ಮತ್ತೆ ಮರುಕಳಿಸಲಿದೆ ಗುರುರಾಘವೇಂದ್ರ ವೈಭವ
ಮೈಸೂರು

ಮತ್ತೆ ಮರುಕಳಿಸಲಿದೆ ಗುರುರಾಘವೇಂದ್ರ ವೈಭವ

May 8, 2020

ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನರ್ ಲಾಂಛನದಲ್ಲಿ ಅನಿತಾ ಪಟ್ಟಾಭಿರಾಮ್ ಹಾಗೂ ಡಾ.ಎಂ.ಆರ್. ಪಟ್ಟಾಭಿರಾಮ್ ಅವರು ನಿರ್ಮಿಸಿದ್ದ ಮಂತ್ರಾಲಯ ಗುರುಗಳ ಜೀವನ, ಮಹಿಮೆ ಕುರಿತಾದ ಕಥಾಹಂದರ ಹೊಂದಿದ್ದ ಗುರು ರಾಘವೇಂದ್ರ ವೈಭವ ಎಂಬ ಭಕ್ತಿಪ್ರಧಾನ ಧಾರಾವಾಹಿ ಮೇ 5ರ ಬೆ.7ರಿಂದ 8ರವರೆಗೆ ಸುವರ್ಣ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿದೆ.

ಸುಮಾರು 500ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರಾವಾಹಿ ಎಂಬ ಹೆಗ್ಗಳಿಕೆಯೂ ಈ ಧಾರಾವಾಹಿಗಿದೆ. ಆಗಿನ ಕಾಲಕ್ಕೆ ಸಿನಿಮಾಗಳನ್ನು ಮೀರಿಸುವಂಥ ಅದ್ದೂರಿ ಸೆಟ್‍ಗಳಲ್ಲಿ ಇದರ ಚಿತ್ರೀಕರಣಗೊಂಡಿತ್ತು. ನೂರೈವತ್ತಕ್ಕೂ ಹೆಚ್ಚು ದೇವರ ನಾಮಗಳನ್ನು ಕಥೆಯಲ್ಲಿ ಬಳಸಿಕೊಂಡಿರುವುದು ಈ ಧಾರಾವಾಹಿಯ ಮತ್ತೊಂದು ವಿಶೇಷ.

ಬ.ಲ. ಸುರೇಶ್ ಅವರ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿಯಲ್ಲಿ ಹಿರಿಯ ನಟ ಶಿವರಾಮ್, ಶ್ರೀನಿವಾಸಮೂರ್ತಿ, ಪವಿತ್ರಾ ಲೋಕೇಶ್, ಪರೀಕ್ಷಿತ್, ರಮೇಶ್ ಭಟ್, ಲಕ್ಷ್ಮೀ ಹೆಗ್ಡೆ ಸೇರಿದಂತೆ ಹಲವಾರು ಹಿರಿಯ ಹಾಗೂ ಕಿರಿಯ ಕಲಾವಿದರು ಅಭಿನಯಿಸಿದ್ದರು.

Translate »