ಮೇಕ್ ಇನ್ ಇಂಡಿಯಾ ಯಶಸ್ಸು 40 ಮಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಗಿಟ್ಟಿಸಿದ ಭಾರತ!
ಮೈಸೂರು

ಮೇಕ್ ಇನ್ ಇಂಡಿಯಾ ಯಶಸ್ಸು 40 ಮಿಲಿಯನ್ ಡಾಲರ್ ರಕ್ಷಣಾ ಒಪ್ಪಂದ ಗಿಟ್ಟಿಸಿದ ಭಾರತ!

March 2, 2020

ನವದೆಹಲಿ,ಮಾ.1-ರಷ್ಯಾ ಹಾಗೂ ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೋಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದ ವನ್ನು ಗಿಟ್ಟಿಸಿಕೊಂಡಿದೆ.

ದೇಶಿಯವಾಗಿ ಡಿಆರ್‍ಡಿಒ ಹಾಗೂ ಬಿಇಎಲ್ ಸಂಸ್ಥೆಗಳು ತಯಾರಿಸಿರುವ ವೆಪನ್ ಲೊಕೇಟಿಂಗ್ ರಡಾರ್ (ಶಸ್ತ್ರಾಸ್ತ್ರ ಪತ್ತೆ ರೆಡಾರ್)ಗಳನ್ನು ಅರ್ಮೇ ನಿಯಾಗೆ ರಫ್ತು ಮಾಡಲಿದೆ. ‘ಸ್ವಾತಿ’ ರಡಾರ್‍ಗಳನ್ನು ಅರ್ಮೇನಿಯಾಗೆ ರಫ್ತು ಮಾಡುವ ಕೆಲಸ ಈಗಾಗಲೇ ಪ್ರಾರಂಭ ವಾಗಿದ್ದು, ಇದನ್ನು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ. ಅರ್ಮೇ ನಿಯನ್ನರು ರಷ್ಯಾ ಹಾಗೂ ಪೆÇೀಲ್ಯಾಂಡ್‍ನ ರಡಾರ್‍ಗಳನ್ನು ಪರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಭಾರ ತೀಯ ರಡಾರ್‍ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಮಾರ್ಟಾರ್, ಶೆಲ್ ರಾಕೆಟ್ ಗಳಂತಹ ಶಸ್ತ್ರಾಸ್ತ್ರಗಳ ನಿಖರವಾಗಿ ಪತ್ತೆ ಮಾಡಿ 50 ಕಿ.ಮೀ ವ್ಯಾಪ್ತಿ ದೂರದಿಂದಲೇ ಗುರುತಿಸುವ ಸಾಮರ್ಥ್ಯ ವನ್ನು ಈ ರಡಾರ್‍ಗಳು ಹೊಂದಿವೆ. ಭಾರತ ಸೇನೆ ಸಹ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಇದೇ ರಡಾರ್‍ಗಳನ್ನು ಬಳಕೆ ಮಾಡುತ್ತಿದೆ. ರಕ್ಷಣಾ ಇಲಾಖೆ ಈಗ ಈ ರಡಾರ್‍ಗಳ ಮಾರಾಟಕ್ಕೆ ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಯ ಮೇಲೂ ಕಣ್ಣಿಟ್ಟಿದೆ.

Translate »