುದಿಲ್ಲ. ಜಿಟಿಡಿ ಗೆದ್ದು ಶಾಸಕರಾಗಿದ್ದಾರೆ. ನಾನು ಇಲ್ಲಿ ಸೋತಿದ್ದೇನೆ. ಆದರೆ ಜನ ಕರೆದಾಗ ಒಂದೇ ವೇದಿಕೆಗೆ ಬರಲೇ ಬೇಕು. ಜಿಟಿಡಿ ಹಾಗೂ ನಾನು ಬಹಳ ವರ್ಷ ಜೊತೆಯಲ್ಲಿದ್ದವರು. ಇವರು ನನ್ನ ರಾಜಕೀಯ ಎದುರಾಳಿಯೇ ಹೊರತು ವೈರಿಯಲ್ಲ. ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ ಎಂದು ತಿಳಿಸಿದರು.

ನಿರ್ಧಾರ ಜಿಟಿಡಿಗೆ ಸೇರಿದ್ದು: ನನ್ನ ಹಾಗೂ ಜಿ.ಟಿ.ದೇವೇಗೌಡರ ನಡುವಿನ ಸಂಬಂಧದ ಬಗ್ಗೆ ಅವರು ಹೇಳಿದ್ದೆಲ್ಲವೂ ಸತ್ಯ. ಈಗ ನಾವು ಬೇರೆ ಬೇರೆ ಪಕ್ಷ ದಲ್ಲಿದ್ದೇವೆ. ಜಿಟಿಡಿ ಕಾಂಗ್ರೆಸ್ ಸೇರುತ್ತಾರೆ ಎಂದು ಊಹಾಪೋಹ ಇದೆ. ಆದರೆ ಈ ವಿಚಾರವಾಗಿ ಇನ್ನೂ ಮಾತುಕತೆ ನಡೆ ದಿಲ್ಲ. ಆದರೆ ಕಾಂಗ್ರೆಸ್‍ಗೆ ಬರಬೇಕೆಂದು ಅವರಿಗೆ ಮನಸ್ಸಿರುವುದು ನಿಜ. ಅತ್ತ ದೇವೇ ಗೌಡರು(ಮಾಜಿ ಪ್ರಧಾನಿ) ಹಾಗೂ ಕುಮಾರಸ್ವಾಮಿ ಜಿಟಿಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡು ತ್ತಿದ್ದಾರೆ. ನಿರ್ಧಾರ ಜಿಟಿಡಿಗೆ ಸೇರಿದ್ದು. 136 ವರ್ಷದ ಇತಿಹಾಸವುಳ್ಳ ಕಾಂಗ್ರೆಸ್ ಎಲ್ಲಾ ಧರ್ಮ, ಜಾತಿ, ಭಾಷೆಯವರನ್ನು ಒಟ್ಟಿಗೆ ಕರೆದೊಯ್ಯುವ ಪಕ್ಷ. ಕಾಂಗ್ರೆಸ್ ತತ್ವ ಸಿದ್ಧಾಂತ ವನ್ನು ಒಪ್ಪಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಸ್ವಾಭಿಮಾನ ರಾಜಕಾರಣ: ನಾನು ಈವ ರೆಗೂ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿದವನಲ್ಲ. ಮುಂದೆಯೂ ನಾನು ಹೀಗೆಯೇ ಇರುತ್ತೇನೆ. ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣ, ಸಮಾನ ಅವ ಕಾಶ ಸಿದ್ಧಾಂತದಡಿ ಮುಂದುವರೆಯುವು ದರಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರ ಕ್ಕಾಗಿ ನಾನೆಂದೂ ಸ್ವಾಭಿಮಾನ ಬಿಟ್ಟು, ತಲೆ ತಗ್ಗಿಸಿದವನಲ್ಲ. ಮುಂದೆಯೂ ಸ್ವಾಭಿ ಮಾನದಿಂದ ರಾಜಕಾರಣ ಮಾಡುತ್ತೇನೆ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾ ತರು ಸೇರಿದಂತೆ ರಾಜ್ಯದ ಎಲ್ಲಾ ಜನ ನನಗೆ ಶಕ್ತಿ ತುಂಬಿದ್ದಾರೆ. ಜನರಿಗೆ ಅವ ಮಾನವಾಗುವ ಸಣ್ಣ ಕೆಲಸವನ್ನೂ ನಾನು ಮಾಡುವುದಿಲ್ಲ ಎಂದು ನುಡಿದರು.

