ಸ್ವಚ್ಛ, ಬಲಿಷ್ಠ, ಶ್ರೇಷ್ಠ ಎನಿಸಿದರೆ ಅದೇ `ಸಮಗ್ರ ಭಾರತ’
ಮೈಸೂರು

ಸ್ವಚ್ಛ, ಬಲಿಷ್ಠ, ಶ್ರೇಷ್ಠ ಎನಿಸಿದರೆ ಅದೇ `ಸಮಗ್ರ ಭಾರತ’

January 24, 2021

ಮೈಸೂರು, ಜ.23(ಎಂಟಿವೈ)- ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಕನಸಿನ ‘ಸಮಗ್ರ ಭಾರತ’ ಪರಿಕಲ್ಪನೆಗೆ ಈಗ ಸ್ವಚ್ಛ ಭಾರತ, ಬಲಿಷ್ಠ ಭಾರತ ಹಾಗೂ ಶ್ರೇಷ್ಠ ಭಾರತ ಎಂಬ ಮಹಾನ್ ಕಲ್ಪನೆಗಳೇ ರಹದಾರಿಯಾಗಿವೆ. ಈಗ ಅವುಗಳ ಸಾಕಾರಕ್ಕೆ ನಾವೆಲ್ಲರೂ ಸಂಕಲ್ಪ ತೊಡ ಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕರೆ ನೀಡಿದರು.

ಜೈಹಿಂದ್ ಯುವ ಸಂಘಟನೆ ಶನಿವಾರ ಮೈಸೂರಿನ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಭಾರತೀಯರೆಲ್ಲರೂ ಸ್ವಚ್ಛ ಭಾರತ, ಬಲಿಷ್ಠ ಭಾರತ ಹಾಗೂ ಶ್ರೇಷ್ಠ ಭಾರತದ ಕಲ್ಪನೆಯನ್ನು ಸಾಕಾರ ಗೊಳಿಸ ಬೇಕಿದೆ. ಆ ಮೂಲಕ ಸುಭಾಷ್ ಚಂದ್ರಬೋಸ್ ಅವರ ಸಮಗ್ರ ಭಾರತದ ಆಶಯವನ್ನು ಈಡೇರಿಸಬೇಕಿದೆ ಎಂದರು.

ಬ್ರಿಟಿಷರ ದಾಸ್ಯದಿಂದ ಮುಕ್ತವಾಗಲು ಅಂದು ಸುಭಾಷ್‍ಚಂದ್ರ ಬೋಸರು ಪ್ರೇರಕ ಶಕ್ತಿಯಾಗಿದ್ದರೆ, ಸದ್ಯ ಪ್ರಧಾನಿ ನರೇಂದ್ರ ಮೋದಿ ನಮಗೆಲ್ಲಾ ಶಕ್ತಿಯಾಗಿದ್ದಾರೆ. ಮೋದಿ ಅವರ ಪರಿಕಲ್ಪನೆಯ `ಆತ್ಮ ನಿರ್ಭರ’ ಹಾಗೂ `ಸ್ವಾವಲಂಬಿ ಭಾರತ’ ಸಾಕಾರ ಗೊಳಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ದೇಶೀ ಉತ್ಪನ್ನಗಳನ್ನು ಹೆಚ್ಚು ಬಳಸಿ ಆತ್ಮನಿರ್ಭರ ಭಾರತದ ಅನುಷ್ಠಾನಕ್ಕೆ ಶ್ರಮಿಸುವ ಮೂಲಕ ಮೋದಿಯವರ ಕೈಬಲಪಡಿಸಬೇಕು ಎಂದು ಸಲಹೆ ನೀಡಿದರು.

