ಮೈಸೂರು ಎನ್.ಆರ್. ಕ್ಷೇತ್ರದಲ್ಲಿ ಮಿನಿ ಲಾಕ್‍ಡೌನ್ ಚಿಂತನೆ
ಮೈಸೂರು

ಮೈಸೂರು ಎನ್.ಆರ್. ಕ್ಷೇತ್ರದಲ್ಲಿ ಮಿನಿ ಲಾಕ್‍ಡೌನ್ ಚಿಂತನೆ

July 12, 2020

ಮೈಸೂರು, ಜು. 11(ಆರ್‍ಕೆ)- ದಿನೇ ದಿನೆ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರಿನ ಎನ್.ಆರ್. ವಿಧಾನ ಸಭಾ ಕ್ಷೇತ್ರದಲ್ಲಿ ಮಿನಿ ಲಾಕ್‍ಡೌನ್‍ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನ ಮಂಡಕಳ್ಳಿ ಬಳಿ ಸಿದ್ಧಗೊಂಡಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಎನ್.ಆರ್.ಕ್ಷೇತ್ರದಲ್ಲಿ ಪಾಸಿಟಿವ್ ಕೇಸ್‍ಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಕಂಟೇನ್ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾರ್ವ ಜನಿಕರಿಗೂ ತೊಂದರೆಯಾಗುತ್ತಿರುವುದರಿಂದ ಒಂದು ವಾರದವರೆಗೆ ಅಲ್ಲಿ ಮಿನಿ ಲಾಕ್‍ಡೌನ್ ನಿರ್ಬಂಧ ವಿಧಿಸುವುದು ಸೂಕ್ತ ಎಂದು ಕಂಡು ಬಂದಿರುವುದರಿಂದ ಜನರು ಜಿಲ್ಲಾಡಳಿತದೊಂ ದಿಗೆ ಸಹಕರಿಸಬೇಕು ಎಂದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಇತ್ತೀ ಚೆಗೆ ಎನ್.ಆರ್. ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ಪಾಸಿಟಿವ್ ಕೇಸ್‍ಗಳು ಜಾಸ್ತಿಯಾಗಿವೆ. 200 ಮೀಟರ್ ವ್ಯಾಪ್ತಿಯಲ್ಲೇ 4 ಸಾವುಗಳು ಸಂಭವಿಸುತ್ತಿರು ವುದರಿಂದ ಸೋಂಕು ಸಮುದಾಯಕ್ಕೆ ಹರಡಿರಬಹು ದೆಂಬ ಆತಂಕವಿರುವ ಕಾರಣ ಕೋವಿಡ್ ನಿಯಂತ್ರಿ ಸಲು ಒಂದು ವಾರಕಾಲ ಅಲ್ಲಿ ಮಿನಿ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ಅಭಿಪ್ರಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಷೇತ್ರದಾದ್ಯಂತ ಸಮೀಕ್ಷೆ ನಡೆಸಿ ವಯಸ್ಸಾದವರು, ಇನ್ನಿತರ ಖಾಯಿಲೆಗಳಿರುವವರು, ಕೊರೊನಾ ಸೋಂಕಿನ ಗುಣಲಕ್ಷಣಗಳಿರುವವರ ಬಗ್ಗೆ ಸಮೀಕ್ಷೆ ನಡೆಸಿ, ಎನ್.ಆರ್. ಕ್ಷೇತ್ರದಲ್ಲಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಲು ಕಾರಣವೇನು ಎಂಬು ದರ ಕುರಿತಂತೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸು ತ್ತಿದ್ದಾರೆ ಎಂದು ಅಭಿರಾಂ ಜಿ.ಶಂಕರ್ ತಿಳಿಸಿದರು. ಆ ಸಂಬಂಧ ತಾವು ಅಲ್ಲಿನ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರುಗಳೊಂದಿಗೆ ಸಭೆ ನಡೆಸಿ ಸಮೀಕ್ಷೆ ವೇಳೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹ ಕರಿಸಲು ಜನರಿಗೆ ಸಲಹೆ
ನೀಡುವಂತೆ ಕೋರಿಕೊಂಡಿದ್ದೇನೆ. ಅದಕ್ಕೆ ಧಾರ್ಮಿಕ ಮುಖಂಡರು ಸಹಕರಿಸುವುದಾಗಿ ತಿಳಿಸಿದ್ದಾರೆ. ಸೋಂಕು ಸಮುದಾಯಕ್ಕೆ ಹರಡದಂತೆ ಹಾಗೂ ಸಾವು ಸಂಭವಿಸದಂತೆ ಮುಂಜಾಗರೂಕ ಕ್ರಮವಾಗಿ ಆರಂಭದಿಂದಲೇ ಸ್ವ್ಯಾಬ್ ಪರೀಕ್ಷೆ ಮಾಡಿಸಿ, ಚಿಕಿತ್ಸೆ ನೀಡಲು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಕೊರೊನಾ ಸೋಂಕಿನ ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಿ ಗುಣಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ, ಪರೀಕ್ಷೆಯನ್ನೇ ಮಾಡಿಸಿಕೊಳ್ಳದೆ ಸೋಂಕು ತೀವ್ರ ಸ್ವರೂಪಕ್ಕೆ ತಿರುಗಿ ಅಂತಿಮ ಹಂತದಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದು ಚಿಕಿತ್ಸೆ ಫಲಕಾರಿ ಯಾಗದೇ ಸಾವನ್ನಪ್ಪುತ್ತಿರುವುದು ಕೊರೊನಾ ವಾರಿಯರ್ಸ್‍ಗೆ ಸವಾಲಾಗಿರುವುದರಿಂದ ಸಾವಿನ ಪ್ರಮಾಣ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಎನ್.ಆರ್. ಕ್ಷೇತ್ರದ ಜನರು ಸಹಕರಿಸಬೇಕು ಎಂದು ಅಭಿರಾಂ ಜಿ. ಶಂಕರ್ ಮನವಿ ಮಾಡಿದ್ದಾರೆ.

Translate »