ಪ್ರಧಾನಿ ಕಚೇರಿಉನ್ನತಅಧಿಕಾರಿ ಹೆಸರಲ್ಲಿ ಡಿಸಿಗೆ ಕರೆ ಮಾಡಿದ ವಂಚಕ
ಚಾಮರಾಜನಗರ

ಪ್ರಧಾನಿ ಕಚೇರಿಉನ್ನತಅಧಿಕಾರಿ ಹೆಸರಲ್ಲಿ ಡಿಸಿಗೆ ಕರೆ ಮಾಡಿದ ವಂಚಕ

July 4, 2022

ಚಾಮರಾಜನಗರ,ಜು.3- ಪ್ರಧಾನಮಂತ್ರಿಕಚೇರಿಯಅಧಿಕಾರಿಎಂದು ಹೇಳಿಕೊಂಡು ಚಾಮರಾಜನಗರಜಿಲ್ಲಾಧಿಕಾರಿಚಾರುಲತಾ ಸೋಮಲ್‍ಅವರಿಗೆ ವ್ಯಕ್ತಿಯೋರ್ವಕರೆ ಮಾಡಿ ಬಿಳಿಗಿರಿರಂಗನಬೆಟ್ಟದಲ್ಲಿ ವಾಸ್ತವ್ಯಕ್ಕೆಕೊಠಡಿಕಾಯ್ದಿರಿಸುವಂತೆ ಹೇಳಿದ ಬಗ್ಗೆ ಚಾಮರಾಜ ನಗರಟೌನ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಜಿಲ್ಲಾಧಿಕಾರಿಚಾರುಲತಾ ಸೋಮಲ್ ಅವ ರಿಗೆರಾವ್‍ಅವರ ಹೆಸರಿನಲ್ಲಿ ಜೂ.27ರಂದು ಕರೆ ಮಾಡಿದ ವ್ಯಕ್ತಿ, ತಾನುಗುಜರಾತ್‍ನ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಪ್ರಧಾನ ಮಂತ್ರಿಕಾರ್ಯಾಲಯದಲ್ಲಿಉನ್ನತಅಧಿಕಾರಿಯಾಗಿರುವುದಾಗಿ ಹೇಳಿದ್ದಾನೆ. ತಾನು ಜು.2ರಂದು ಕುಟುಂಬ ಸಮೇತ ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಿರುವುದಾಗಿ ತಿಳಿಸಿದ ಆತ, ತನ್ನ ವಾಸ್ತವ್ಯಕ್ಕೆಕೊಠಡಿ ಕಾಯ್ದಿರಿಸಿ, ಜಂಗಲ್ ಸಫಾರಿ, ಬಿಳಿಗಿರಿ ರಂಗನಬೆಟ್ಟದೇವಸ್ಥಾನದರ್ಶನ ಹಾಗೂ ದೊಡ್ಡಸಂಪಿಗೆ ಮರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿದ್ದಲ್ಲದೇ ವಾಟ್ಸಾಪ್ ಸಂದೇಶವನ್ನೂಕೂಡ ರವಾನಿಸಿದ್ದಾನೆ. ಆತನ ಹುದ್ದೆ ಬಗ್ಗೆ ಕೇಳಿದರೆ ಅದುಗೌಪ್ಯವಾಗಿರುವುದಾಗಿ ತಿಳಿಸಿದ್ದಾನೆ. ಆತನ ಮಾತಿನ ಶೈಲಿ ಬಗ್ಗೆ ಅನುಮಾನಗೊಂಡು ಮೊಬೈಲ್ ವಿವರವನ್ನು ಪರಿಶೀಲಿಸಿದಾಗ ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದುಕಂಡು ಬಂದಿದೆ. ಗಣ್ಯ ವ್ಯಕ್ತಿಗಳ ಕಚೇರಿ ಮತ್ತು ಹುದ್ದೆ ಹೆಸರನ್ನುದುರುಪಯೋಗ ಪಡಿಸಿಕೊಂಡು ಮೋಸ ಮಾಡುತ್ತಿರುವಈತನ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನೀಡಿದದೂರನ್ನು ದಾಖಲಿಸಿ ಕೊಂಡಿರುವಚಾಮರಾಜನಗರಟೌನ್‍ಠಾಣೆ ಪೊಲೀಸರುತನಿಖೆ ಮುಂದುವರೆಸಿ ದ್ದಾರೆ. ಜು.2ರಂದುಕುಟುಂಬ ಸಮೇತರಾಗಿ ಬರುವುದಾಗಿ ತಿಳಿಸಿದ್ದ ವ್ಯಕ್ತಿ ಬರಲೇಇಲ್ಲ. ಅದರೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆಎಂದುಜಿಲ್ಲಾ ಎಸ್ಪಿ ಶಿವಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »