ವಿಜಯನಗರ ಮನೆಗಳ ಸುತ್ತಲಿನ ಕೊಳಚೆ ನೀರು ತೆರವು ಆರಂಭ
ಮೈಸೂರು

ವಿಜಯನಗರ ಮನೆಗಳ ಸುತ್ತಲಿನ ಕೊಳಚೆ ನೀರು ತೆರವು ಆರಂಭ

February 3, 2022

ಮೈಸೂರು,ಫೆ.2(ಎಂಕೆ)-ಮೈಸೂರಿನ ವಿಜಯನಗರ 4ನೇ ಹಂತದ 1ನೇ ಘಟ್ಟದಲ್ಲಿ ರುವ ಮನೆಗಳ ಸುತ್ತಲು ಕಳೆದ 3 ತಿಂಗಳಿಂದ ನಿಂತಿರುವ ಯುಜಿಡಿ ಕೊಳಚೆ ನೀರು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಲಾಯಿತು.

ಮನೆಗಳ ಸುತ್ತಲು ಯುಜಿಡಿ ಕೊಳಚೆ ನೀರು ನಿಂತು ಕೆರೆಯಂ ತಾಗಿದ್ದು, ದುರ್ವಾಸನೆಗೆ ನಿವಾಸಿಗಳು ಪರದಾಡುತ್ತಿರುವ ಕುರಿತು ಜ.28ರ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಪ್ರತಿಷ್ಠಿತ ಬಡಾವಣೆ ಯಲ್ಲೊಂದು ಕೊಳಚೆ ನೀರಿನ ಕೆರೆ ನಿರ್ಮಾಣ, ಹಾವು, ಚೇಳು ಗಳ ಕಾಟ, ನಿವಾಸಿಗಳ ನರಳಾಟ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಜ.29ರಂದು ಮುಡಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುನೀಲ್, ಅಸಿಸ್ಟೆಂಟ್ ಇಂಜಿನಿಯರ್ ನಂದೀಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇಂದು ಕೂಡ ಸ್ಥಳಕ್ಕೆ ಭೇಟಿ ನೀಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುನೀಲ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್, ಜೆಸಿಬಿ ಹಾಗೂ ಒಳಚರಂಡಿ ಸ್ವಚ್ಛತಾ ಟ್ರಕ್ ಮೂಲಕ ನಿಂತಿರುವ ಯುಜಿಡಿ ಕೊಳಚೆ ನೀರನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. 2-3 ದಿನಗಳಲ್ಲಿ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸುವುದರ ಜೊತೆಗೆ ಯಜಿಡಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

Translate »