ಭಾರತ ಕಂಡ ಅಪ್ರತಿಮ ಸೇನಾನಿ, ದೇಶಭಕ್ತಿಯ ವಿರಾಟ್ ಶಕ್ತಿ ಏನಾದರೂ ಇದ್ದಲ್ಲಿ ಅದು ಸುಭಾಷ್ ಚಂದ್ರಬೋಸ್ ಮಾತ್ರ. ಭಾರತ ಸ್ವಾತಂತ್ರ್ಯ ಪಡೆಯಲು ಪ್ರೇರೇಪಿಸಿದವರು ಬೋಸರು. ಅಹಿಂಸೆ ಯಿಂದಷ್ಟೇ ಸ್ವಾತಂತ್ರ್ಯ ಸಿಗದು ಎಂದ ಬೋಸ್, ಐಎನ್‍ಎ ರಚಿಸಿ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಶ್ರಮಿಸಿ ದರು ಎಂದು ತಿಳಿಸಿದರು.

ಇವತ್ತಿನ ಭಾರತ ಅವ್ಯವಸ್ಥೆಯಿಂದ, ಪರಕೀಯರ ದಬ್ಬಾಳಿಕೆಗಳಿಂದ ಮುಕ್ತ ವಾಗಿಲ್ಲ. ಒಂದೆಡೆ ನೆರೆಯ ಪಾಕಿಸ್ತಾನ ಗಡಿ ಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತದೆ, ಭಾರತದ ಆಂತರಿಕ ವಿಚಾರಗಳ ಬಗ್ಗೆ ಸಮಸ್ಯೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ. ಮತ್ತೊಂಡೆದೆ ಚೀನಾ ನಮ್ಮ ಔದ್ಯೋಗಿಕ ಅವಕಾಶಗಳನ್ನೆಲ್ಲ ಕಿತ್ತುಕೊಳ್ಳುತ್ತಿದೆ. ಇಂಥ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದಲ್ಲಿ ಸುಭಾಷ್ ಚಂದ್ರ ಬೋಸರು ನಮಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ: ಇದೇ ವೇಳೆ ಮುತ್ತಣ್ಣ (ವೈದ್ಯಕೀಯ), ಪಿ.ನಂಜುಂಡಸ್ವಾಮಿ (ಸಾಮಾ ಜಿಕ), ಎಂ.ಕೆ.ವಿನಯ್ ಬಾಬು (ಹೋಟೆಲ್ ಉದ್ಯಮ), ಖ್ಯಾತ ವ್ಯಂಗ್ಯಚಿತ್ರಗಾರ ನಾಗೇಂದ್ರ ಬಾಬು (ಮಾಧ್ಯಮ), ಪ್ರದೀಪ್‍ಗೌಡ (ಉದ್ಯಮ), ಜಬ್ಬಿಅಜ್ಜು (ಸಾಮಾಜಿಕ) ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾ ಯಿತು. ಕಾರ್ಯಕ್ರಮದಲ್ಲಿ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇ ಶಕಿ ರೇಣುಕಾರಾಜ್, ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಶಾರದ ವಿಲಾಸ ಕಾಲೇಜಿನ ಹನುಮಂತಾಚಾರ್ ಜೋಷಿ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿಎಸ್‍ಎಸ್ ಯೋಗಿಕ್ ಫೌಂಡೇಷನ್ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್, ಮಹರ್ಷಿ ಶಿಕ್ಷಣ ಸಂಸ್ಥೆಯ ಭವಾನಿಶಂಕರ್, ಕಾಂಗ್ರೆಸ್ ಯುವ ಮುಖಂಡ ಎನ್.ಎಂ.ನವೀನ್‍ಕುಮಾರ್, ಜೈ ಹಿಂದ್ ಸಂಘಟನೆ ಅಧ್ಯಕ್ಷ ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ರಾಕೇಶ್ ಭಟ್, ಜಯಸಿಂಹ, ಎನ್.ಶ್ರೀಧರ್, ಸುಚೀಂದ್ರ, ಚಕ್ರಪಾಣಿ, ರಂಗನಾಥ್, ಟಿ.ಎಸ್.ಅರುಣ್, ಲೋಹಿತ್ ಇನ್ನಿತರರು ಉಪಸ್ಥಿತರಿದ್ದರು.

Translate »