ಕುರುಬಾರಹಳ್ಳಿಯಲ್ಲಿ ಅಕ್ರಮವಾಗಿ ನೀರು ಸಂಗ್ರಹಕ್ಕೆ ಬಳಸಿದ ಮೋಟಾರ್‍ಗಳ ವಶ
ಮೈಸೂರು

ಕುರುಬಾರಹಳ್ಳಿಯಲ್ಲಿ ಅಕ್ರಮವಾಗಿ ನೀರು ಸಂಗ್ರಹಕ್ಕೆ ಬಳಸಿದ ಮೋಟಾರ್‍ಗಳ ವಶ

August 11, 2020

ಮೈಸೂರು, ಆ.10(ಪಿಎಂ)- ಕುರು ಬಾರಹಳ್ಳಿಯಲ್ಲಿ ಮುಖ್ಯ ಪೈಪ್‍ಲೈನಿಗೆ ಮೊಟಾರ್ ಅಳವಡಿಸಿ ನೇರವಾಗಿ ನೀರು ಪಡೆಯುತ್ತಿದ್ದ ಮನೆಗಳ ಮೇಲೆ ಸೋಮ ವಾರ ಬೆಳಿಗ್ಗೆ ದಾಳಿ ನಡೆಸಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಅಕ್ರಮ ವಾಗಿ ನೀರು ಸಂಗ್ರಹಿಸಲು ಬಳಸುತ್ತಿದ್ದ ಮೋಟಾರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಹಾಗೂ ಪಾಲಿಕೆ ಸದಸ್ಯರ ಸಹಕಾರದೊಂದಿಗೆ ದಾಳಿ ನಡೆಸಿದ ನಗರ ಪಾಲಿಕೆ ವಾಣಿವಿಲಾಸ ವಾಟರ್ ವಕ್ರ್ಸ್ ಅಧಿಕಾರಿಗಳು, ಅಕ್ರಮವಾಗಿ ನೀರು ಸಂಗ್ರ ಹಿಸಲು ಬಳಸಿದ್ದ ವಿದ್ಯುತ್ ಮೋಟಾರ್ ಗಳನ್ನು ವಶಪಡಿಸಿಕೊಂಡರು. ಅಲ್ಲದೆ, ಮತ್ತೆ ಇದು ಪುನರಾವರ್ತನೆ ಆದಲ್ಲಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚ ರಿಕೆ ನೀಡಿದರು. ಇಲ್ಲಿನ 1, 2 ಮತ್ತು 3ನೇ ಕ್ರಾಸ್‍ಗಳಲ್ಲಿ ದಾಳಿ ನಡೆಸಿ 8 ವಿದ್ಯುತ್ ಮೋಟಾರ್‍ಗಳನ್ನು ವಶಪಡಿಸಿಕೊಳ್ಳ ಲಾಯಿತು. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾ ಗಾರದ ಪೂರ್ವ ಉಪವಿಭಾಗದ ಎಇಇ ಬಿ.ಜಿ.ವಿನಯ್‍ಕುಮಾರ್, ಹಲವು ದಿನ ಗಳಿಂದ ಅಕ್ರಮವಾಗಿ ನೀರು ಸಂಗ್ರಹಿಸ ದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದೇ ಅಕ್ರಮ ಮುಂದುವರೆಸಿ ದ್ದರು. ಇಂದು ದಾಳಿ ನಡೆಸಿ ಮೋಟಾರ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಮತ್ತೆ ಪುನರಾವರ್ತನೆ ಆದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು. ಈ ಕಾರ್ಯಾ ಚರಣೆ ನಿರಂತರವಾಗಿ ಮುಂದುವರೆಯ ಲಿದೆ ಎಂದು ತಿಳಿಸಿದರು.

ಮೈಸೂರು ನಗರದಲ್ಲಿ ಹಲವಡೆ ಈ ರೀತಿ ಅಕ್ರಮವಾಗಿ ನೀರು ಸಂಗ್ರಹಿಸುವ ಸಂಬಂಧ ದೂರುಗಳಿವೆ. ನೀರಿನ ಶುಲ್ಕ ವಸೂಲಿ, ಅಕ್ರಮ ನೀರು ಸಂಗ್ರಹ ಸಂಬಂಧ ನಿಗಾ ವಹಿಸಲು ಜೂನ್ 26ರಂದು ಎರಡು ಗಸ್ತು ವಾಹನಗಳಿಗೆ ಚಾಲನೆ ನೀಡಲಾ ಗಿದೆ. ಕಾರ್ಯಾಗಾರದ ಪೂರ್ವ ಉಪ ವಿಭಾಗ ಮತ್ತು ಪಶ್ಚಿಮ ಉಪವಿಭಾಗದಲ್ಲಿ ಈ ಒಂದೊಂದು ವಾಹನಗಳು ನಿಗಾ ವಹಿಸಲಿವೆ ಎಂದು ಹೇಳಿದರು.

Translate »