ಲಸಿಕೆಯಿಂದ ಮಾತ್ರವೇ ಕೊರೊನಾಗೆ ಅಂತ್ಯ ಹೃದಯ ತಜ್ಞ ಡಾ.ಮಂಜುನಾಥ್ ಅಭಿಮತ
ಮೈಸೂರು

ಲಸಿಕೆಯಿಂದ ಮಾತ್ರವೇ ಕೊರೊನಾಗೆ ಅಂತ್ಯ ಹೃದಯ ತಜ್ಞ ಡಾ.ಮಂಜುನಾಥ್ ಅಭಿಮತ

January 22, 2021

ಬೆಂಗಳೂರು, ಜ.21- ಲಸಿಕೆ ತೆಗೆದುಕೊಳ್ಳುವುದರಿಂದ ಮಾತ್ರವೇ ಕೊರೊನಾ ವೈರಸ್ ಅಂತ್ಯಗೊಳಿಸಲು ಸಾಧ್ಯ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಗುರುವಾರ ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಸುದ್ದಿಗಾರರ ಮಾತನಾಡಿದ ಅವರು, ಕೊರೊನಾ ವೈರಸ್‍ಗೆ ಲಸಿಕೆ ಮಾತ್ರ ಮದ್ದು. ನಾನು ಅದನ್ನು ತೆಗೆದುಕೊಂಡಿದ್ದೇನೆ, ಚೆನ್ನಾಗಿ ದ್ದೇನೆ. ಆರೋಗ್ಯ ಕಾರ್ಯಕರ್ತರು ಭಯ ಮತ್ತು ಆತಂಕವಿಲ್ಲದೆ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು. ಲಸಿಕೆ ಸುರಕ್ಷಿತವಾಗಿದೆ ಮತ್ತು ಯಾವುದೇ ಅಡ್ಡ ಪರಿಣಾಮ ಇಲ್ಲ. ಸ್ವಲ್ಪ ಜ್ವರ, ಇಂಜೆಕ್ಷನ್ ಹಾಕಿದ ಸ್ಥಳದಲ್ಲಿ ನೋವು ಮತ್ತು ಅಲರ್ಜಿ ಅಡ್ಡಪರಿಣಾಮಗಳಲ್ಲ. ಅವು ಲಸಿಕೆಯ ಪರಿಣಾಮಗಳು ಮಾತ್ರ. ಅದರಿಂದ ಏನು ಆಗುವುದಿಲ್ಲ. ಹೆಚ್ಚಿನ ಜನರು ಲಸಿಕೆಯನ್ನು ತೆಗೆದುಕೊಳ್ಳ ಬೇಕು. ಇದರಿಂದ ಇನ್ನೂ ಕೆಲವರು ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಅದು ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದ ನಾವು ನಿರೀಕ್ಷಿತ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಿದ ಅವರು, ಲಸಿಕೆ ತೆಗೆದುಕೊಳ್ಳುವುದು ನಾಗರಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ.

Translate »