ಮೈಸೂರು, ಜ.23(ಎಂಟಿವೈ)- ಪ್ರವಾ ಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶವಾಗುವಂತೆ ಡಬಲ್ ಡೆಕ್ಕರ್ ಬಸ್ `ಅಂಬಾರಿ’ ಶನಿ ವಾರ ಪ್ರಾಯೋಗಿಕವಾಗಿ ಸಂಚಾರ ನಡೆ ಸಿತು. ಕೆಎಸ್‍ಆರ್‍ಟಿಸಿ ಸಹಯೋಗದಲ್ಲಿ `ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’(ಕೆಎಸ್‍ಟಿಡಿಸಿ) ತೆರೆದ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದೆ.
20 ಅಡಿ ಎತ್ತರವಿರುವ `ಅಂಬಾರಿ’ ಬಸ್ ನಗರದ 15 ಪ್ರವಾಸಿ ತಾಣಗಳಿಗೆ ತೆರಳು ವುದರಿಂದ ಮೈಸೂರಿನ ರಸ್ತೆಗಳಲ್ಲಿ ಸುಗಮ ಸಂಚಾರದ ಸಲುವಾಗಿ ಇಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿತು. ವಿದ್ಯುತ್ ತಂತಿ ಹಾಗೂ ದೀಪಾ ಲಂಕಾರಕ್ಕಾಗಿ ಬಳಸಿದ್ದ ವೈರ್‍ಗಳು ಜೋತು ಬಿದ್ದಿರುವುದು, ರಸ್ತೆಬದಿ ಮರಗಳ ಕೊಂಬೆ ಗಳು ರಸ್ತೆಗೆ ಚಾಚಿಕೊಂಡಿರುವುದರಿಂದ ಎತ್ತರದ `ಅಂಬಾರಿ’ ಪ್ರಯಾಣಕ್ಕೆ ಅಡಚಣೆ ಯಾಗುತ್ತಿತ್ತು. ಹಾಗಾಗಿಯೇ ಕಳೆದ ತಿಂಗಳು ಸಂಚಾರ ರದ್ದುಪಡಿಸಲಾಗಿತ್ತು. ಡಬಲ್ ಡೆಕರ್ ಬಸ್ ಸಂಚರಿಸುವ ಮಾರ್ಗಗಳಲ್ಲಿ ರಸ್ತೆಗೆ ಚಾಚಿಕೊಂಡಿದ್ದ ಮರಗಳ ಕೊಂಬೆ ಗಳನ್ನು ಇತ್ತೀಚೆಗೆ ಕತ್ತರಿಸಿ ತೆಗೆಯಲಾಗಿದೆ. ರಸ್ತೆಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಗಳನ್ನೂ ಸೆಸ್ಕ್ ಸಿಬ್ಬಂದಿ ಸರಿಪಡಿಸಿದ್ದಾರೆ. ಶನಿವಾರ ಮಾರ್ಗ ಪರಿಶೀಲನೆಗಾಗಿ ಅಂಬಾರಿ ಸಂಚರಿಸಿದಾಗ ಮರದ ಕೊಂಬೆಗಳಾ ಗಲೀ, ವಿದ್ಯುತ್ ತಂತಿಗಳಾಗಲೀ ಅಡೆತಡೆ ಉಂಟು ಮಾಡಲಿಲ್ಲ. ಇಂದು ಮಯೂರ ಹೋಟೆಲ್‍ನಿಂದ ಪ್ರಯೋಗಾರ್ಥ ಪ್ರಯಾಣ ಆರಂಭಿಸಿದ ಅಂಬಾರಿ ಬಸ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಮೆಟ್ರೋ ಪೆÇೀಲ್ ವೃತ್ತ), ವಿನೋಬಾ ರಸ್ತೆ, ಕಲಾ ಮಂದಿರ, ಡಿಸಿ ಕಚೇರಿ ರಸ್ತೆ, ಕ್ರಾಫರ್ಡ್ ಹಾಲ್, ಕುಕ್ಕರಹಳ್ಳಿ ರಸ್ತೆ, ಬಯಲು ರಂಗ ಮಂದಿರ, ಸರಸ್ವತಿಪುರಂ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಜಗ ನ್ಮೋಹನ ಅರಮನೆ, ಕೆ.ಆರ್.ವೃತ್ತ, ಪುರ ಭವನ, ಮಹಾತ್ಮಗಾಂಧಿ ವೃತ್ತ, ದೊಡ್ಡ ಗಡಿಯಾರ ವೃತ್ತ, ಅರಮನೆಯ ಜಯ ಮಾರ್ತಾಂಡ ಗೇಟ್, ಹಾರ್ಡಿಂಗ್ ವೃತ್ತ, ಮೈಸೂರು ಮೃಗಾಲಯ, ಕಾರಂಜಿಕೆರೆ, ಲಲಿತಮಹಲ್, ಸೇಂಟ್ ಫಿಲೊಮಿನಾ ಚರ್ಚ್, ಫೌಂಟೆನ್ ಸರ್ಕಲ್, ಎಲ್‍ಐಸಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆಗಳಲ್ಲಿ ಸಂಚರಿ ಸಿತು. ಅಂಬಾರಿ ಬಸ್ ಈಗ ಮೈಸೂರಿ ನಲ್ಲಿ ಪ್ರವಾಸಿಗರ ಸೇವೆಗೆ ಸಜ್ಜಾಗಿದೆ.