ಉತ್ಪಾದಕರಿಂದ ಹಾಲು ಖರೀದಿ ದರ 1.50 ರೂ. ಇಳಿಕೆ
ಮೈಸೂರು

ಉತ್ಪಾದಕರಿಂದ ಹಾಲು ಖರೀದಿ ದರ 1.50 ರೂ. ಇಳಿಕೆ

July 8, 2020

ಮೈಸೂರು, ಜು.7(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟ(ಮೈಮುಲ್) ಹಾಲು ಖರೀದಿ ದರವನ್ನು ಇಳಿಕೆ ಮಾಡಿದ್ದು, ನೂತನ ದರ ಬುಧವಾರ(ಜು.8)ದಿಂದಲೇ ಅನ್ವಯ ವಾಗಲಿದೆ. ಜು.3ರಂದು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ತಾತ್ಕಾಲಿಕ ಪರಿಷ್ಕರ ಣೆಗೆ ನಿರ್ಧರಿಸಲಾಯಿತು. ಅದರಂತೆ ಉತ್ಪಾ ದಕರಿಂದ ಖರೀದಿ ಮಾಡುವ ಹಾಲಿನ ದರವನ್ನು ಲೀಟರ್‍ಗೆ 1.50 ರೂ. ಇಳಿಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಲೀಟರ್‍ಗೆ 25 ರೂ. ನೀಡಲಾಗುವುದು. ಕೊರೊನಾ ಸಂಕಷ್ಟದಲ್ಲೂ ಹಾಲು ಉತ್ಪಾದಕರಿಗೆ ತೊಂದರೆಯಾಗದಂತೆ ಹಣ ಬಟವಾಡೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ನಿತ್ಯ 7 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಶೇ.10ರಷ್ಟು ಸಂಗ್ರಹ ಹೆಚ್ಚಿದೆ. ಆದರೆ ಮಾರಾಟದಲ್ಲಿ ಶೇ.15ರಷ್ಟು ಕಡಿಮೆಯಾಗಿದೆ. ಸುಮಾರು 40 ಕೋಟಿ ರೂ. ಮೌಲ್ಯದ ಹಾಲಿನ ಪೌಡರ್, ಬೆಣ್ಣೆ ದಾಸ್ತಾನಿದೆ ಎಂದು ಅವರು ತಿಳಿಸಿದ್ದಾರೆ.

Translate »