ರಾಜಕಾರಣದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗುತ್ತಿಲ್ಲ
ಮೈಸೂರು

ರಾಜಕಾರಣದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗುತ್ತಿಲ್ಲ

March 2, 2020

ಮೈಸೂರು,ಮಾ.1-ರಾಜಕಾರಣ ದಲ್ಲಿ ನಮ್ಮ ನೆರಳನ್ನು ನಾವೇ ನಂಬಲಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿ ದರು. ಖಾಸಗಿ ಕಾರ್ಯಕ್ರಮಕ್ಕಾಗಿ ಭಾನು ವಾರ ಮೈಸೂರಿಗೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮ ದವರೊಂದಿಗೆ ಮಾತನಾಡುತ್ತಾ, 30-40 ವರ್ಷ ಒಂದು ಪಕ್ಷದಲ್ಲಿದ್ದು, ಅಧಿ ಕಾರ ಅನುಭವಿಸಿದವರೇ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ. ಇನ್ನು ಬಿಜೆಪಿ ಯಲ್ಲಿ ಹೊಸಬರನ್ನು ಬೆಳೆಸುತ್ತಿದ್ದಾರೆ. ಅಲ್ಲಿ ಹಳಬರು ಸುಮ್ಮನೇ ಕೂರುವಂ ತಹ ಪರಿಸ್ಥಿತಿ ತಲೆದೋರಿದ್ದು, ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಏನಾಗುತ್ತೆ ಎಂಬುದು ಗೊತ್ತಿಲ್ಲ ಎಂದರು. ಸಿದ್ದ ರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಮೂಲ ಕಾಂಗ್ರೆಸ್ಸಿಗರು ದೂರು ನೀಡಿ ದ್ದಾರೆ ಎಂಬುದನ್ನು ಅಲ್ಲಗಳೆದ ಅವರು, ಕಾಂಗ್ರೆಸ್‍ನಲ್ಲಿ ಮೂಲ, ವಲಸೆ ಎಂಬುದಿಲ್ಲ. ಇಲ್ಲಿ ಯಾರೂ, ಯಾವು ದಕ್ಕೂ, ಬ್ರಾಂಡ್ ಆಗಿಲ್ಲ. ಮೂಲ-ವಲಸೆ ಎಂಬ ಹಣೆಪಟ್ಟಿ ಮಾಧ್ಯಮದವರು ನೀಡಿರುವುದು ಎಂದರು. ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್ ಕೆಲಸ ಮಾಡುತ್ತಿದ್ದೇನೆ. ಒಬ್ಬ ಶಾಸಕನಾಗಿದ್ದೇನೆ ಅಷ್ಟೇ. ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕದ ಬಗ್ಗೆ ಪಕ್ಷದ ಹೈಕಮಾಂಡ್ ಅಥವಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಶಾಸಕ ಬಸವರಾಜ ಯತ್ನಾಳ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಂಸ್ಕøತಿ ಎಲ್ಲರಿಗೂ ಗೊತ್ತಿದೆ. ಅವರು ಓದಿರುವ ಪುಸ್ತಕವೇ ಅಂತಹದ್ದು. ಹೀಗಿರುವಾಗ ಅವರನ್ನು ಬದಲಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

Translate »