ದೇಶಕ್ಕಾಗಿ ನೆತ್ತರನ್ನೇ ಬಸಿದ ಮಹಾಪರಾಕ್ರಮಿ ನೇತಾಜಿ
ಮೈಸೂರು

ದೇಶಕ್ಕಾಗಿ ನೆತ್ತರನ್ನೇ ಬಸಿದ ಮಹಾಪರಾಕ್ರಮಿ ನೇತಾಜಿ

January 24, 2021

ಮೈಸೂರು,ಜ.23-ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಘೋಷಣೆಯೊಡನೆ ಭಾರತೀಯರನ್ನು ಬಡಿದೆಬ್ಬಿಸಿದ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಅಕ್ಷರಶಃ ತಮ್ಮ ನೆತ್ತರನ್ನು ಬಸಿದ ಮಹಾನ್ ದೇಶಭಕ್ತ, ಪರಾಕ್ರಮಿ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ಹಿರಣ್ಮಯಿ ಪ್ರತಿಷ್ಠಾನ ಮತ್ತು ಅನುಭವ ಟುಟೋರಿ ಯಲ್ಸ್ ಸಂಯಕ್ತಾಶ್ರಯದಲ್ಲಿ ನಗರದ ಖಿಲ್ಲೆ ಮೊಹಲ್ಲಾ ದಲ್ಲಿರುವ ಪಂಡಿತ್ ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್‍ನ ಶ್ರೀಕಾಂತ ಬಾಲಿಕಾ ಪ್ರೌಢಶಾಲೆ ಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಪರಾಕ್ರಮ ದಿವಸ ಕಾರ್ಯಕ್ರಮವನ್ನು ನೇತಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಿರಂತರ ಸ್ಫೂರ್ತಿಯ ಪ್ರತೀಕ, ಅಪ್ರತಿಮ ದೇಶಪ್ರೇಮಿ, ಭಾರತದ ದಿವ್ಯ ತೇಜ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭವ್ಯ ಭಾರತದ ಪುಣ್ಯಭೂಮಿಯಲ್ಲಿ ಅವ ತರಿಸಿದ್ದೇ ಒಂದು ಮಹಾಭಾಗ್ಯ. 1897 ಜನವರಿ 23ರಂದು ಒರಿಸ್ಸಾ ರಾಜ್ಯದ ಕಟಕ್ ನಗರದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನನ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ ದೇವಿ. ಈ ಸುಸಂಸ್ಕೃತ ದಂಪತಿಯ 14 ಮಕ್ಕಳಲ್ಲಿ ಇವರು 6ನೆಯವರು. ಬಾಲ್ಯದಿಂದಲೇ ಈಶ್ವರ ಚಂದ್ರ ವಿದ್ಯಾಸಾಗರ, ರಾಜಾರಾಮ ಮೋಹನ ರಾಯ, ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪ್ರಭಾವಿತರಾಗಿದ್ದ ಇವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾ ಗಲೇ ವಿವೇಕಾನಂದರ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ದೇಶಕ್ಕಾಗಿ ಹೋರಾಡಿರಿ ಎಂಬ ದಿವ್ಯ ಮಂತ್ರಕ್ಕೆ ಸುಭಾಷ್ ಚಂದ್ರಬೋಸರು ಮನಸೋತಿದ್ದರು. ಅದರಂತೆ ಮುಂದೆ ದೇಶಕ್ಕಾಗಿ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡದ್ದು, ಈಗ ಇತಿಹಾಸವೆಂದು ತಿಳಿಸಿದ ಬನ್ನೂರು ರಾಜು ಅವರು, ಪ್ರಸ್ತುತ ನೇತಾಜಿ ಅವರ 125ನೇ ಜಯಂತಿಯ ಗೌರವಾರ್ಥ ಇಡೀ ದೇಶ ಹೆಮ್ಮೆಯಿಂದ ರಾಷ್ಟ್ರೀಯ ಪರಾಕ್ರಮ ದಿವಸ’ವನ್ನಾಗಿ ನೇತಾಜಿಯ ಜನ್ಮದಿನವನ್ನು ಆಚರಿಸುತ್ತಿದೆಯೆಂದು ತಿಳಿಸಿದರು.

ಶಿಕ್ಷಕಿ ಸುಮಾ ಅವರು, ಪರಾಕ್ರಮ ದಿವಸ್ ಮಹತ್ವದ ಬಗ್ಗೆ ನೇತಾಜಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಹಿತವಚನ ಹೇಳಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ, ಶಿಕ್ಷಣತಜ್ಞ ಎ.ಸಂಗಪ್ಪ ಅವರು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧಾ ಕಾರ್ಯ ಕ್ರಮ ನಡೆಸಿಕೊಟ್ಟರು. ಮುಖ್ಯ ಶಿಕ್ಷಕ ಸುಬ್ಬರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಲ್ಲಪ್ಪ ಮತ್ತು ಗಾಯತ್ರಿ ಹಾಗೂ ಅನುಭವ ಟುಟೋರಿಯಲ್ಸ್‍ನ ಮುಖ್ಯಸ್ಥ ವಿ.ನಾರಾ ಯಣರಾವ್ ಉಪಸ್ಥಿತರಿದ್ದರು. ಕೊನೆಯಲ್ಲಿ ನೇತಾಜಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.

 

Translate »