`ರನ್ ಫಾರ್ ವೈಲ್ಡ್’ ಮ್ಯಾರಥಾನ್‍ನಲ್ಲಿ 1600 ಮಂದಿ ಭಾಗಿ
ಮೈಸೂರು

`ರನ್ ಫಾರ್ ವೈಲ್ಡ್’ ಮ್ಯಾರಥಾನ್‍ನಲ್ಲಿ 1600 ಮಂದಿ ಭಾಗಿ

March 2, 2020

ಮೈಸೂರು,ಮಾ.1(ಎಂಟಿವೈ)- ಮೈಸೂರಿನಲ್ಲಿ ಎಟಿಎಂಇ ಇಂಜಿನಿಯ ರಿಂಗ್ ಕಾಲೇಜು ವತಿಯಿಂದ ಭಾನು ವಾರ ಆಯೋಜಿಸಿದ್ದ ಮ್ಯಾರಥಾನ್‍ನಲ್ಲಿ ಸಾರ್ವಜನಿಕರು ಸೇರಿದಂತೆ 1600ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.

ಕಾಲೇಜಿನ ವಾರ್ಷಿಕೋತ್ಸವ ಹಿನ್ನೆಲೆ ಯಲ್ಲಿ `ರನ್ ಫಾರ್ ವೈಲ್ಡ್’ ಮತ್ತು `ಬದುಕಿ, ಬದುಕಲು ಬಿಡಿ’ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಮ್ಯಾರಥಾನ್‍ಗೆ ಇಂದು ಬೆಳಿಗ್ಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವನ್ಯ ಸಂಪತ್ತಿನ ಸಂರಕ್ಷಣೆ ಘೋಷಣೆಯೊಂ ದಿಗೆ ಮ್ಯಾರಥಾನ್ ನಡೆಸುತ್ತಿರುವುದು ಶ್ಲಾಘ ನೀಯ. ಪ್ರಸ್ತುತ ಸಂದರ್ಭದಲ್ಲಿ ವನ್ಯಸಂಪ ತ್ತಿನ ಸಂರಕ್ಷಣೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಉಂಟಾದ ಭಾರಿ ಪ್ರವಾಹದಿಂದ ನೂರಾರು ಮನೆ ಹಾಗೂ ಸಾವಿರಾರು ಎಕರೆ ಕೃಷಿ ಭೂಮಿ ಕೊಚ್ಚಿ ಹೋಗಿತ್ತು. ಆ ಭಾಗದಲ್ಲಿ ಅಗತ್ಯಕ್ಕನುಗುಣವಾದ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಇಲ್ಲದಿರುವುದೇ ಪ್ರವಾಹದಂತಹ ಅವಘಡ ಸಂಭವಿಸಲು ಕಾರಣ. ನಾವು ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಒತ್ತು ನೀಡಿದರೆ ಪ್ರಾಕೃತಿಕ ಅವಘಡಗಳು ಎದುರಾಗುವು ದಿಲ್ಲ. ಸಂವಿಧಾನದ 4ನೇ ಭಾಗದಲ್ಲಿ ಅರಣ್ಯ ಸಂಪತ್ತನ್ನು ಉಳಿಸುವುದು ನಮ್ಮ ಮೂಲ ಭೂತ ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ. ಇದನ್ನು ಚಾಚೂತಪ್ಪದೆ ಪಾಲಿಸಿದರೆ ಅರಣ್ಯ ಸಂಪತ್ತನ್ನು ರಕ್ಷಿಸಬಹುದು ಎಂದರು.

1600 participants in the Run for Wild marathon-1

ಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗದಿಂದ ಆರಂಭವಾದ ಮ್ಯಾರ ಥಾನ್ ದೊಡ್ಡಗಡಿಯಾರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆ, ದೇವ ರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ರಾಮ ಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ವೃತ್ತ, ಹಾರ್ಡಿಂಗ್ ವೃತ್ತದ ಮೂಲಕ ಸಾಗಿ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣ ತಲುಪಿ ಸಮಾಪ್ತಿಗೊಂಡಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾರ್ವಜನಿ ಕರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಮೊದಲು ಬಂದ ಇಬ್ಬರಿಗೆ ಬಹುಮಾನ ವಿತರಿಸಲಾಯಿತು. ಹುಚ್ಚೇಗೌಡ ಪ್ರಥಮ (1,000 ರೂ.) ಹಾಗೂ ಮನೀಶ್ ದ್ವಿತೀಯ (500 ರೂ.) ಬಹುಮಾನ ಪಡೆದರು.

ಈ ಸಂದರ್ಭ ಎಟಿಎಂಇಸಿಇ ಗೌರವಾ ಧ್ಯಕ್ಷ ಎಲ್.ಅರುಣ್‍ಕುಮಾರ್, ಕಾರ್ಯ ದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್. ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Translate »