ಅ.೧ರಂದು ಸುವರ್ಣ ಸಿಂಹಾಸನ ಜೋಡಣೆ
ಮೈಸೂರು

ಅ.೧ರಂದು ಸುವರ್ಣ ಸಿಂಹಾಸನ ಜೋಡಣೆ

September 25, 2021

ಅರಮನೆ ಒಳಗೆ ಧಾರ್ಮಿಕ ಕಾರ್ಯಕ್ಕೆ ಭರದ ಸಿದ್ಧತೆ
ಅ.೭ರಂದು ಸಿಂಹದ ತಲೆ ಜೋಡಿಸಿದ ಬಳಿಕ ಖಾಸಗಿ ದರ್ಬಾರ್
ಅ.೩೧ರಂದು ಸಿಂಹಾಸನ ಬಿಚ್ಚಿಟ್ಟು, ಸ್ಟಾçಂಗ್ ರೂಂನಲ್ಲಿಡಲಾಗುತ್ತದೆ

ಮೈಸೂರು, ಸೆ.೨೪(ಎಂಟಿವೈ)-ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ಇನ್ನು ೧೩ ದಿನ ಮಾತ್ರವಿದ್ದು, ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯ ಕೇಂದ್ರಬಿAದುವಾದ `ಖಾಸಗಿ ದರ್ಬಾರ್’ಗಾಗಿ ಅ.೧ರಂದು ಬೆಳಗ್ಗೆ ಅಭಿಜಿನ್ ಲಗ್ನದಲ್ಲಿ ದರ್ಬಾರ್ ಹಾಲ್‌ನಲ್ಲಿ ಸಿಂಹಾ ಸನ ಹಾಗೂ ಭದ್ರಾಸನ ಜೋಡಿಸಲು ನಿರ್ಧರಿಸಲಾಗಿದೆ.

ದಸರಾ ಮಹೋತ್ಸವದಲ್ಲಿ ಅರಮನೆಯಲ್ಲಿ ನಡೆಯುವ ಕೆಲವು ಆಚರಣೆಗಳು ಪ್ರಮುಖವೆನಿಸಿದ್ದು, ಅದರಲ್ಲಿ ದರ್ಬಾರ್ ಹಾಲ್‌ನಲ್ಲಿ ನಡೆಯುವ ಖಾಸಗಿ ದರ್ಬಾರ್ ಒಂದಾಗಿದೆ. ನವರಾತ್ರಿ ದಿನದಲ್ಲಿ ಖಾಸಗಿ ದರ್ಬಾರ್ ಜರು ಗಲಿದ್ದು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನದ ಮೇಲೆ ಆಸೀನರಾಗಿ ದರ್ಬಾರ್ ನಡೆಸುವ ಮೂಲಕ ರಾಜ ಮನೆತನದ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಾಲಿನ ದಸರಾ ಮಹೋತ್ಸವ ಅ.೭ರಿಂದ ೧೫ರವರೆಗೆ ನಡೆಯಲಿದ್ದು, ಅ.೧ರಂದು ಅರಮನೆ ನೆಲಮಾಳಿಗೆ ಯಲ್ಲಿ ಬಿಡಿಭಾಗಗಳಾಗಿ ಇಡಲಾಗಿರುವ ಸಿಂಹಾಸನ ಹಾಗೂ ಬೆಳ್ಳಿಯ ಭದ್ರಾಸನವನ್ನು ಖಾಸಗಿ ದರ್ಬಾರ್ ಹಾಲ್‌ಗೆ ಬಿಗಿ ಭದ್ರತೆಯಲ್ಲಿ ತಂದು, ವಿಧಿ-ವಿಧಾನದಲ್ಲಿ ಜೋಡಣೆ ಮಾಡಲಾಗುತ್ತದೆ. ಇದಕ್ಕಾಗಿ ಅ.೧ರಂದು ಮುಂಜಾನೆಯಿAದಲೇ ಅರಮನೆಯ ಕಲ್ಯಾಣ ಮಂಟಪದಲ್ಲಿ ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಲಿದೆ. ಅರಮನೆ ಪುರೋಹಿತರು ಹಾಗೂ ರಾಜಪುರೋಹಿತರು ವಿಶೇಷ ಪೂಜೆ, ಪೂರ್ಣಾಹುತಿ ನೆರವೇರಿಸಿದ ಬಳಿಕ ಅರಮನೆಯ ಸ್ಟಾçಂಗ್ ರೂಮ್‌ನಲ್ಲಿರುವ ಸಿಂಹಾಸನ ಹಾಗೂ ಭsÀದ್ರಾಸನದ ಬಿಡಿಭಾಗವನ್ನು ತಂದು ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ, ದೇವರ ಮನೆ ಬಳಿ ಭದ್ರಸಾನ ಜೋಡಣೆ ಮಾಡಲಾಗುತ್ತದೆ.
ಅರಮನೆಗೆ ಪ್ರವೇಶ ನಿರ್ಬಂಧ: ಅ.೧ರಂದು ಸಿಂಹಾಸನ ಜೋಡಣೆ ಮಾಡುವುದರಿಂದ ಅಂದು ಬೆಳಗ್ಗೆ ೮ ಗಂಟೆಯಿAದ ಮದ್ಯಾಹ್ನ ೩ ಗಂಟೆವರೆಗೆ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ, ಸಿಂಹಾಸನ ಬಿಚ್ಚಿಡುವ ಹಿನ್ನೆಲೆಯಲ್ಲಿ ಅ.೩೧ರಂದು ಬೆಳಗ್ಗೆ ೮ರಿಂದ ಮದ್ಯಾಹ್ನ ೧.೩೦ರವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ ನವರಾತ್ರಿ ಆರಂಭದ ದಿನವಾದ ಅ.೭ ಹಾಗೂ ಆಯುಧ ಪೂಜೆ ದಿನವಾದ ಅ.೧೪ರಂದು ಅರಮನೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯ ಜರುಗುವುದರಿಂದ ಆ ದಿನಗಳಂದು ಮಧ್ಯಾಹ್ನ ೩ ಗಂಟೆವರೆಗೂ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಜಂಬೂಸವಾರಿ ದಿನವಾದ ಅ.೧೫ರಂದು ದಿನವಿಡೀ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಚಾಮುAಡಿಬೆಟ್ಟದಲ್ಲಿ ದಸರೆಗೆ ಚಾಲನೆ: ಈ ಸಾಲಿನ ನಾಡಹಬ್ಬ ದಸರಾ ಮಹೋತ್ಸವವನ್ನು ಅ.೭ರಂದು ಬೆಳಗ್ಗೆ ೮.೧೫ರಿಂದ ೮.೪೫ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಗುತ್ತದೆ. ಅ.೧೫ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಜರುಗಲಿದ್ದು, ಅಂದು ಸಂಜೆ ೪.೩೬ ರಿಂದ ೪.೪೬ರೊಳಗೆ ಅರಮನೆ ಉತ್ತರ ದ್ವಾರದ ಬಳಿ ನಂದಿ ಪೂಜೆ ನೆರವೇರಿಸಲಾಗುತ್ತದೆ. ಸಂಜೆ ೫ ರಿಂದ ೫.೩೬ರೊಳಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಹಿತ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ದೊರಕಲಿದೆ. ಅರಮನೆಯ ಆವರಣದಲ್ಲೇ ಮೆರವಣ ಗೆ ನಡೆಸುವುದರೊಂದಿಗೆ ೨೦೨೧ನೇ ಸಾಲಿನ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Translate »