ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ ಅಂತ್ಯ
ಮೈಸೂರು

ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ ಅಂತ್ಯ

December 30, 2019

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲು ತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (88) ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿ, ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ಉಸಿರು ಚೆಲ್ಲಿದರು. ಡಿಸೆಂಬರ್ 19ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿ ಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷಿಸಿದರು. ಬೆಳಿಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು ಮಠಕ್ಕೆ ಹಿಂದಿರು ಗಿದ ಶ್ರೀಗಳು,

ಬೆಳಿಗ್ಗೆ ಅದೇ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂದಿದ್ದರು. ಆ ವೇಳೆಗಾಗಲೇ ಅವರ ಆರೋಗ್ಯ ಗಂಭೀರವಾಗಿತ್ತು ಎಂದು ಹೇಳಲಾಗಿದೆ. ಡಿ.20ರಂದು ನಸುಕಿನ 3 ಗಂಟೆಗೆ ಪೇಜಾವರ ಶ್ರೀಗಳು ಅಸ್ವಸ್ಥರಾದರು. ನಂತರ ಅವರನ್ನು ಕೆಎಂಸಿಗ ಆಸ್ಪತ್ರೆಗೆ ದಾಖಲಿಸ ಲಿಸಲಾಯಿತು, ನ್ಯುಮೋ ನಿಯಾ ಸೋಂಕು ಪತ್ತೆಯಾಗಿತ್ತು. ಶ್ರೀಗಳ ಆರೋಗ್ಯ ಗಂಭೀರ ವಾದ ಮೇಲೆ ವೆಂಟಿಲೇಟರ್ ಅಳವಡಿಸಲಾಯಿತು. ಡಾ. ಸುಧಾ ವಿದ್ಯಾಸಾಗರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. ಡಿ.21ರಂದು ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು, ಡಿಸೆಂ ಬರ್ 22ರಂದು ಬೆಂಗಳೂರಿನ ಮಣಿಪಾಲ್ ವೈದ್ಯರ ಆಗಮನ, ಡಿಸೆಂಬರ್ 23ರಂದು ರಕ್ತದೊತ್ತಡ ನಿಯಂತ್ರಣ, ಏಮ್ಸ್ ವೈದ್ಯರ ನೆರವು ಡಿಸೆಂಬರ್ 24ರಂದು ಚಿಕಿತ್ಸೆಗೆ ಅಲ್ಪ ಸ್ಪಂದನೆ, ಸ್ವಲ್ಪ ಚೇತರಿಕೆ, ಡಿಸೆಂಬರ್ 25ರಂದು ಶ್ವಾಸಕೋಶ ನಿಧಾನವಾಗಿ ಚೇತರಿಕೆ, ಪ್ರಜ್ಞಾಹೀನ ಸ್ಥಿತಿ ತಲುಪಿದ ಶ್ರೀಗಳು. ಡಿಸೆಂಬರ್ 26ರಂದು ಮತ್ತೆ ಆರೋಗ್ಯ ದಿಢೀರ್ ಏರುಪೇರು, ಗಂಭೀರ, ಡಿಸೆಂಬರ್ 27ರಂದು ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಇಳಿಮುಖ ಡಿಸೆಂಬರ್ 28ಕ್ಕೆ ಮಿದುಳು ನಿಷ್ಕ್ರಿಯ. ಡಿಸೆಂಬರ್ 29ರಂದು ಮಠಕ್ಕೆ ಶ್ರೀಗಳ ಸ್ಥಳಾಂತರ. ಬೆಳಗ್ಗೆ 9.20ಕ್ಕೆ ನಿಧನವಾಗಿದ್ದರೆಂದು ಅಧಿಕೃತ ಘೋಷಣೆ ಮಾಡಲಾಯಿತು.

Translate »