ಮೈಸೂರು,ಜ.23-ಮೈಸೂರಿನ ಕುಂಬಾರ ಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಗಳಿಗೆ ಸುಜೀವ್ ಸಂಸ್ಥೆ ವತಿಯಿಂದ ಸ್ಮಾರ್ಟ್ ಕ್ಯಾಂಪೇನ್ ಅಡಿಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದಲ್ಲಿ ಬಡ ಮತ್ತು ದುರ್ಬಲ ವರ್ಗದವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಶಾಲೆಯ ಕಂಪ್ಯೂ ಟರ್ ಪ್ರಯೋಗಾಲಯಕ್ಕೆ 15ಕ್ಕೂ ಹೆಚ್ಚು ಕಂಪ್ಯೂಟರ್‍ಗಳನ್ನು ರಿಪೇರಿ ಮಾಡುವ ಮೂಲಕ ಮತ್ತು ಒಂದು ಹೊಸ ಕಂಪ್ಯೂ ಟರ್, 15 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುಜೀವ್ ಸಂಸ್ಥೆಯ ರಾಜಾರಾಮ್, ಮಾಜಿ ಪಾಲಿಕೆ ಸದಸ್ಯ ಜಯರಾಮ್, ಶಾಲೆ ಸಿಬ್ಬಂದಿ ಮತ್ತಿತರರು ಹಾಜರಿದ್ದರು.