ಪರಿಶಿಷ್ಟರ ಭೂ ಪರಭಾರೆ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಗೆ ಸರ್ಕಾರ ಬದ್ಧ
Uncategorized, ಮೈಸೂರು

ಪರಿಶಿಷ್ಟರ ಭೂ ಪರಭಾರೆ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಗೆ ಸರ್ಕಾರ ಬದ್ಧ

April 15, 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
ಪರಿಶಿಷ್ಟರ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ಕ್ರಮ

ಬೆಂಗಳೂರು, ಏ.೧೪(ಕೆಎಂಶಿ)- ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿ ಸಿಎಲ್ ಕಾಯ್ದೆ)ಗೆ ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಆದೇಶವಾಗಿದ್ದು, ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನ ಗೊಳಿಸಲು ಸರ್ಕಾರ ಸದಾ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಡಾ. ಬಿ.ಆರ್.ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆ ಅಂಗ ವಾಗಿ ವಿಧಾನಸೌಧದಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ|| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಎಸ್‌ಸಿಎಸ್‌ಟಿ ವರ್ಗಗಳಿಗೆ ೭೫ ಯೂನಿಟ್ ಗಳ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ನೀಡಲಾಗುವುದು. ಭೂಮಿ ಒಡೆತನ ಯೋಜನೆ ಯಡಿ ೨೦ ಲಕ್ಷ ಧನಸಹಾಯ. ೭೫ ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ. ೫೦ ಸಾವಿರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವಂತೆ ವಸತಿ ನಿಲಯಗಳ ಕ್ಲಸ್ಟರ್‌ಗಳನ್ನು ನಿರ್ಮಿಸ ಲಾಗುವುದು. ಈ ಯೋಜನೆಯಡಿ ೧೦೦೦ ಕೊಠಡಿಗಳ ಬಹುಮಹಡಿ ವಿದ್ಯಾರ್ಥಿ ನಿಲಯ ಸಮುಚ್ಛಯಗಳನ್ನು ೨೮೦ ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುವುದು ಎಂದರು. ದುರ್ಬಲ ವರ್ಗಗಳ ಅಭ್ಯುದಯಕ್ಕೆ ಶಿಕ್ಷಣ, ಉದ್ಯೋಗ, ಸಬಲೀಕರಣ ಬದಲಾವಣೆಯ ಮೆಟ್ಟಿಲುಗಳಾಗಿವೆ. ೧೦೦ ಅಂಬೇಡ್ಕರ್ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು. ೧೦ ಸಾವಿರ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗುತ್ತಿದ್ದ ೫೦ ಸಾವಿರ ಮಿತಿಯ ಸಹಾಯಧನವನ್ನು ೧ ಲಕ್ಷ ರೂ. ಏರಿಸಲಾಗಿದೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದರು. ಮಹಿಳೆಯರ ಆರ್ಥಿಕ ಸಬಲೀ ಕರಣಕ್ಕಾಗಿ ೫೦೦ ಕೋಟಿ ರೂ. ವಿಶೇಷ ಕಾರ್ಯಕ್ರಮ, ೫೦ ಕೋಟಿ ರೂ. ಎಸ್‌ಸಿ, ಎಸ್‌ಟಿ ಮಹಿಳಾ ಸಂಘಗಳಿಗೆ ಅನುದಾನ ನೀಡಿ, ಅಭಯಂಕರ್ ಬ್ಯಾಂಕ್ ಜೋಡಿಸ ಲಾಗುತ್ತದೆ. ಪೌರಕಾರ್ಮಿಕರಿಗೆ ರಿಸ್ಕ್ ಅಲೊಯೆನ್ಸ್ ೨೦೦೦ ರೂ.ಗಳನ್ನು ಪ್ರಥಮ ಬಾರಿಗೆ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತರು, ಅಡುಗೆ ಕೆಲಸ ಮಾಡು ವವರ ಮಾಸಾಶನ ಹೆಚ್ಚಿಸಲಾಗಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಬಡಜನರಿಗೆ ಆರೋಗ್ಯ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಅಲೆಮಾರಿ ಜನಾಂಗಕ್ಕೆ ವಸತಿ ನಿಲಯ ಸೌಲಭ್ಯ ನೀಡಲಾಗುವುದು ಎಂದರು.

Translate »