ನಮ್ಮೂರಿಗೆ ಬಂದಂತಾಗಿದೆ: ಕೇರ್ಗಳ್ಳಿ, ಸಾಲುಂಡಿ, ಬಡಗಲಹುಂಡಿ ಮತ್ತು ಸುತ್ತ ಮುತ್ತಲ ಗ್ರಾಮಗಳು ನಮ್ಮ ಊರು ಇದ್ದ ಹಾಗೆ. 1983ರಿಂದಲೂ ಚುನಾವಣೆಗಳಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ಕೇರ್ಗಳ್ಳಿ ಯಲ್ಲಿ ಬಹಳ ಸುಂದರವಾದ ಸಮು ದಾಯ ಭವನ ನಿರ್ಮಿಸಲಾಗಿದೆ. ಇದು ಈ ಭಾಗದ ಗ್ರಾಮಸ್ಥರ ಶುಭಕಾರ್ಯಗಳಿಗೆ ಪ್ರಯೋಜನಕಾರಿಯಾಗಲಿದೆ. ಇಂತಹ ಭವನಗಳು ಗ್ರಾಮೀಣ ಭಾಗದಲ್ಲಿ ಅತ್ಯಂತ ವಿರಳ. ಅತ್ಯಂತ ಸಂತೋಷದಿಂದ ಉದ್ಘಾ ಟನೆ ನೆರವೇರಿಸಿದ್ದೇವೆ. ಈ ಭಾಗದ ಜನರಿಗೆ ಮತ್ತೊಮ್ಮೆ ಕೃತಜ್ಞತೆ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ್, ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಕೆ.ಆರ್. ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರೂ ಆದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಕಾಂಗ್ರೆಸ್ ಮುಖಂಡರಾದ ಕೆ.ಮರೀಗೌಡ, ಉದ್ಯಮಿ ಕೃಷ್ಣಕುಮಾರ್ ಸಾಗರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಮಣ್ಯ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮೈಸೂರು ನಗರ ಪಾಲಿಕೆ ಸದಸ್ಯ ಗೋಪಿ, ಎಪಿಎಂಸಿ ಅಧ್ಯಕ್ಷ ಬಸವರಾಜು, ನಿರ್ದೇಶಕ ಬಸವರಾಜು, ಶ್ರೀ ಹೊಂಬಾಳಮ್ಮ ಮತ್ತು ಶ್ರೀ ಸಿದ್ದರಾಮೇ ಶ್ವರ ಟ್ರಸ್ಟ್ ಅಧ್ಯಕ್ಷ ಎಂ.ಕೆಂಚಪ್ಪ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಪುಟ್ಟಸ್ವಾಮಿ, ಸತೀಶ್‍ಕುಮಾರ್, ಕೋಟೆಹುಂಡಿ ಮಹ ದೇವ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆತ್ಮೀಯ ಸ್ವಾಗತ: ಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳಾಗಿ ಗ್ರಾಮಕ್ಕೆ ಬಂದಿದ್ದ ಸಿದ್ದರಾಮಯ್ಯ ಹಾಗೂ ಜಿಟಿಡಿ, ಇಂದು ಒಟ್ಟಿಗೆ ಸಮುದಾಯ ಭವನ ಉದ್ಘಾ ಟಿಸಲು ಆಗಮಿಸಿದ್ದರು. ಗ್ರಾಮಸ್ಥರು ಪಟಾಕಿ ಸಿಡಿಸಿ, ಕಹಳೆ ಊದಿ ಸ್ವಾಗತಿಸಿ ದರು. ಸಮುದಾಯ ಭವನದ ಮುಖ್ಯ ದ್ವಾರದಲ್ಲಿ ಜೆಸಿಬಿ ಮೇಲಿಂದ ಹೂಮಳೆ ಸುರಿಸುವ ಮೂಲಕ ಇಬ್ಬರು ನಾಯಕ ರನ್ನೂ ಆತ್ಮೀಯವಾಗಿ ಬರಮಾಡಿಕೊಂ ಡರು. ಸಭಾ ಕಾರ್ಯಕ್ರಮದ ವೇದಿಕೆ ಯಲ್ಲಿ ಇಬ್ಬರಿಗೂ ಅಕ್ಕಪಕ್ಕದಲ್ಲೇ ಆಕರ್ಷಕ ಆಸನ ವ್ಯವಸ್ಥೆ ಮಾಡಿದ್ದರು. ನೆರೆದಿದ್ದ ಯುವಸಮುದಾಯ ಶಿಳ್ಳೆ, ಕೇಕೆಯೊಂದಿಗೆ ಸಂಭ್ರಮಿಸಿದರು. ಸಿದ್ದರಾಮಯ್ಯನವರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಿಸಿರುವುದನ್ನು ನಾಮಫಲಕದಲ್ಲೂ ಪ್ರಕಟಿಸಿರುವುದು ವಿಶೇಷ.

Translate »