ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಪಾವತಿ ಜೊತೆಗೆ ಸೇವಾ ಭದ್ರತೆ ಕಲ್ಪಿಸಲು ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಆಗ್ರಹ
ಮೈಸೂರು

ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಪಾವತಿ ಜೊತೆಗೆ ಸೇವಾ ಭದ್ರತೆ ಕಲ್ಪಿಸಲು ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಆಗ್ರಹ

August 11, 2020

ಮೈಸೂರು, ಆ.9(ಎಸ್‍ಬಿಡಿ)- ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಬಿಡುಗಡೆ ಮಾಡುವು ದರೊಂದಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಸೇವಾ ಭದ್ರತೆ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 15-20 ವರ್ಷದಿಂದ ಕಡಿಮೆ ವೇತನಕ್ಕೆ ಕಾರ್ಯ ನಿರ್ವಹಿ ಸುತ್ತಿರುವ ಉಪನ್ಯಾಸಕರು ಬಹಳಷ್ಟಿದ್ದಾರೆ. ಹಾಗೆಯೇ 2019-20ನೇ ಶೈಕ್ಷಣಿಕ ವರ್ಷದಲ್ಲಿ 14 ಸಾವಿರಕ್ಕಿಂತ ಹೆಚ್ಚು ಉಪನ್ಯಾಸಕರು ಸೇವೆ ಸಲ್ಲಿಸಿದ್ದು ಅವರಿಗೆ ಕಳೆದ ಮಾರ್ಚ್‍ವರೆಗೆ ಮಾತ್ರ ವೇತನ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ ನಂತರ ಪದವಿ ಕಾಲೇಜು ತೆರೆಯಲು ಸರ್ಕಾರ ಸೂಚಿಸಿರು ವುದರಿಂದ ಅತಿಥಿ ಉಪನ್ಯಾಸಕರ ಆತಂಕ ಹೆಚ್ಚಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ 12 ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಜುಲೈ 31ರವರೆಗೂ ಅತಿಥಿ ಹಾಗೂ ತಾತ್ಕಾಲಿಕ ಉಪನ್ಯಾಸಕರ ಸೇವಾ ಅವಧಿಯನ್ನು ಪರಿಗಣಿಸಬೇಕೆಂದು ಕೇಂದ್ರ ಮಾನವ ಸಂಪ ನ್ಮೂಲ ಇಲಾಖೆ ಆದೇಶಿಸಿರುವುದರಿಂದ ಏಪ್ರಿಲ್‍ನಿಂದ ಜುಲೈವರೆಗಿನ 4 ತಿಂಗಳ ವೇತನವನ್ನು ತಕ್ಷಣ ಬಿಡು ಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 60 ವರ್ಷ ವಯ ಸ್ಸಿನವರೆಗೂ ಸೇವಾ ಭದ್ರತೆ ನೀಡಲಾಗಿದೆ. ಎನ್‍ಇಟಿ, ಎಸ್‍ಎಲ್‍ಇಟಿ ಹಾಗೂ ಪಿ.ಹೆಚ್‍ಡಿ ಪಡೆದಿರುವ, 10 ವರ್ಷಕ್ಕಿಂತ ಹೆಚ್ಚು ಸೇವಾ ಅನುಭವ ಹೊಂದಿರುವ ಉಪನ್ಯಾಸಕರಿಗೆ 36 ಸಾವಿರ ರೂ., ಎನ್‍ಇಟಿ, ಎಸ್‍ಎಲ್‍ಇಟಿ, ಪಿ.ಹೆಚ್‍ಡಿ ಪದವಿ ಪಡೆಯದವರಿಗೆ 31 ಸಾವಿರ ರೂ. ಹಾಗೂ 10 ವರ್ಷಕ್ಕಿಂತ ಕಡಿಮೆ ಸೇವಾ ಅನು ಭವ ಹೊಂದಿರುವ ಉಪನ್ಯಾಸಕರಿಗೆ ಕ್ರಮವಾಗಿ 25 ಹಾಗೂ 20 ಸಾವಿರ ರೂ. ನಿಗದಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಹಲವಾರು ವರ್ಷ ಗಳಿಂದ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕರ್ತವ್ಯ ನಿರ್ವಹಿಸಿ ದವರನ್ನು ಮುಂದುವರೆಸುವುದರೊಂದಿಗೆ ಶೈಕ್ಷಣಿಕ ಸಾಲಿನ ಪ್ರಾರಂಭದಲ್ಲೇ ನೇಮಿಸಿಕೊಳ್ಳಬೇಕು. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದು ಕೊಂಡು ತರಗತಿ ನಡೆಸಬೇಕಿರುವುದರಿಂದ ಒಂದು ತರಗತಿಯನ್ನು 40-50 ವಿದ್ಯಾರ್ಥಿಗಳಿಗೆ ಸೀಮಿತ ಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡರು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

Translate »