ಹೊಸದಿಲ್ಲಿ, ಮಾ. 1- ಅಮೆರಿಕದ ಬೋಯಿಂಗ್ ಕಂಪನಿ ನಿರ್ಮಿತ ಅಪಾಚೆ ಹೆಲಿಕಾಪ್ಟರ್‍ಗಳಿಗೆ ಸರಿಸಮನಾದ ಸೇನಾ ಹೆಲಿಕಾಪ್ಟರ್ ನಿರ್ಮಿಸಲು ಸಿದ್ಧವಿರುವು ದಾಗಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಘೋಷಿಸಿದೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದ ರ್ಶನದಲ್ಲಿ ಎಚ್‍ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧ ವನ್, ಅಪಾಚೆ ಮಾದರಿಯ ದಾಳಿ ಕೋರ ಹೆಲಿಕಾಪ್ಟರ್‍ಗಳ ಪ್ರಾಥಮಿಕ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆ ಮುಂದುವರಿಸಲು ಕೇಂದ್ರ ಸರಕಾರ ಈ ವರ್ಷವೇ ಅನುಮತಿ ನೀಡಿ ದರೆ 2027ರಲ್ಲಿ ಮೊದಲ ಕಾಪ್ಟರ್ ಉತ್ಪಾದನೆಯಾಗಲಿದೆ ಎಂದಿದ್ದಾರೆ. ಭಾರತೀಯ ವಾಯುಪಡೆ 2032ರ ಒಳಗಾಗಿ ಎಂಐ-17 ಕಾಪ್ಟರ್‍ಗಳ ಬಳಕೆ ನಿಲ್ಲಿಸುವ ಉದ್ದೇಶ ಹೊಂದಿದೆ. ಹೀಗಾಗಿ ಎಂಐ-17 ಹೆಲಿಕಾಪ್ಟರ್‍ಗಳಿಗೆ ಪರ್ಯಾಯವಾಗಿ 10-12 ಟನ್ ತೂಕದ ಹೆಲಿಕಾಪ್ಟರ್ ನಿರ್ಮಾಣ ನಮ್ಮ ಮುಂದಿರುವ ಆದ್ಯತೆ. ದೇಸೀಯವಾಗಿ ಅಪಾಚೆ ರೀತಿಯ 500 ಹೆಲಿಕಾಪ್ಟರ್ ನಿರ್ಮಿ ಸುವ ಗುರಿಯನ್ನು ಎಚ್‍ಎಎಲ್ ಹೊಂದಿದೆ. ನಾವೇ ಈ ಹೆಲಿಕಾಪ್ಟರ್‍ಗಳನ್ನು ಉತ್ಪಾದಿ ಸುವುದರಿಂದ 4 ಲಕ್ಷ ಕೋಟಿ ರೂ. ಉಳಿತಾಯ ಕೂಡ ಮಾಡಬಹುದಾಗಿದೆ ಎಂದಿದ್ದಾರೆ.