ಇಬ್ಬರ ಮೇಲೆ ದಾಳಿ ನಡೆಸಿದ್ದ ಹೆಣ್ಣು ಹುಲಿ ಸುರಕ್ಷಿತ ಸೆರೆ
ಮೈಸೂರು

ಇಬ್ಬರ ಮೇಲೆ ದಾಳಿ ನಡೆಸಿದ್ದ ಹೆಣ್ಣು ಹುಲಿ ಸುರಕ್ಷಿತ ಸೆರೆ

July 4, 2022

ಮೈಸೂರು,ಜು.3(ಎಂಟಿವೈ)-ಇಬ್ಬರ ಮೇಲೆ ದಾಳಿ ನಡೆಸಿ ಆತಂಕಉಂಟು ಮಾಡಿದ್ದ ಹುಲಿಯನ್ನುಅರಣ್ಯ ಇಲಾಖಾ ಸಿಬ್ಬಂದಿ ನಡೆಸಿದ ವ್ಯವಸ್ಥಿತ ಕಾರ್ಯಾಚರಣೆಯಿಂದಾಗಿ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದ್ದು, ಪುನರ್ವಸತಿಗಾಗಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾಲಯದ ಪುನರ್ವ ಸತಿಕೇಂದ್ರಕ್ಕೆ ರವಾನಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ.

ಸೆರೆ ಹಿಡಿಯಲಾದ ಹುಲಿ ಹೆಣ್ಣು ಹುಲಿಯಾಗಿದ್ದು, ಸುಮಾರು 10 ವರ್ಷ ವಯಸ್ಸಿನದ್ದಾಗಿದೆ. ಆರಂಭದಲ್ಲಿ ಹೆಡಿಯಾಲ ಅರಣ್ಯ ವಲಯದಲ್ಲಿದ್ದ ಈ ಹುಲಿ 2014ರಿಂದ 2022ರವರೆಗೆ ಗೋಪಾಲಸ್ವಾಮಿಬೆಟ್ಟ ವಲಯದಲ್ಲಿ ಆವಾಸ ಸ್ಥಾನವಾಗಿ ಗುರುತಿಸಿಕೊಂಡಿತ್ತು. ವಯಸ್ಸಿನ ಕಾರಣ ಹಾಗೂ ಗಾಯಗೊಂಡಿದ್ದರಿಂದ ಭೇಟೆಯಾಡುವ ಶಕ್ತಿ ಕಳೆದುಕೊಂಡ ಕಾರಣಕಾಡಂಚಿನಗ್ರಾಮದತ್ತ ಬಂದುಜಾನುವಾರು ಬೇಟೆಯಾಡಲು ಬಂದಿದ್ದಾಗಇಬ್ಬರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.

ಗುಂಡ್ಲುಪೇಟೆತಾಲೂಕಿನ ಲಕ್ಕೀಪುರಗ್ರಾಮದ ಸರ್ವೇ ನಂ. 47ರಲ್ಲಿ ಶನಿವಾರ (ಜು.2) ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಹಸುವೊಂದರ ಮೇಲೆ ದಾಳಿ ಮಾಡಿದಾಗ, ಹಸು ರಕ್ಷಿಸಲು ಮುಂದಾದ ಗೋಪಾಲ ಪುರದ ನಿವಾಸಿ ಗವಿಯಪ್ಪಎಂಬುವರ ಮೇಲೆ ಹುಲಿ ದಾಳಿ ಮಾಡಿತ್ತು. ಘಟನೆ ಬಳಿಕ ಬಾಳೆತೋಟದಲ್ಲಿ ಅಡಗಿದ್ದ ಹುಲಿಯನ್ನುಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ನೀಡಿದಎಚ್ಚರಿಕೆಯನ್ನು ಗಾಳಿಗೆ ತೂರಿ ಫೋಟೋತೆಗೆಯಲು ಹೋಗಿದ್ದ ಗೋಪಾಲಪುರದರಾಜಶೇಖರ್(35) ಎಂಬಾತನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಈ ಎರಡೂ ಪ್ರಕರಣ ದಿಂದಎಚ್ಚೆತ್ತುಕೊಂಡಅರಣ್ಯಇಲಾಖೆಯ ಸಿಬ್ಬಂದಿ ಹುಲಿ ಅಡಗಿದ್ದಜಮೀನಿನ ಸುತ್ತರಾತ್ರಿಯಿಡೀ ಪಹರೆಕಾದುಘಟನೆ ಮರು ಕಳಿಸದಂತೆ ಕ್ರಮಕೈಗೊಂಡಿದ್ದರು.

