ಆ.24ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಲು ವಿವಿಧ ಸಂಘಟನೆಗಳ ಆಗ್ರಹ
ಮೈಸೂರು

ಆ.24ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಲು ವಿವಿಧ ಸಂಘಟನೆಗಳ ಆಗ್ರಹ

August 11, 2020

ಮೈಸೂರು, ಆ.10(ಆರ್‍ಕೆಬಿ)- ಕೆಪಿಎಸ್‍ಸಿ ಆ.24ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆ ಯನ್ನು ಕೂಡಲೇ ಮುಂದೂಡಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿವೆ.

ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಏರ್ಪಡಿ ಸಿದ್ದ ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಯಾವುದೇ ನೇಮಕಾತಿ ನಡೆಸ ದಂತೆ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಕೆಪಿಎಸ್ಸಿ ಗಾಳಿಗೆ ತೂರಿದೆ. ಪರೀಕ್ಷೆ ಬರೆಯುವವರ ಪೈಕಿ ಶೇ.20ರಷ್ಟು ಮಂದಿ ಕೊರೊನಾ ಕರ್ತವ್ಯದಲ್ಲಿ ನಿಯೋಜಿತರಾಗಿದ್ದಾರೆ. ಇವರಿಗೆ ಪರೀಕ್ಷೆ ಬರೆಯಲು ¸ಮಯಾವಕಾಶವೇ ಸಿಗುವುದಿಲ್ಲ ಎಂದು ಹೇಳಿದರು.

ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗುತ್ತಿರುವ ಕೆಪಿಎಸ್ಸಿ ಸದಸ್ಯರು, ಅಧಿಕಾರಿಗಳ ಹಿತಾಸಕ್ತಿಗಾಗಿ ಅಭ್ಯರ್ಥಿಗಳ ಪ್ರಾಣದ ಜತೆ ಚೆಲ್ಲಾಟ ವಾಡುವುದು ಸರಿಯಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹೋಲಿಕೆ ಮಾಡಲಾಗದು. ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಆ.24ರ ವೇಳೆಗೆ ದಿನಕ್ಕೆ 10ರಿಂದ 12ರಡು ಸಾವಿರ ಆಗಲಿದೆ ಎಂದು ತಜ್ಞರು ಹೇಳು ತ್ತಿದ್ದಾರೆ. ಇಂಥ ಆತಂಕದ ವಾತಾವರಣದಲ್ಲಿ ಗರ್ಭಿಣಿಯರು ಇತರೆ ಕಾಯಿಲೆಗಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ನಿರ್ಭಯ ವಾಗಿ ಬಂದು ಪರೀಕ್ಷೆ ಎದುರಿಸಲು ಸಾಧ್ಯವೇ? ಈ ಪರೀಕ್ಷೆ ಯನ್ನು ಎಸ್‍ಎಸ್‍ಎಲ್‍ಸಿ, ಪಿಯುಸಿ ಮಕ್ಕಳ ಪರೀಕ್ಷೆಗೆ ಹೋಲಿ ಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಕೆಎಎಸ್ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಆ.11ರ ಮಂಗಳ ವಾರ ಬೆಳಿಗ್ಗೆ 11.30ಕ್ಕೆ ಪಾಲಿಕೆ ಮುಂದೆ ಪತ್ರ ಚಳವಳಿ ನಡೆಸಲಾಗು ವುದು. ಪರೀಕ್ಷೆ ವಾಪಸ್ ಪಡೆಯದಿದ್ದರೆ ಕೆಪಿಎಸ್‍ಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಗೋಷ್ಠಿ ಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಸೋಸಲೆ ಮಹೇಶ್, ಯುವ ಮಖಂಡ ಆರ್.ಕೆ.ರವಿ ಇನ್ನಿತರರು ಇದ್ದರು.

Translate »