ಕ್ಷೀಣಿಸಿದ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಆರೋಗ್ಯ: ದೆಹಲಿ ಏಮ್ಸ್‍ಗೆ ದಾಖಲು
ಮೈಸೂರು

ಕ್ಷೀಣಿಸಿದ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಆರೋಗ್ಯ: ದೆಹಲಿ ಏಮ್ಸ್‍ಗೆ ದಾಖಲು

January 24, 2021

ರಾಂಚಿ,ಜ.23- ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ಆರೋಗ್ಯ ಹದಗೆಟ್ಟ ಹಿನ್ನೆಲೆ ಯಲ್ಲಿ ಅವರನ್ನು ಏಮ್ಸ್‍ಗೆ ದಾಖಲು ಮಾಡಲಾಗಿದೆ. ಹೈಪರ್ ಟೆನ್ಷನ್, ಮಧುಮೇಹ, ಹೃದಯ, ಕಿಡ್ನಿ, ಸಮಸ್ಯೆಗಳಿಂದ ಬಳಲುತ್ತಿ ರುವ ಲಾಲುಪ್ರಸಾದ್ ಯಾದವ್ ಗುರುವಾರದಿಂದ ಉಸಿರಾಟದ ಸಮಸ್ಯೆ ಯನ್ನೂ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಸಲಾಗಿದ್ದ ಕೋವಿಡ್-19 ವರದಿಯೂ ನೆಗೆಟೀವ್ ಬಂದಿದೆ. ಆದರೆ ಶ್ವಾಸಕೋಶದ ಸೋಂಕು ತಗುಲಿದ್ದು, ಕಿಡ್ನಿ ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿರುವುದರ ಹಿನ್ನೆಲೆಯಲ್ಲಿ ಡಯಾಲಿಸಿಸ್ ಕೂಡ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

 

Translate »