ಗುರುತು ಪತ್ತೆ: ಶನಿವಾರ ದಾಳಿ ನಡೆಸಿದ ಬಳಿಕ ಬಾಳೆ ತೋಟದಲ್ಲಿಅಡಗಿದ್ದ ಹಾಗೂ ಕೊಂದಿದ್ದ ಹಸುವನ್ನುತಿನ್ನುವ ವೇಳೆ ತೆಗೆದಚಿತ್ರವನ್ನು ಬೆಂಗಳೂರಿನ ಟೈಗರ್ ಸೆಲ್‍ಗೆ ಕಳುಹಿ ಸಲಾಯಿತು. ಹುಲಿಯ ಮೈಮೇಲಿದ್ದ ಪಟ್ಟೆಯನ್ನು ಅವಲೋಕಿಸಿ ದಾಗ 2010ರಲ್ಲಿ ಹೆಡಿಯಾಲ ವಲಯದಲ್ಲಿ ಆವಾಸ ಸ್ಥಾನ ಗುರುತಿಸಿಕೊಂಡಿದ್ದ `ಬಂಡೀಪುರ 15-ಯು 420’ ಕೋಡ್‍ನಲ್ಲಿಕರೆಯುತ್ತಿದ್ದ ಹೆಣ್ಣುಲಿ ಎಂದುದೃಢಪಟ್ಟಿದೆ. ಆ ಹುಲಿಗೆ 10 ವರ್ಷಆಗಿರುವುದರಿಂದ ಬೇಟೆಯಾಡಲು ಶಕ್ತಿ ಕಳೆದುಕೊಂಡಿ ರುವುದರಿಂದಲೇಕಾಡಿಂದ ಗ್ರಾಮಗಳತ್ತ ಬಂದಿರುವುದನ್ನು ಖಚಿತಪಡಿಸಿಕೊಂಡು, ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲುಅರಣ್ಯ ಅಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.

ಹುಲಿ ಅಡಗಿದ್ದತೋಟಕ್ಕೆ ಹೊಂದಿಕೊಂಡಂತೆಇರುವ ಗೋಪಾಲ ಪುರ ಹಾಗೂ ಲಕ್ಕೀಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆಅನಗತ್ಯವಾಗಿ ಮನೆಯಿಂದ ಹೊರಬರದಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದರು. ಅಲ್ಲದೆ, ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇದಸರಾ ಆನೆ ಅಭಿಮನ್ಯು, ಸಾಕಾನೆ ಶ್ರೀಕಂಠ ನೊಂದಿಗೆ ಎಸ್‍ಟಿ ಪಿಎಫ್ ಹಾಗೂ ಅರಣ್ಯ ಸಿಬ್ಬಂದಿ ತಂಡಕಾರ್ಯಾಚರಣೆ ಆರಂಭಿಸಿತ್ತು. ಪಶುವೈದÀ್ಯರಾದಡಾ.ಮಿರ್ಜಾ ವಾಸಿಂ, ಡಾ.ಮುಜೀಬ್‍ರೆಹಮಾನ್ ನೇತೃತ್ವದÀಲ್ಲಿಎರಡುತಂಡ ಹುಲಿ ಇರುವ ಸ್ಥಳ ಗುರುತಿಸಿ ಪ್ರತ್ಯೇಕ ದಿಕ್ಕಿನಲ್ಲಿ ಸಾಗಿ ಅರವಳಿಕೆ ಮದ್ದು ನೀಡುವಲ್ಲಿ ಯಶಸ್ವಿಯಾದರು. ಸಮತಟ್ಟಾದ ಪ್ರದೇಶವಾಗಿದ್ದರಿಂದ ಹಾಗೂ ದಟ್ಟ ಪೊದೆಗಳು ಇಲ್ಲದಕಾರಣಕಾರ್ಯಾಚರಣೆಗೆಅಡ್ಡಿಯಾಗಲಿಲ್ಲ.

ಇದರಿಂದಕಾರ್ಯಾಚರಣೆ ಆರಂಭಿಸಿದ ಎರಡೂವರೆಗಂಟೆಯಲ್ಲೇ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಸೆರೆ ಸಿಕ್ಕ ಬಳಿಕ ಲಕ್ಕೀಪುರದಿಂದ ಮೇಲು ಕಾಮನಗಳ್ಳಿ ಬಳಿ ಇರುವಎಸ್‍ಟಿ ಪಿಎಫ್‍ಕ್ವಾರ್ಟಸ್‍ಗೆತರಲಾಯಿತು. ಬಳಿಕ ಮಂಪರಿ ನಿಂದ ಹೊರ ಬರಲು ಹುಲಿಗೆ ಚಿಕಿತ್ಸೆ ನೀಡಲಾಯಿತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹುಲಿಗೆ ಕಾಲು, ಭುಜದ ಹಿಂಭಾಗ, ಹೊಟ್ಟೆಯ ಭಾಗ, ಬಾಲದ ಬಳಿ ಗಂಭೀರವಾದಗಾಯವಾಗಿರುವುದುಕಂಡು ಬಂತು. ಅಲ್ಲದೆ, 2 ಹಲ್ಲುಗಳು ವಯೋಸಹಜವಾಗಿ ಸವೆದಿರುವುದರಿಂದ ಬೇಟೆಯಾಡುವ ಶಕ್ತಿ ಕಳೆದುಕೊಂಡಿ ದ್ದರಿಂದಲೇಕಾಡಂಚಿನ ಗ್ರಾಮಗಳ ಬಳಿ ಮೇಯುತ್ತಿದ್ದ ಜಾನುವಾರುಗಳನ್ನು ಭೇಟೆಯಾಡಲು ಮುಂದಾಗಿತ್ತುಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ್ದ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್‍ಕಾರ್ಯಾಚರಣೆ ವೀಕ್ಷಿಸಲು ಮೊಕ್ಕಾಂ ಹೂಡಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಡಾ.ರಮೇಶ್‍ಕುಮಾರ್, ಎಸಿಎಫ್ ನವೀನ್, ಆರ್‍ಎಫ್‍ಓ ನವೀನ್‍ಕುಮಾರ್ ಸೇರಿದಂತೆಇನ್ನಿತರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎಸ್‍ಟಿಪಿಎಫ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »