ಅಗ್ನಿಪಥ ಯೋಜನೆಅಗ್ನಿವೀರರಿಗೆ ಮೂರು ವರ್ಷದÀ ಪದವಿ ಕೋರ್ಸ್ ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟ
ಮೈಸೂರು

ಅಗ್ನಿಪಥ ಯೋಜನೆಅಗ್ನಿವೀರರಿಗೆ ಮೂರು ವರ್ಷದÀ ಪದವಿ ಕೋರ್ಸ್ ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟ

June 17, 2022

ನವದೆಹಲಿ, ಜೂ.೧೬- ಕೇಂದ್ರ ಸರ್ಕಾರ ನಿರುದ್ಯೋಗ ಹೋಗಲಾಡಿ ಸಲು ‘ಅಗ್ನಿಪಥ’ ಯೋಜನೆಯಡಿ ೪೬ ಸಾವಿರ ಅಗ್ನಿವೀರರನ್ನು ೨೦೨೩ರ ಜುಲೈನಿಂದ ನೇಮಿಸಿಕೊಳ್ಳಲಿದೆ. ಇನ್ನು ೩ ತಿಂಗಳಲ್ಲಿ ಈ ಹುದ್ದೆಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಹೊಂದಿದೆ ಕೇಂದ್ರ ಸರ್ಕಾರ. ಅತ್ಯಾಕರ್ಷಕ ಸಂಬಳ, ಭತ್ಯೆ, ಸೌಲಭ್ಯಗಳ ಜತೆಗೆ ಪದವಿ ಕೋರ್ಸ್ ನೀಡುವುದಾಗಿ ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರದ `ಅಗ್ನಿಪಥ’ ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ಅಗ್ನಿವೀರರಿಗೆ ಕೌಶಲ ಆಧಾರಿತ ೩ ವರ್ಷಗಳ ವಿಶೇಷ ಪದವಿ ಕೋರ್ಸ್ ಅನ್ನು ಕೇಂದ್ರ ಶಿಕ್ಷಣ ಸಚಿವಾಲಯದಡಿ ಇಂದಿರಾಗಾAಧಿ ಮುಕ್ತ ವಿಶ್ವವಿದ್ಯಾಲಯ ಈ ಪದವಿ ಕೋರ್ಸ್ ಆರಂಭಿಸಲಿದ್ದು, ಇದಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ಕಾರ್ಯಕ್ರಮ ಜಾರಿಗೆ ಇಗ್ನೊ (IಉಓಔU) ಜತೆಗೆ ಒಡಂಬಡಿಕೆ ಮಾಡಿಕೊಳ್ಳ ಲಿವೆ. ಅಗ್ನಿವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್ ನಲ್ಲಿ ಕ್ರೆಡಿಟ್‌ಗಳಾಗಿ ಗುರುತಿಸಲಾಗುತ್ತದೆ. ಈ ಮೂಲಕ ಅವರು ತಮ್ಮ ಭವಿಷ್ಯದಲ್ಲಿ ತಮಗಿಷ್ಟವಾದ ನಾಗರಿಕ ವೃತ್ತಿಜೀವನ

ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ೪ ವರ್ಷದ ಅವಧಿಗೆ ಸೇನೆಗೆ ಸೇರುವ ಅಗ್ನಿಪಥದ ಅಗ್ನಿವೀರರಿಗೆ ಉದ್ಯೋಗ, ಸಂಬಳದ ಜತೆಗೆ ಮೂರು ವರ್ಷಗಳ ಕೌಶಲ ಆಧರಿತ ವಿಶೇಷ ಪದವಿ ಕೋರ್ಸ್ ಆರಂಭಿಸಲಿದೆ ಶಿಕ್ಷಣ ಸಚಿವಾಲಯ. ಹುದ್ದೆಯ ಕರ್ತವ್ಯ ನಿರ್ವಹಣೆ ಜತೆಗೆಯೇ ಅಗ್ನಿವೀರರಿಗೆ ಡಿಗ್ರಿ ಪದವಿ ಸಿಗುವ ಸೌಲಭ್ಯ ಇದಾಗಿದೆ. ಈ ಮೂಲಕ ೧೨ನೇ ತರಗತಿ ಆಧಾರದಲ್ಲಿ ಅಗ್ನಿವೀರ ಹುದ್ದೆಗೆ ಸೇರುವ ಅಭ್ಯರ್ಥಿಗಳು ಕೌಶಲ ಆಧರಿತ ಪದವಿ ಶಿಕ್ಷಣವನ್ನು ಸೇನಾ ಕರ್ತವ್ಯದ ಜತೆಗೆಯೇ ಪಡೆಯಬಹುದಾಗಿದೆ.

ಇದರಿಂದ ಡಿಗ್ರಿ ಪಡೆಯಲು ಮತ್ತೆ ಮೂರು ವರ್ಷ ಸಮಯ ನೀಡುವ ಅಗತ್ಯವು ಇಲ್ಲ. ಅಗ್ನಿವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್ನಲ್ಲಿ ಕ್ರೆಡಿಟ್‌ಗಳಾಗಿ ಗುರುತಿಸಲಾಗುತ್ತದೆ. ಪದವಿ ಕೋರ್ಸ್ಗೆ ಅಗತ್ಯವಿರುವ ಶೇಕಡ ೫೦ ರಷ್ಟು `ಕ್ರೆಡಿಟ್’ ಅನ್ನು ಅಗ್ನಿವೀರರು ಕೌಶಲ ತರಬೇತಿ ಮೂಲಕ ಪಡೆಯುತ್ತಾರೆ. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (IಉಓಔU) ಈ ಕ್ರೆಡಿಟ್ ಆಧಾರಿತ ಪದವಿ ಕೋರ್ಸ್ ಆರಂಭಿಸಲಿದೆ. ಇದಕ್ಕಾಗಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಇಗ್ನೊದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Translate »