ಹಿಂದುಳಿದ ವರ್ಗಗಳ ಆಯೋಗದ ವರದಿ ನಂತರ ಮೀಸಲಾತಿ ನಿರ್ಧಾರ
ಮೈಸೂರು

ಹಿಂದುಳಿದ ವರ್ಗಗಳ ಆಯೋಗದ ವರದಿ ನಂತರ ಮೀಸಲಾತಿ ನಿರ್ಧಾರ

September 25, 2021

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ರಾಷ್ಟಿçÃಯ ಶಿಕ್ಷಣ ನೀತಿ ರಾಜ್ಯದಲ್ಲಿ ಅನುಷ್ಠಾನ ಶತಸಿದ್ಧ
ಸಾಧಕ-ಬಾಧಕ ಪರಿಶೀಲಿಸಿದ ನಂತರ ಮೀಸಲಾತಿ

ಬೆಂಗಳೂರು, ಸೆ. ೨೪(ಕೆಎಂಶಿ)- ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಮೀಸಲಾತಿ ಪರಿಷ್ಕರ ಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ವಿಧಾನಸಭೆ ಯಲ್ಲಿಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ನೀಡಿದ್ದ ಲ್ಲದೆ, ರಾಷ್ಟಿçÃಯ ಶಿಕ್ಷಣ ನೀತಿ ಯನ್ನು ಸರ್ಕಾರ ಅನುಷ್ಠಾನ ಗೊಳಿಸುವುದು ಶತಸಿದ್ಧ ಎಂದು ಸ್ಪಷ್ಟಪಡಿಸಿದರು.
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಧರಣ ನಡೆಸುವ ಸಂದರ್ಭದಲ್ಲೇ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಅವರು, ಸುಪ್ರೀಂಕೋರ್ಟ್ ಮೀಸಲಾತಿ ಹಂಚಿಕೆ ವಿಷಯವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ನ್ಯಾಯಾಲಯ ನೀಡಿರುವ ಮಾರ್ಗಸೂಚಿ ಸರ್ಕಾರದ ಕೈಸೇರಿಲ್ಲ, ವರದಿ ಬಂದ ನಂತರ ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ಪರಿಷ್ಕರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಮೀಸಲಾತಿ ಪ್ರಮಾಣ ಏರಿಕೆ ಮತ್ತು ಇತರೆ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂಬ ಹಲವು ಸಮುದಾಯಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ, ಇದರಲ್ಲಿ ತಪ್ಪಿಲ್ಲ, ತಾಂತ್ರಿಕವಾಗಿ ಯುಗ ಬೆಳೆಯುತ್ತಿದ್ದಂತೆ ಅತೀ ಹಿಂದು ಳಿದ ಸಮುದಾಯದವರೂ ಶಿಕ್ಷಣ ಪಡೆದಿದ್ದಾರೆ, ಆ ಸಮುದಾಯಗಳೂ ಉದ್ಯೋಗದಲ್ಲಿ ಮೀಸಲಾತಿ ಕೇಳುತ್ತಿವೆ. ಮಹಾರಾಷ್ಟçದಲ್ಲಿ ಮರಾಠಿಗರ ಮೀಸಲಾತಿ ಹೆಚ್ಚಳ ಮಾಡಿರು ವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು,

ಸುಪ್ರೀಂ ಕೋರ್ಟ್ ಈ ಮೀಸಲಾತಿಯನ್ನು ರದ್ದುಪಡಿಸಿದೆ. ನಾವು ಯಾವುದೇ ಸಮುದಾಯಕ್ಕೂ ಮೀಸಲಾತಿ ನೀಡಬೇಕಾದರೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕು, ಈ ಬಗ್ಗೆ ಸರ್ಕಾರ ಅಧ್ಯಯನ ನಡೆಸಲಿದೆ, ಈಗಲೂ ನಾವು ಸಕಾರಾತ್ಮಕವಾಗಿದ್ದೇವೆ.

ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂಬ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿ ಬಗ್ಗೆ ಪ್ರಸ್ತಾಪ ಮಾಡಿದ ಮುಖ್ಯಮಂತ್ರಿ, ಕಾಂಗ್ರೆಸ್ ಆಡಳಿತ ವಿದೇಶಿ ಶಿಕ್ಷಣವನ್ನು ಅನುಷ್ಠಾನಗೊಳಿಸಿದೆ, ನಾವು ಸ್ವದೇಶಿ ಶಿಕ್ಷಣ ನೀಡಿ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ.

ಕಾಂಗ್ರೆಸ್ ವಿರೋಧ ಮಾಡುತ್ತದೆ ಎಂದು ಹೊಸ ನೀತಿ ಜಾರಿಯಿಂದ ಹಿಂದೆ ಸರಿಯುವುದಿಲ್ಲ, ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ, ಮುಂದೆ ಉದ್ಯೋಗಾವ ಕಾಶ ದೊರಕಿಸುವಲ್ಲಿ ಈ ನೀತಿ ಉತ್ತೇಜನಕಾರಿಯಾಗಿದೆ. ಶಿಕ್ಷಣದ ಗುಣಮಟ್ಟ ಏರಿಕೆಯಾದರೆ, ಮಕ್ಕಳಿಗೆ ಉದ್ಯೋಗಾವಕಾಶವೂ ಹೆಚ್ಚುತ್ತದೆ. ನಿರುದ್ಯೋಗ ಸಮಸ್ಯೆ ಪರಿಹರಿಸುವ, ನಮ್ಮ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹೊಸ ನೀತಿ ಜಾರಿಯಾಗುತ್ತಿದೆ. ನೀವು (ಕಾಂಗ್ರೆಸ್‌ನವರು) ಏನೇ ಹೇಳಿಕೊಳ್ಳಿ, ಆರ್‌ಎಸ್‌ಎಸ್, ಬಿಜೆಪಿ, ಹಿಡನ್ ಅಜೆಂಡಾ ಎಂದರೂ ಪರವಾಗಿಲ್ಲ ನಾವು ಮಾತ್ರ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿ ವಿದ್ಯಾರ್ಥಿಗಳಲ್ಲಿ ಭರವಸೆಯ ಬೆಳಕು ಮೂಡಿಸುತ್ತೇವೆ ಎಂದರು.

Translate »