ಪೊಲೀಸ್ ಗೃ.ನಿ.ಸ.ಸಂಘದ ಚುನಾವಣೆ; ನಂಜುಂಡೇಗೌಡ ಬಣ ಜಯಭೇರಿ
ಮೈಸೂರು

ಪೊಲೀಸ್ ಗೃ.ನಿ.ಸ.ಸಂಘದ ಚುನಾವಣೆ; ನಂಜುಂಡೇಗೌಡ ಬಣ ಜಯಭೇರಿ

March 2, 2020

ಮೈಸೂರು,ಮಾ.1(ವೈಡಿಎಸ್)-ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ 9 ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾ ವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷರಾದ ನಿವೃತ್ತ ಡಿವೈಎಸ್‍ಪಿ ನಂಜುಂಡೇಗೌಡ ಬಣ ಜಯಭೇರಿ ಬಾರಿಸಿದೆ. ನಂಜುಂಡೇಗೌಡ ಬಣದಲ್ಲಿ ಹಾಲಿ ನಿರ್ದೇಶಕರೇ ಸ್ಪರ್ಧಿಸಿದ್ದರು.

9 ಸ್ಥಾನಗಳಿಗೆ ಮೂವರು ಮಹಿಳೆಯರು ಸೇರಿದಂತೆ 14 ಮಂದಿ ಸ್ಪರ್ಧಿಸಿದ್ದರು. ನೇತಾಜಿ ನಗರದಲ್ಲಿನ ಸಂಘದ ಕಚೇರಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 2 ಬೂತ್‍ಗಳಲ್ಲಿ ಮತದಾನ ನಡೆಯಿತು. ಒಟ್ಟು 321 ಮತಗಳಿದ್ದು, 242 ಮಂದಿ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಸಿ.ಗಿರೀಶ್ ಕಾರ್ಯನಿರ್ವಹಿಸಿದರು.

ಚುನಾಯಿತರು: ನಂಜುಂಡೇಗೌಡ(222 ಮತ), ಎಂ.ಡಿ.ಶಿವರಾಜು(205), ಸಿ.ವಿ.ರಾಜು(203), ನಾಗ ರಾಜು(199), ಮರೀಗೌಡ(195), ಟಿ.ಎನ್. ನಾಗೇಶ್ (193), ಎಸ್.ಸಿದ್ದರಾಜೇಗೌಡ(193) (ಎಲ್ಲರೂ ಸಾಮಾನ್ಯ ಕ್ಷೇತ್ರ), ಜೆ.ಬೇಬಿ(208), ಹೆಚ್.ಸಿ.ಸುಂದರಿ (204) (ಮಹಿಳಾ ಮೀಸಲು) ಚುನಾಯಿತರಾದರು.

ಸಂಘದಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿದ್ದು, 3 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡದ 1 ಮೀಸಲು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸಿಲ್ಲ. ಎಂ.ಎಸ್.ಮೋಹನ್(ಪರಿಶಿಷ್ಟ ಜಾತಿ), ಎಸ್.ಪುಟ್ಟಣ್ಣ(ಹಿಂ. ವರ್ಗ ಪ್ರವರ್ಗ ಎ), ಎ.ಎನ್.ನಾಗೇಂದ್ರ ಪ್ರಕಾಶ್(ಹಿಂ.ವರ್ಗ ಪ್ರವರ್ಗ ಬಿ) ಅವಿರೋಧ ಆಯ್ಕೆಯಾದವರು.

Translate »