ಹಿರಿಯ ಆರ್‍ಎಸ್‍ಎಸ್ ಮುಖಂಡ ಬಾಬುರಾವ್ ದೇಸಾಯಿ ವಿಧಿವಶ ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ
ಮೈಸೂರು

ಹಿರಿಯ ಆರ್‍ಎಸ್‍ಎಸ್ ಮುಖಂಡ ಬಾಬುರಾವ್ ದೇಸಾಯಿ ವಿಧಿವಶ ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ

January 24, 2021

ಬೆಂಗಳೂರು, ಜ.23-ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾ ರಕರಾಗಿದ್ದ ಬಾಬುರಾವ್ ದೇಸಾಯಿ (97) ಅವರು ವಿಧಿ ವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್‍ನ ಹಿರಿಯ ಪ್ರಚಾರಕರೂ ಆಗಿದ್ದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದರು. 1942ಕ್ಕೆ ಸಂಘ ಪರಿವಾರದ ಪ್ರಚಾರಕರಾಗಿ ಸೇರ್ಪಡೆಯಾಗಿದ್ದ ಬಾಬುರಾವ್ 1949ರಲ್ಲಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡದ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಧಾರವಾಡ, ಕಲಬುರಗಿ, ಬಳ್ಳಾರಿ ವಿಭಾಗ ಪ್ರಚಾರಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ವಿಶ್ವ ಹಿಂದೂ ಪರಿಷತ್‍ನ ಕಾರ್ಯದರ್ಶಿ ಆಗಿ ನೇಮಕವಾಗಿದ್ದರು. ಹಿರಿಯ ಮುಖಂಡರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

“ಸಂಘದ ಹಿರಿಯ ಪ್ರಚಾರಕರು, ನನ್ನ ಆತ್ಮೀಯ ಮಾರ್ಗದರ್ಶಕರು, ಹಿಂದೂ ಸಂಘಟನೆಗಳಿಗೆ ತಪಸ್ವಿಯಂತೆ ಸೇವೆ ಸಲ್ಲಿಸಿದ ವಿ.ಎಚ್.ಪಿ ಯ ರಾಷ್ಟ್ರೀಯ ಪದಾಧಿಕಾರಿ ಗಳು ಆಗಿದ್ದ ಬಾಬುರಾವ್ ದೇಸಾಯಿ ಅವರು ನಿಧನರಾದ ಸುದ್ದಿ ಕೇಳಿ ಅತೀವ ಸಂತಾಪ ವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದರು ಟ್ವೀಟ್ ಮಾಡಿದ್ದಾರೆ. “ಏಳು ದಶಕಗಳಿಂದ ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬುರಾವ್ ದೇಸಾಯಿ ನಿಧನರಾದ ಸುದ್ಧಿ ಅತೀವ ದುಃಖವನ್ನುಂಟು ಮಾಡಿದೆ. ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ಅನೇಕ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ.” ಎಂದು ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ ಟ್ವೀಟ್ ಮಾಡಿ ಶೋಕ ಸಂದೇಶ ತಿಳಿಸಿದ್ದಾರೆ.

 

Translate »