ಮಂಡ್ಯ,ಜು.11(ನಾಗಯ್ಯ)- ಕೋವಿಡ್ ರಕ್ಷಾ ಸಾಮಗ್ರಿ ಗಳಾದ ಪಿಪಿಇ ಕಿಟ್ ಮತ್ತಿತರ ಪರಿಕರ ಗಳ ಖರೀದಿಯಲ್ಲಿ ವ್ಯತ್ಯಾಸವಾಗಿರು ವುದು ನಿಜ. ಆದರೆ ವಿಪಕ್ಷ ನಾಯಕ ಸಿದ್ದ ರಾಮಯ್ಯ ಆರೋಪಿಸಿರುವಂತೆ ಭಾರೀ ಪ್ರಮಾಣದ ಅವ್ಯವಹಾರ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಏಮ್ಸ್ ಆಸ್ಪತ್ರೆಯ ಆವರಣದಲ್ಲಿಂದು ನೂತನ ಹಾಪ್‍ಕಾಮ್ಸ್ ಮಳಿಗೆ ಉದ್ಘಾ ಟಿಸಿ ಮಾತನಾಡಿದ ಅವರು, ಕೊರೊನಾದ ಪ್ರಾರಂಭದ ದಿನಗಳಲ್ಲಿ ಟೆಂಡರ್ ಕರೆಯದೆ ಮತ್ತು ದರ ಪರಿಶೀಲಿಸದೆ ಕೋವಿಡ್ ಚಿಕಿತ್ಸಾ ಸಾಮಗ್ರಿಗಳ ಖರೀದಿಸಿದ ಕಾರಣ ಅಲ್ಪ-ಸ್ವಲ್ಪ ವ್ಯತ್ಯಾಸ ಆಗಿರುವುದು ಸತ್ಯ ಎಂದರು. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಇದುವರೆಗೆ 550ರಿಂದ 600 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ. ಆದರೆ ವಿರೋಧ ಪಕ್ಷದ ನಾಯಕರು 2 ಸಾವಿರ-3 ಸಾವಿರ ಕೋಟಿ ಅವ್ಯವ ಹಾರವಾಗಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತನಿಖೆ ನಡೆಸಲಿ, ನಮಗೇನು ಭಯವಿಲ್ಲ. ಸರ್ಕಾರ ನಡೆಸಿ ರುವ ಅನುಭವವಿರುವ ಸಿದ್ದರಾಮಯ್ಯನವರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಸಹಕರಿಸುವುದನ್ನು ಬಿಟ್ಟು, ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಏನೂ ಕೆಲಸವಿಲ್ಲ.
ನಮ್ಮ ಸಿಎಂ ಯಾವುದೇ ಅಕ್ರಮಗಳಿಗೆ ಅವಕಾಶ ಕೊಡಲ್ಲ. ಸ್ವತಃ ಅವರು ಸಹ ಅಕ್ರಮದಲ್ಲಿ ಭಾಗಿಯಾಗಿಲ್ಲ. ಕೋವಿಡ್‍ನ ಆರಂಭದ ದಿನಗಳಲ್ಲಿ ಆಗಿರುವ ವ್ಯತ್ಯಾಸ ವನ್ನು ಹೊರತುಪಡಿಸಿ ಈಗ ಒಂದು ರೂಪಾಯಿಯೂ ಅನ್ಯಾಯವಾಗಿಲ್ಲ ಎಂದರು.
ಸಚಿವರೂ ಸಾರ್ವಜನಿಕರೇ: ಕೋವಿಡ್ ನಿಯಮಾನುಸಾರ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧವಿರುವ ದೇವಾಲಯಗಳಿಗೆ ಸಚಿವರ ಭೇಟಿ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವರು, ನಾವೆಲ್ಲರೂ ಹಿಂದೂಗಳಾಗಿದ್ದು, ಹಿಂದೂ ಧರ್ಮದನ್ವಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ನಮ್ಮ ದಿನನಿತ್ಯದ ಕರ್ಮಗಳಲ್ಲೊಂದು ಎಂದರು. ಮಳಿಗೆಯ ಉದ್ಘಾಟನೆಯ ನಂತರ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕೊರೊನಾ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಕೈಗೊಂಡಿ ರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಹಸೀಲ್ದಾರ್ ಕುಂಞ ಅಹಮ್ಮದ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಅವರಿಂದ ಮಾಹಿತಿ ಪಡೆದರು.