ಕೊರೊನಾ ವಿರುದ್ಧದ ಹೋರಾಡುವ ಆರೋಗ್ಯ, ಮುಂಚೂಣಿ  ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ವಿಶೇಷ ಅಭಿಯಾನ
ಮೈಸೂರು

ಕೊರೊನಾ ವಿರುದ್ಧದ ಹೋರಾಡುವ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ವಿಶೇಷ ಅಭಿಯಾನ

January 23, 2022

ಮೈಸೂರು,ಜ.22(ಎಂಟಿವೈ)-ಕೊರೊನಾ ಮೂರನೇ ಅಲೆ ಆರಂಭದಲ್ಲೇ ಹಲವು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಹಾಗಾಗಿ ಸರ್ಕಾರದ ನಿರ್ಧಾರದಂತೆ ಆರೋಗ್ಯ ಕಾರ್ಯ ಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಹಾಕುವ ವಿಶೇಷ ಅಭಿಯಾನಕ್ಕೆ ಮೈಸೂರಲ್ಲಿ ಇಂದು ಚಾಲನೆ ನೀಡಲಾಗಿದೆ.

ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದು 9 ತಿಂಗಳಾಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಹಾಗೂ 60 ವರ್ಷ ಮೇಲ್ಪಟ್ಟ ವರಿಗೆ ಜ.10ರಿಂದ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 34,06,521 ಇದ್ದು, ಅವರಲ್ಲಿ ಮೊದಲ ಹಂತದಲ್ಲಿ 44,602 ಆರೋಗ್ಯ ಕಾರ್ಯಕರ್ತರು, ಇತರೆ 39,370 ಮುಂಚೂಣಿ ಕಾರ್ಯಕರ್ತರು, 60 ವರ್ಚ ಮೇಲ್ಪಟ್ಟ 3,95,000 ಮಂದಿ ಸೇರಿದಂತೆ 4,78,972 ಮಂದಿಗೆ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ ಎರಡನೇ ಡೋಸ್ ಪಡೆದು 9 ತಿಂಗಳಾಗಿರುವ 23 ಸಾವಿರ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿದ್ದು, ಅವರಲ್ಲಿ ಜ.10 ರಿಂದ 21ರವರೆಗೆ 12 ಸಾವಿರ ಮಂದಿಗೆ ಲಸಿಕೆ ನೀಡ ಲಾಗಿದೆ. ಇನ್ನು 11 ಸಾವಿರ ಮಂದಿ ಆರೋಗ್ಯ ಕಾರ್ಯ ಕರ್ತರು ಬೂಸ್ಟರ್ ಡೋಸ್ ಪಡೆದಿಲ್ಲ. ಈ ಹಿನ್ನೆಲೆ ಯಲ್ಲಿ ಕೊರೊನಾ 3ನೇ ಅಲೆಯಿಂದ ಆರೋಗ್ಯ ಕಾರ್ಯ ಕರ್ತರನ್ನು ರಕ್ಷಿಸುವ ಸಲುವಾಗಿ ಬೂಸ್ಟರ್ ಡೋಸ್ ನೀಡುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕೆ.ಆರ್.ಆಸ್ಪತ್ರೆಯಲ್ಲಿ ಲಸಿಕೆÉ: ಆರೋಗ್ಯ ಕಾರ್ಯಕರ್ತ ರಿಗೆ ಬೂಸ್ಟರ್ ಡೋಸ್ ನೀಡುವ ವಿಶೇಷ ಅಭಿಯಾನಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಕೆ.ಆರ್. ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಈ ವೇಳೆ ಖುದ್ದು ಡಿಹೆಚ್‍ಓ ಅವರೇ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾದರು. ಕೆ.ಆರ್.ಆಸ್ಪತ್ರೆ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಇನ್ನು 800 ಮಂದಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳ ಬೇಕಾಗಿದೆ. ಇಂದು 350ಕ್ಕೂ ಹೆಚ್ಚು ಮಂದಿಗೆ ಬೂಸ್ಟರ್ ಡೋಸ್ ನೀಡಲು ಉದ್ದೇಶಿಸಲಾಗಿತ್ತು.

35 ತಂಡ ರಚನೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಕೆಲವು ದಿನಗಳಿಂದ ಆರೋಗ್ಯ ಕಾರ್ಯ ಕರ್ತರು, ಮುಂಚೂಣಿ ಸಿಬ್ಬಂದಿಗಳಿಗೆ ಸೋಂಕು ಕಾಣಿಸಿ ಕೊಂಡಿದೆ. ಟೆಕ್ನಿಕಲ್ ಕಮಿಟಿ ನೀಡಿರುವ ವರದಿ ಹಾಗೂ ಎಚ್ಚರಿಕೆ ಸಂದೇಶದ ಅನುಸಾರ ಮುಂದಿನ 3-4 ದಿನದ ನಂತರ ಕೊರೊನಾ ಸೋಂಕಿತರ ಸಂಖ್ಯೆ ಯಲ್ಲಿ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸೋಂಕಿ ತರ ಸೇವೆಗೆ ಆರೋಗ್ಯ ಕಾರ್ಯಕರ್ತರು ಸಮರ್ಥ ರಾಗಿರಬೇಕು. ಜಿಲ್ಲೆಯಲ್ಲಿ 2ನೇ ಡೋಸ್ ಪಡೆದು 9 ತಿಂಗಳಾಗಿರುವ ಇನ್ನು 11 ಸಾವಿರ ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ 35 ತಂಡ ರಚಿಸ ಲಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ರುವ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿದಂತೆ 144 ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡಲು ತಂಡ ವನ್ನು ಕಳುಹಿಸಲಾಗಿದೆ. ಎಲ್ಲಾ ಆರೋಗ್ಯ ಕಾರ್ಯ ಕರ್ತರು ಹಾಗೂ ಮೂಂಚೂಣಿ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

170 ಕೇಂದ್ರಗಳಲ್ಲೂ ಬೂಸ್ಟರ್ ಡೋಸ್: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಮೈಸೂರು ನಗರ ಹಾಗೂ ತಾಲೂಕು ಕೇಂದ್ರದಲ್ಲಿ ಒಟ್ಟು 170 ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಈ ಸಂದರ್ಭ ದಲ್ಲಿ ಕೆ.ಆರ್.ಆಸ್ಪತ್ರೆಯ ಡೀನ್ ಡಾ. ಹೆಚ್.ಎನ್. ದಿನೇಶ್, ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡ ಸ್ವಾಮಿ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಮಂಜು ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »