ಮೈಸೂರು, ಅ. 14(ಆರ್‍ಕೆ)- ಇನ್ನು ಮುಂದೆ ಗ್ರಾಹಕರ ವಿದ್ಯುತ್ ಮಾಸಿಕ ಬಿಲ್ ಅನ್ನು ಮೊಬೈಲ್ ಮೂಲಕ ರವಾನಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ)ವು ಸಿದ್ಧತೆ ನಡೆಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿ ಮೈಸೂರಿನಲ್ಲಿ ಮನೆ ಮನೆಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಿ ನಿಗಮವು ಸ್ಮಾರ್ಟ್ ಗ್ರಿಡ್ ಯೋಜನೆಯನ್ನು ಅನು ಷ್ಠಾನಗೊಳಿಸಿದೆ. ಅದರಂತೆ ಮೈಸೂರಿನ ಸುಮಾರು 24,532 ಸ್ಥಾವರಗಳ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಆನ್‍ಲೈನ್ ಸ್ಮಾರ್ಟ್ ಗ್ರಿಡ್ ತಂತ್ರಾಂಶದ ಮೂಲಕ ನಿಯಂ ತ್ರಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಇನ್ನು ಮುಂದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಗ್ರಾಹ ಕರ ವಿದ್ಯುತ್ ಸರಬರಾಜು ನಿಗಮ
ನಿಯಮಿತವು ತನ್ನ ಗ್ರಾಹಕರಿಗೆ ಮಾಸಿಕ ವಿದ್ಯುತ್ ಬಿಲ್ಲನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ರವಾನಿಸಲಿದೆ. ಸ್ಮಾರ್ಟ್ ಗ್ರಿಡ್ ಯೋಜನೆ ಅನುಷ್ಠಾನಕ್ಕಾಗಿ ನಿಗಮದ ಸಿಬ್ಬಂದಿ ಮೈಸೂರಿನ ವಸತಿ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಗ್ರಾಹಕರ ಆರ್‍ಆರ್ ನಂಬರ್, ಮೊಬೈಲ್ ನಂಬರ್ ಹಾಗೂ ಇ-ಮೇಲ್ ವಿಳಾಸವನ್ನು ಲಿಖಿತ ರೂಪದಲ್ಲಿ ಪಡೆಯುತ್ತಿದ್ದಾರೆ.
ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಚೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಮುನಿಗೋಪಾಲರಾಜು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗ್ರಾಹಕರ ವಿದ್ಯುತ್ ಶುಲ್ಕವನ್ನು ಆನ್‍ಲೈನ್ ಮೂಲಕವೇ ಪಾವತಿಸಲು ಅನುಕೂಲವಾಗುವಂತೆ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸಲಾಗುತ್ತಿದೆ ಎಂದರು. ಸ್ಮಾರ್ಟ್ ಗ್ರಿಡ್ ಯೋಜನೆಯಡಿ ಅಳವಡಿಸಿರುವ ಈ ಮೀಟರ್‍ಗಳಿಂದ ವಿದ್ಯುತ್ ಬಿಲ್ ಜನರೇಟ್ ಆಗುತ್ತಿದ್ದು, ಇದರಿಂದ ಚೆಸ್ಕಾಂ ಮೀಟರ್ ರೀಡರ್‍ಗಳು ಮನೆ ಮನೆಗೆ ತೆರಳಿ ಬಿಲ್ ನೀಡುವ ಹಾಗೂ ಗ್ರಾಹಕರು ನಿಗಮದ ಕೌಂಟರ್‍ಗಳಿಗೆ ತೆರಳಿ ಬಿಲ್ ಪಾವತಿಸುವ ಕೆಲಸ ತಪ್ಪಿದಂತಾಗುತ್ತದೆ ಎಂದು ತಿಳಿಸಿದರು. ಗ್ರಾಹಕರ ಮೊಬೈಲ್ ಸಂಖ್ಯೆಗೆ ಮಾಸಿಕ ವಿದ್ಯುತ್ ಬಿಲ್ ಬರುವುದ ರಿಂದ ಅವರು ನಿಂತಲ್ಲೇ ಆನ್‍ಲೈನ್ ಮೂಲಕ ಬಿಲ್ ಪಾವತಿಸಬಹುದು. ಒಂದು ವೇಳೆ ಆನ್‍ಲೈನ್‍ನಲ್ಲಿ ಪಾವತಿಸಲು ಸಾಧ್ಯವಾಗದ ಅಥವಾ ಕೌಂಟರ್‍ಗಳ ಬಳಿಗೆ ತೆರಳಿ ಹಣ ಸಂದಾಯ ಮಾಡಲು ಸಾಧ್ಯವಾಗದ ಹಿರಿಯ ನಾಗರಿಕರು ಚೆಸ್ಕಾಂ ಸರ್ವಿಸ್ ಸೆಂಟರ್‍ಗೆ ಕರೆ ಮಾಡಿದರೆ ಸಿಬ್ಬಂದಿಗಳೇ ಬಂದು ಬಿಲ್ ಸಂಗ್ರಹಿಸುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುನಿಗೋಪಾಲರಾಜು ತಿಳಿಸಿದರು. ಗ್ರಾಹಕರಿಗೆ ನಿರಂತರ ಗುಣಾತ್ಮಕ ವಿದ್ಯುತ್ ಪೂರೈಸುವ ಜತೆಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸಲು ವಾಗಿ ನಿಗಮವು ಆನ್‍ಲೈನ್ ಸ್ಮಾರ್ಟ್ ಗ್ರಿಡ್ ತಂತ್ರಾಂಶವನ್ನು ಬಳಸುತ್ತಿದ್ದು, ಸಾರ್ವ ಜನಿಕರು ಸದುಪಯೋಗಪಡಿಸಿಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.