`ಪಾಲಿಕೆ-ಜನತೆ ನಿತ್ಯ ಸ್ವಚ್ಛತೆಗೆ ಆದ್ಯತೆ’
ಮೈಸೂರು

`ಪಾಲಿಕೆ-ಜನತೆ ನಿತ್ಯ ಸ್ವಚ್ಛತೆಗೆ ಆದ್ಯತೆ’

January 22, 2021

ಮೈಸೂರು, ಜ.21(ವೈಡಿಎಸ್)- ಸ್ವಚ್ಛತೆ ಎಂಬುದು ನಮ್ಮ ಸ್ವಭಾವ ಹಾಗೂ ಸಂಸ್ಕøತಿ ಆಗಬೇಕು. ಶಾಲೆಗಳಲ್ಲಿ ಶಿಕ್ಷಕರ ಮೂಲ ಕವೇ ಮಕ್ಕಳಿಗೆ ಸ್ವಚ್ಛತೆಯ ಜಾಗೃತಿ ಮೂಡಿ ಸಬೇಕು. ವಾಣಿಜ್ಯ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಸರ್ವೇಕ್ಷಣೆ ದೃಷ್ಟಿಯಿಂದ ಮಾತ್ರವಲ್ಲದೆ ಸ್ವಚ್ಛತೆಗೆ ನಿತ್ಯ ಆದ್ಯತೆ ನೀಡಬೇಕು.

ಸ್ವಚ್ಛ ಸರ್ವೇಕ್ಷಣೆ-2021 ಆರಂಭವಾಗಿ ರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆಯ ಜಯಚಾಮ ರಾಜೇಂದ್ರ ಸಭಾಂಗಣ(ಹಳೇ ಕೌನ್ಸಿಲ್ ಹಾಲ್)ದಲ್ಲಿ ಗುರುವಾರ ನಡೆದ ಪಾಲುದಾರರ ಸಭೆಯಲ್ಲಿ ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇಂಥ ಹಲವು ಮಹತ್ವದ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸ್ವಚ್ಛ ಸರ್ವೇಕ್ಷಣೆ ಸಂದರ್ಭದಲ್ಲಷ್ಟೇ ಅಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ನಗ ರದ ಸ್ವಚ್ಛತೆ ಬಗ್ಗೆ ಪಾಲಿಕೆ ಗಮನಹರಿಸ ಬೇಕು. ಮೈಸೂರಿನಲ್ಲಿ ಶೌಚಾಲಯ ಸಮಸ್ಯೆ ಇದ್ದು, ಪರಿಹಾರ ನೀಡಬೇಕು. ಶಾಲೆ ಗಳಲ್ಲಿ ಮಕ್ಕಳಿಗೆ ಮೊದಲು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ಬಯೋಗ್ಯಾಸ್ ಬಗ್ಗೆ ಚಿಂತನೆ ಹರಿಸಬೇಕು. ಕಸ ವಿಲೇ ವಾರಿಗೆ ಶಾಶ್ವತವಾದ ಯೋಜನೆ ರೂಪಿ ಸಬೇಕು. ಮೈಸೂರು ನಮ್ಮ ಹೆಮ್ಮೆ. ಹಾಗಾಗಿ ಸ್ವಚ್ಛ ನಗರಿ ಪಟ್ಟ ಪಡೆಯಲು ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ನಾಗರಿಕರು ಹೇಳಿದರು.

ಪ್ರೊ.ಕೆ.ಎಸ್.ನಾಗಪತಿ ಮಾತನಾಡಿ, ಸ್ವಚ್ಛತೆ ಎಂಬುದು ಪ್ರಶಸ್ತಿಗಷ್ಟೆ ಸೀಮಿತ ವಾಗದೆ ನಮ್ಮ ಸ್ವಭಾವ ಆಗಬೇಕು. ಸ್ವಚ್ಛತಾ ಕಾರ್ಯ ಪಾಲಿಕೆಯದ್ದು ಎಂದು ತಿಳಿ ಯದೆ ಜನರೂ ಕೈಜೋಡಿಸಬೇಕು. ಜನ ಪ್ರತಿನಿಧಿಗಳು ಪ್ರತಿ ವಾರ್ಡ್‍ಗಳಲ್ಲಿ ಸಭೆ ನಡೆಸಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರಧಾನಿ ಮೋದಿ ಹೇಳಿ ದಂತೆ ಸ್ವಚ್ಛತೆ ನಮ್ಮ ಸ್ವಭಾವ, ಸಂಸ್ಕøತಿ ಯಾಗಬೇಕು ಎಂದು ಮನವಿ ಮಾಡಿದರು.

ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಅಧ್ಯಕ್ಷ ಸತ್ಯನಾರಾಯಣ್ ಮಾತನಾಡಿ, ಬಹುತೇಕ ಕಡೆ ಬಸ್ ಶೆಲ್ಟರ್‍ಗಳು ದುಸ್ಥಿತಿ ಯಲ್ಲಿವೆ. ನಗರದ ಸೌಂದರ್ಯಕ್ಕೆ ಧಕ್ಕೆ ಯನ್ನುಂಟು ಮಾಡಿವೆ. ದುರಸ್ತಿಪಡಿಸ ಬೇಕು ಎಂದು ಮನವಿ ಮಾಡಿದರು.

ಕರೆ ಮಾಡಿ: ಮೈಕ್ ಪ್ರಕಾಶ್ ಮಾತನಾಡಿ, ನಗರದಲ್ಲಿ ಯಾವುದೇ ಸ್ಥಳದಲ್ಲಿ ಕಸ, ತ್ಯಾಜ್ಯ ರಾಶಿ ಬಿದ್ದಿರುವುದು ಕಂಡರೆ ಕೂಡಲೇ ಸಾರ್ವಜನಿಕರು ಪಾಲಿಕೆ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಬೇಕು. ಅಲ್ಲದೆ ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕ್ಲೀನ್ ಮೈಸೂರು ಫೌಂಡೇಶನ್‍ನ ಲೀಲಾ ವೆಂಕಟೇಶ್ ಮಾತನಾಡಿ, ನಗರದ ಬಹು ತೇಕ ಕಡೆ ಪಾದಾಚಾರಿ ಮಾರ್ಗಕ್ಕೆ ಹಾಕಿದ ಟೈಲ್ಸ್ ಕಿತ್ತುಬಂದಿವೆ. ಮರಗಳ ಬುಡದಲ್ಲೇ ಜನ ಕಸ ಸುರಿಯುತ್ತಿದ್ದು, ಅದನ್ನು ತಪ್ಪಿಸಬೇಕು. ಬೀದಿಬದಿ ವ್ಯಾಪಾರಿ ಗಳು ಪ್ಲಾಸಿಕ್ ಬಳಕೆ ನಿಲ್ಲಿಸಿ, ಬಟ್ಟೆ ಬ್ಯಾಗ್ ಬಳಕೆಗೆ ಒತ್ತು ನೀಡುವಂತೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಮೈಸೂರು ಫೌಂಡೇಶನ್‍ನ ದೀಪಕ್ ಮಾತನಾಡಿ, ನಗರದ ಉದ್ಯಾ ನವನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ನಾವು ತಿಂಗಳು ಕಾಲ ಅರ ಮನೆ ಸುತ್ತಮುತ್ತ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನ ಕೈಗೊಂಡಿದ್ದರೂ ಪ್ಲಾಸ್ಟಿಕ್ ಎಸೆ ಯುವುದು ಕಡಿಮೆಯಾಗಿಲ್ಲ ಎಂದರು.

ಖಾಲಿ ಸೈಟುಗಳು ನಿರ್ವಹಣೆ ಕೊರತೆ ಎದುರಿಸುತ್ತಿದ್ದು, ಜನರು ಮನೆಯ ಕಸವನ್ನು ತಂದು ಸುರಿಯುತ್ತಿದ್ದಾರೆ. ಅಲ್ಲದೆ, ರಿಂಗ್ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡಿದೆ. ಕೂಡಲೇ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಗಳು ಕೇಳಿಬಂತು. ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ಆಯುಕ್ತ ಗುರುದತ್ ಹೆಗಡೆ, ಆರೋಗ್ಯಾಧಿಕಾರಿಗಳಾದ ಡಾ.ನಾಗರಾಜು, ಡಾ.ಜಯಂತ್ ಸಭೆಯಲ್ಲಿದ್ದರು.

Translate »